Advertisement

ಸಿಸಿಬಿ ಪೊಲೀಸರ ವಿರುದ್ಧ ಶಿಸ್ತು ಕ್ರಮ ,ವಿವಿಧ ಠಾಣೆಗಳಿಗೆ ವರ್ಗಾವಣೆ: ಪೊಲೀಸ್‌ ಆಯುಕ್ತ

11:20 PM Jan 30, 2021 | Team Udayavani |

ಮಂಗಳೂರು: ನಗರದ ಅಪರಾಧ ಪತ್ತೆ ದಳದ (ಸಿಸಿಬಿ) ಕೆಲವು ಪೊಲೀಸರು ಕರ್ತವ್ಯದ ಅವಧಿಯಲ್ಲಿಯೇ ರೆಸ್ಟೋರೆಂಟ್‌ವೊಂದರಲ್ಲಿ ಮದ್ಯ ಸೇವನೆ ಮಾಡುತ್ತಿದ್ದರೆನ್ನಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಈ ಬಗ್ಗೆ ಮಂಗಳೂರು ಪೊಲೀಸ್‌ ಆಯುಕ್ತರು ಪೊಲೀಸರ ವಿರುದ್ಧ ಶಿಸ್ತುಕ್ರಮ ತೆಗೆದುಕೊಂಡಿದ್ದಾರೆ.

Advertisement

ಮದ್ಯಸೇವನೆ ಮಾಡಿದ್ದ ಮೂವರು ಎಎಸ್‌ಐ ಮತ್ತು ಐವರು ಹೆಡ್‌ಕಾನ್‌ಸ್ಟೆಬಲ್‌ರನ್ನು ಬೇರೆ ಬೇರೆ ಠಾಣೆಗಳಿಗೆ ವರ್ಗಾಯಿಸಿದ್ದಾರೆ. ಎಂಟು ಮಂದಿ ಪೊಲೀಸರು ಬೆಟ್ಟಿಂಗ್‌ ಪ್ರಕರಣದ ಆರೋಪಿ ಜತೆ ಊಟ ಮಾಡಿರುವುದು, ಆತನಿಗೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿರುವುದು ಗಮನಕ್ಕೆ ಬಂದಿದೆ. ಇದು ತಪ್ಪು. ಹೀಗಾಗಿ ಪೊಲೀಸರ ವಿರುದ್ಧ ಇಲಾಖಾ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಯುಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ:ಬಂಗಾರ ಪಲ್ಕೆ ಫಾಲ್ಸ್‌ ದುರಂತ : 6ನೇ ದಿನದ ಶೋಧ ಕಾರ್ಯವೂ ವಿಫ‌ಲ, ಸ್ಥಳಕ್ಕೆ ಎಸ್‌ಪಿ ಭೇಟಿ

ಮೂರು ದಿನಗಳ ಹಿಂದೆ 8 ಮಂದಿ ಸಿಸಿಬಿ ಪೊಲೀಸರು ತೊಕ್ಕೊಟ್ಟು ಸಮೀಪದ ಕುತ್ತಾರಿನ ರೆಸ್ಟೋರೆಂಟ್‌ ಒಂದರ ಎದುರು ಸರಕಾರಿ ವಾಹನವನ್ನು ನಿಲ್ಲಿಸಿ ಮದ್ಯಸೇವನೆ ಜತೆ ಊಟ ಮಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಪೊಲೀಸರೊಂದಿಗೆ ಅಪರಾಧ ಹಿನ್ನೆಲೆಯ ವ್ಯಕ್ತಿ ಕೂಡ ಇದ್ದ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next