Advertisement

ವಿವೇಕ್ ಅಗ್ನಿಹೋತ್ರಿ ವಿರುದ್ಧ ದೂರು ದಾಖಲು: ಭೋಪಾಲಿಗಳ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದೇನು?

03:46 PM Mar 26, 2022 | Team Udayavani |

ನವದೆಹಲಿ: ಭೋಪಾಲಿಗಳ ವಿರುದ್ಧ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಬಾಲಿವುಡ್ ನಲ್ಲಿ ತೆರೆಕಂಡಿದ್ದ ದ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಉತ್ತರಾಖಂಡ್ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್..ಯಾರೀಕೆ ರಿತು ಖಂಡೂರಿ?

ಏನಿದು ವಿವಾದ?

ಸಂದರ್ಶನವೊಂದರಲ್ಲಿ ಅಗ್ನಿಹೋತ್ರಿ ಅವರು, ಬೋಪಾಲಿಗಳನ್ನು ಸಲಿಂಗಕಾಮಿಗಳು ಎಂದು ಭಾವಿಸುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಪಿಆರ್ ಮೆನೇಜರ್ ರೋಹಿತ್ ಪಾಂಡೆ (27ವರ್ಷ) ಎಂಬಾತ ದೂರನ್ನು ದಾಖಲಿಸಿದ್ದಾನೆ.

ಮಧ್ಯಪ್ರದೇಶದ ಬೋಪಾಲಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಅಗ್ನಿಹೋತ್ರಿ ವಿರುದ್ಧ ತಕ್ಷಣವೇ ಎಫ್ ಐಆರ್ ದಾಖಲಿಸಬೇಕೆಂದು ಪಾಂಡೆ ವಿನಂತಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

ತಮ್ಮ ನವಾಬಿ ಸಂಸ್ಕೃತಿಯ ಉತ್ಕಟ ಆಸೆಯಿಂದಾಗಿ ಬೋಪಾಲಿಗಳು ಸಲಿಂಗಕಾಮಿಗಳಾಗಿರುತ್ತಾರೆ ಎಂದು ಭಾವಿಸುವುದಾಗಿ ಅಗ್ನಿಹೋತ್ರಿ ಸಂದರ್ಶನದಲ್ಲಿ ಹೇಳಿದ್ದರು. ದ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ಅಗ್ನಿಹೋತ್ರಿ ಅವರ ಸಂದರ್ಶನದ ತುಣುಕು ವೈರಲ್ ಆದ ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

“ ನಾನೂ ಕೂಡಾ ಭೋಪಾಲ್ ಮೂಲದವನು, ಆದರೆ ನಾನು ನನ್ನನ್ನು ಭೋಪಾಲಿ ಎಂದು ಕರೆದುಕೊಳ್ಳುವುದಿಲ್ಲ. ಯಾಕೆಂದರೆ ಅದೊಂದು ನಿರ್ದಿಷ್ಟ ಅರ್ಥವನ್ನು ಹೊಂದಿದೆ. ಒಂದು ವೇಳೆ ಯಾರಾದರು ಬೋಪಾಲಿ ಎಂದು ಕರೆದರೆ ಸಾಮಾನ್ಯವಾಗಿ ಆ ವ್ಯಕ್ತಿ ಸಲಿಂಗಕಾಮಿ ಎಂಬ ಅರ್ಥ ಹೊಂದಿದೆ ಎಂದು ಸಂದರ್ಶನದಲ್ಲಿ ತಿಳಿಸಿದ್ದರು.

ವಿವೇಕ್ ಅಗ್ನಿಹೋತ್ರಿ ಅವರ ದ ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆಯಾದ ನಂತರ ಅವರು ಹೆಚ್ಚು ಜನಪ್ರಿಯಗೊಂಡಿದ್ದಾರೆ. ಕಾಶ್ಮೀರ್ ಫೈಲ್ಸ್ ಈಗಾಗಲೇ ಬಾಕ್ಸಾಫೀಸ್ ನಲ್ಲಿ ಭರ್ಜರಿ ಹಣ ಗಳಿಸಿದೆ. ಕೆಲವು ರಾಜ್ಯಗಳಲ್ಲಿ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕೆ ತೆರಿಗೆ ಮುಕ್ತಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next