Advertisement

ಮಂಗಳೂರು: ಸಿನಿಮೀಯ ರೀತಿಯಲ್ಲಿ ಕಳ್ಳನ ಸೆರೆ ಹಿಡಿದ ಪೊಲೀಸ್;ವಿಡಿಯೋ

01:06 PM Jan 13, 2022 | Team Udayavani |

ಮಂಗಳೂರು : ಕಳ್ಳನೊಬ್ಬನನ್ನು ಪೊಲೀಸ್ ಒಬ್ಬರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಸೆರೆ ಹಿಡಿದ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.

Advertisement

ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್ ಕದ್ದು ಓಟ ಕಿತ್ತ ಕಳ್ಳನನ್ನು ಪೊಲೀಸ್ ಸಿಬ್ಬಂದಿ ಬೆನ್ನಟ್ಟಿ ನೆಲಕ್ಕೆ ಕೆಡವಿ ಹಿಡುಯುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್ ಸಿಬ್ಬಂದಿಗೆ ಸಾರ್ವಜನಿಕರು ಸಹಕಾರ ನೀಡಿದ್ದಾರೆ. ಘಟನೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಘಟನೆ ವಿವರ

ಜ. 12 ರಂದು ಮಧ್ಯಾಹ್ನ ನೆಹರೂ ಮೈದಾನದ ಪರಿಸರದಲ್ಲಿ ಇಬ್ಬರು ವ್ಯಕ್ತಿಗಳು ಬೊಬ್ಬೆ ಹೊಡೆದು ಓಡುತ್ತಾ ಪರಿಸರದ ಸಾರ್ವಜನಿಕರಿಗೆ ಆತಂಕ ಹಾಗೂ ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಾ ಪರಾರಿಯಾಗಲು ಯತ್ನಿಸಿದಾಗ ಪೊಲೀಸ್ ಕಮಿಷನರ್ ಕಛೇರಿಯಲ್ಲಿದ್ದ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿಗಳು ಅವರನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದ್ದಾರೆ.

Advertisement

ಬಿಹಾರಿ ಮೂಲದ ವ್ಯಕ್ತಿಯ ಮೊಬೈಲ್ ಹಾಗೂ ಇತರ ವಸ್ತುಗಳನ್ನು ಮೂವರು ವ್ಯಕ್ತಿಗಳು ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿಸಿದಾಗ ಅಲ್ಲೇ ಇದ್ದ ಆರೋಪಿ ಶಮಂತ್‌ ( 20 ) ನನ್ನು ವಶಕ್ಕೆ ಪಡೆದು , ಅವನ ಮುಖಾಂತರ ಆತನ ಇತರ ಸಹಚರರ ಮಾಹಿತಿ ಪಡೆದು , ತಕ್ಷಣವೇ ರೈಲ್ವೆ ನಿಲ್ದಾಣ ಹಾಗೂ ಹಂಪನಕಟ್ಟೆ ಪರಿಸರದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ , ಇನ್ನೊಬ್ಬ ಆರೋಪಿ ಹರೀಶ್ ಪೂಜಾರಿ ( 32 ) ನನ್ನು ವಶಕ್ಕೆ ಪಡೆಯಲಾಯಿತು . ಆತನ ಜೊತೆ ಇದ್ದ ಇನ್ನೊಬ್ಬ ಆರೋಪಿ ರಾಜೇಶ್ ಎಂಬವನು ಪರಾರಿಯಾಗಿರುತ್ತಾನೆ.

ಪರಾರಿಯಾಗಿರುವ ಆರೋಪಿಯ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ದರೋಡೆ ನಡೆಸಿದ ಸೊತ್ತುಗಳಾದ ಸ್ಯಾಮ್‌ಸಂಗ್ ಮೊಬೈಲ್ ಫೋನನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಾದ ಹರೀಶ್ ಪೂಜಾರಿ ನೀರುಮಾರ್ಗದ ಕುಡುಪುವಿನ ಪಾಲನೆ ನಿವಾಸಿಯಾಗಿದ್ದು, ಶಮಂತ್‌ ಅತ್ತಾವರದ ಬಾಬುಗುಡ್ಡೆ ನಿವಾಸಿ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next