Advertisement
ಕೋವಿಡ್ ಸಂಕಷ್ಟದಲ್ಲಿ ಕರುಳು ಹಿಂಡುವ ಕರುಣಾಜನಕ ಕಥೆಗಳನ್ನು ನಾವು ಕೇಳಿದ್ದೇವೆ. ಅಪ್ಪ-ಅಮ್ಮನನ್ನು ಕಳೆದುಕೊಂಡು ರೋಧಿಸುವ ಪುಟ್ಟ ಮಕ್ಕಳ ಕಣ್ಣೀರು ಎಂಥಾ ಕಠೋರ ಮನಸ್ಸನ್ನು ಕರಗಿಸಬಹುದು. ಇಡೀ ಕುಟುಂಬವನ್ನೇ ಕಳೆದುಕೊಂಡ ಕೆಲ ವ್ಯಕ್ತಿಗಳಿಗೆ ಮುಂದಿನ ದಾರಿ ಕಾಣದ್ದಷ್ಟು ದುಃಖ ಆವರಿಸಿಕೊಂಡಿರಬಹುದು.
Advertisement
ಕಳೆದ ವರ್ಷ ತನ್ನ ಮಗಳ ಹುಟ್ಟುಹಬ್ಬಕ್ಕೆ ಹಾಗೂ ಹಬ್ಬದ ಶಾಪಿಂಗ್ ಗೆ ಇಟ್ಟಿದ್ದ ಹಣವನ್ನು, ಈ ಬಾರಿ ನಾವು ಶಾಪಿಂಗ್ ಮಾಡುವುದು ಬೇಡಯೆಂದು ಹೇಳಿದ್ದರು. ಇದನ್ನು ಹೇಳಿದ ಬಳಿಕ ತಮಗೆ ತಿಳಿದಿದ್ದ ರಾಯಗಢದ ವಾಜೆ ತಾಲುಕಿನ ದ್ಯಾನ್ ಯನಿ ವಿದ್ಯಾಲಯದ ಪ್ರಾಂಶುಪಾಲರ ಬಳಿ ಮಗಳ ಹುಟ್ಟು ಹಬ್ಬವನ್ನು ಶಾಲಾ ಮಕ್ಕಳ ಜತೆ ಆಚರಿಸುವುದಾಗಿ ಹೇಳಿದಾಗ, ಪ್ರಾಂಶುಪಾಲರು ಖುಷಿಯಿಂದಲೇ ಒಪ್ಪಿದ್ದರು. ಆದರೆ ಕೋವಿಡ್ ಕಾರಣದಿಂದ ನಿರ್ಬಂಧವಿದ್ದ ಪಯಣದಿಂದ ತೆಗೆದಿಟ್ಟಿದ್ದ ಹಣವನ್ನು ಕೊಡುತ್ತಾರೆ.
ಅದೊಂದು ದಿನ ರಾಯಗಢದ ಶಾಲೆಗೆ ಹೋಗುವ ರೆಹಾನಾ ಅಲ್ಲಿನ ಮಕ್ಕಳ ಶಿಸ್ತನ್ನು ಕಂಡು ಖುಷಿಗೊಳ್ಳುತ್ತಾರೆ. ಆದರೆ ಅದರಲ್ಲಿ ಬಹುತೇಕರು ಬಡತನದ ಹಿನ್ನೆಲೆಯಿಂದ ಬಂದವರಾಗಿದ್ದರು. ಕೆಲ ಮಕ್ಕಳ ಕಾಲಿನಲ್ಲಿ ಚಪ್ಪಲಿಯೂ ಇರುವುದಿಲ್ಲ. ಇದನ್ನು ಕಂಡ ರೆಹಾನಾನವರ ಮನಸ್ಸಿಗೆ ತುಂಬಾ ಬೇಜಾರು ಆಗುತ್ತದೆ. ಆ ಕ್ಷಣವೇ ಅವರಿಗೆ ತಾನು ಈ ಮಕ್ಕಳ ಆರೈಕೆಗಾಗಿ ಏನಾದರೂ ಮಾಡಬೇಕೆನ್ನುವ ಯೋಚನೆ ಬರತೊಡಗುತ್ತದೆ.
ಆ ವೇಳೆ ಬರುವ ಯೋಚನೆಯೇ ಮಕ್ಕಳನ್ನು ದತ್ತು ಪಡೆಯುವುದು. ಅದಿವಾಸಿ ಸಮುದಾಯದ ಮಕ್ಕಳನ್ನು ಕಂಡು ಅವುಗಳಿಗೆ ಏನಾದರೂ ಮಾಡುವ ಕಾರಣದಿಂದ ದತ್ತು ಪಡೆಯುವ ನಿರ್ಧಾರವನ್ನು ಶಾಲಾ ಪ್ರಾಂಶುಪಾಲರ ಜತೆ ಚರ್ಚಸುತ್ತಾರೆ. ಅಲ್ಲಿಂದ ಒಪ್ಪಿದ ಮೇಲೆ ಮನೆಯಲ್ಲಿ ಗಂಡ ಸೇರಿದಂತೆ ಎಲ್ಲರೂ ರೆಹಾನಾಳ ನಿರ್ಧಾರವನ್ನು ಬೆಂಬಲಿಸುತ್ತಾರೆ.
ರೆಹಾನಾ ಒಟ್ಟು 50 ಅದಿವಾಸಿ ಮಕ್ಕಳನ್ನು ಶಾಲೆಯಿಂದ ದತ್ತು ಪಡೆಯುತ್ತಾರೆ. ಅವರನ್ನು ಶಿಕ್ಷಿತರನ್ನಾಗಿ ಮಾಡಿ, ಉತ್ತಮ ನಾಗರಿಕರನ್ನಾಗಿ ರೂಪಿಸುವುದು ಅವರ ಉದ್ದೇಶ ಎನ್ನುತ್ತಾರೆ ರೆಹಾನಾ.
ಇಷ್ಟು ಮಾತ್ರವಲ್ಲದೆ ರೆಹೆನಾ ಕೋವಿಡ್ ಸಂಕಷ್ಟದಲ್ಲಿ ಮಾಸ್ಕ್, ಆಕ್ಸಿಜನ್, ರಕ್ತದಾನವನ್ನು ನೀಡಲು ನೆರವಾಗಿದ್ದಾರೆ. ಲಸಿಕೆಯನ್ನು ಪಡೆಯಲು ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ರೆಹಾನಾ ಮಾಡುತ್ತಿದ್ದಾರೆ. ರೆಹಾನಾರ ಮನೋಭಾವ ಅರಿತ ಪೊಲೀಸ್ ಕಮಿಷನರ್ ಹೇಮಂತ್ ನಗ್ರಲೆ ಆಕೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿದ್ದರು. ಮುಂಬೈನ ಒಂದು ಸಣ್ಣ ಮನೆಯಲ್ಲಿರುವ ರೆಹಾನಾ, ಯಾವ ಹೊತ್ತಿನಲ್ಲೂ ಜನರ ಸಹಾಯಕ್ಕೆ ಸ್ಪಂದಿಸುತ್ತಾರೆ. ಇವರ ಮಾನವೀಯ ಗುಣದಿಂದ ಇವರನ್ನು ಮುಂಬಯಿಯ ‘ಮದರ್ ಥರೇಸಾ’ ಎಂದು ಕರೆಯುತ್ತಾರೆ.
-ಸುಹಾನ್ ಶೇಕ್