Advertisement

ಬೆದರಿಕೆಯೊಡ್ಡಿದ ಫಾದರ್‌ ವಜಾ

06:00 AM Jul 31, 2018 | Team Udayavani |

ತಿರುವನಂತಪುರಂ: ಜಾಲಂಧರ್‌ನ ಬಿಷ‌ಪ್‌ ವಿರುದ್ಧ ಅತ್ಯಾಚಾರ ಪ್ರಕರಣದ ದಾಖಲಿಸಿರುವ ಕ್ರೈಸ್ತ ಸನ್ಯಾಸಿನಿಯ ಕುಟುಂಬದ ಸದಸ್ಯರಿಗೆಗೆ ತಿರುವನಂತಪುರದ ಪಾದ್ರಿಯೊಬ್ಬರು ದೂರವಾಣಿ ಕರೆ ಮಾಡಿ, ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿರುವ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಫಾದರ್‌ ಜೇಮ್ಸ್‌ರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ.

Advertisement

ಸನ್ಯಾಸಿನಿ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದ ಫಾದರ್‌ ಜೇಮ್ಸ್‌, ಪ್ರಕರಣ ಹಿಂಪಡೆಯದಿದ್ದರೆ ಜೀವ ಭೀತಿ ಉಂಟಾಗಬಹುದು ಎಂದೂ ಹೇಳಿದ್ದು, ಪ್ರಕರಣ ಹಿಂಪಡೆದರೆ ಭೂಮಿ ಹಾಗೂ ಮನೆಯ ಆಮಿಷ ಒಡ್ಡಿದ್ದರು. ಜಲಂಧರದ ಬಿಶಪ್‌ ಫ್ರಾಂಕೋ ಮುಲಕ್ಕಲ್‌ 2014 ರಿಂದ 2016ರ ಅವಧಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂಬುದಾಗಿ 46 ವರ್ಷದ ಕ್ರೈಸ್ತ ಸನ್ಯಾಸಿನಿ ದೂರು ನೀಡಿದ್ದರು. ಈ ದೂರು ಹಿಂಪಡೆಯುವಂತೆ ಫಾದರ್‌ ಜೇಮ್ಸ್‌ ದೂರವಾಣಿ ಕರೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next