Advertisement

ಪತ್ನಿ ಕೊಲೆ ಮಾಡಿದ್ದ ಪೇದೆ ಬಂಧನ

03:17 PM Nov 04, 2022 | Team Udayavani |

ಯಲಬುರ್ಗಾ: ಪತ್ನಿಯನ್ನು ಅಗಳಕೇರಾ ಹತ್ತಿರದ ತುಂಬಿ ಹರಿಯುತ್ತಿರುವ ಕಾಲುವೆಗೆ ನೂಕಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ತಾಲೂಕಿನ ಕಲಭಾವಿ ಗ್ರಾಮದ ಪೊಲೀಸ್‌ ಪೇದೆ ಹನುಮೇಶ ಮೇಟಿಯನ್ನು ಭಾನಾಪುರ ಕ್ರಾಸ್‌ ಬಳಿ ಗುರುವಾರ ಬೆಳಗ್ಗಿನ ಜಾವ ಬಂಧಿಸಿದ್ದಾರೆ.

Advertisement

ತನ್ನ ಪುತ್ರಿ ರೇಷ್ಮಾಳಿಗೆ ವರದಕ್ಷಿಣೆ ಕಿರುಕುಳ ನೀಡಿ ಶಿವಪುರ ಕೆರೆಗೆ ನೂಕಿದ್ದಾರೆ ಎಂದು ಮೃತಳ ತಂದೆ ನ. 1ರಂದು ತಾಲೂಕಿನ ಬೇವೂರು ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ನ. 3ರಂದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಪೊಲೀಸ್‌ ಪೇದೆ ಹನುಮೇಶ ಮೇಟಿಯನ್ನು ಬಂ ಧಿಸಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಫೆಬ್ರವರಿ 2022ರಲ್ಲಿ ಪೊಲೀಸ್‌ ಪೇದೆ ಹನುಮೇಶ ಮೇಟಿ ಜತೆ ರೇಷ್ಮಾಳ ವಿವಾಹ ಆಗಿತ್ತು. ಮದುವೆ ವೇಳೆ 11 ತೊಲೆ ಚಿನ್ನ, 2.5 ಲಕ್ಷ ವರದಕ್ಷಿಣೆ ನೀಡಿ, ಇನ್ನೂ ಒಂದು ಲಕ್ಷ ಹಣ ಬಾಕಿ ಉಳಿಸಿಕೊಂಡಿದ್ದರು. ವರದಕ್ಷಿಣೆ ಹಣ ಬಾಕಿ ಇದ್ದಿದ್ದರಿಂದ ಹನುಮೇಶ ಹಾಗು ಆತನ ಸಂಬಂಧಿಗಳು ರೇಷ್ಮಾಳಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ದೀಪಾವಳಿ ಹಬ್ಬಕ್ಕೆ ಆಕೆಯನ್ನು ತವರು ಮನೆಗೆ ಕರೆಯಲು ಬಂದರೆ ಕಳುಹಿಸಿ ಕೊಡದೆ ಅ. 22ರಂದು ರಾತ್ರಿ ಹತ್ತು ಗಂಟೆಯಿಂದ ಅ. 23 ಬೆಳಗಿನ ಜಾವ 7:30ರವೆರೆಗೆ ಯಾವುದೋ ಜಾಗದಲ್ಲಿ ಕೂಡಿ ಹಾಕಿ ವರದಕ್ಷಿಣೆ ಹಾಗೂ ಚಿನ್ನ ತರುವಂತೆ ಕಿರುಕುಳ ಕೊಟ್ಟು, ಹೊಡಿದ್ದಾರೆ. ಅಲ್ಲದೇ ನ.1ರಂದು ಶಿವಪುರ ಕೆರೆಯಲ್ಲಿ ಹಾಕಿ ಕೊಲೆ ಮಾಡಿದ್ದಾರೆ ಎಂದು ಮೇತಳ ತಂದೆ ದೂರು ದಾಖಲಿಸಿದ್ದರು.

ಎರಡು ದಿನದೊಳಗೆ ಕೊಲೆಗಾರರನ್ನು ಬಂಧಿ ಸಿದ್ದಕ್ಕೆ ಎಸ್ಪಿ ಅರುಣಾಂಗ್ಷು ಗಿರಿ ಪೊಲೀಸ್‌ ಅಧಿಕಾರಿಗಳಿಗೆ ಹಾಗು ಸಿಬ್ಬಂದಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next