Advertisement

‘ಕ್ರೀಡಾ ಸ್ಫೂರ್ತಿ ಪ್ರತಿಬಿಂಬಿಸಲು ಕ್ರೀಡಾಕೂಟ ಪೂರಕ’

11:49 AM Dec 30, 2017 | Team Udayavani |

ಮಹಾನಗರ: ಕ್ರೀಡಾ ಸ್ಫೂರ್ತಿಯ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರತಿಬಿಂಬಿಸಲು ಪೊಲೀಸ್‌ ಕ್ರೀಡಾ ಕೂಟ ಪೂರಕ. ಪೊಲೀಸರು ಕುಟುಂಬದ ಜತೆ ಸಂಪೂರ್ಣವಾಗಿ ಇದರಲ್ಲಿ ಭಾಗಿಯಾಗಿ ಸಂಭ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಹೇಳಿದರು. 

Advertisement

ಅವರು ನಗರ ಪೊಲೀಸ್‌ ಮತ್ತು ಜಿಲ್ಲಾ ಪೊಲೀಸ್‌ ಇದರ ಆಶ್ರಯದಲ್ಲಿ ಆರಂಭಗೊಂಡ 3 ದಿನಗಳ ವಾರ್ಷಿಕ ಪೊಲೀಸ್‌ ಕ್ರೀಡಾಕೂಟ 2017 ಉದ್ಘಾಟಿಸಿದರು. ಪೊಲೀಸ್‌ ಇಲಾಖೆ ಇತರ ಎಲ್ಲ ಇಲಾಖೆಗಳಿಗಿಂತ ಶಿಸ್ತಿನಿಂದ ಕೆಲಸ ಮಾಡುತ್ತಿದೆ. ಜಿಲ್ಲಾಡಳಿತ ಪೊಲೀಸ್‌ ಇಲಾಖೆಯ ಜತೆ ಪೂರ್ಣ ಸಹಕಾರ ನೀಡಲಿದೆ ಎಂದರು. 

ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌.ಸುರೇಶ್‌ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದ ಸಿಡಿ ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ ಸ್ವಾಗತಿಸಿದರು. ಡಿಸಿಪಿ ಹನುಮಂತರಾಯ ವಂದಿಸಿದರು. ಬದ್ರಿಯಾ ಕಾಲೇಜಿನ ಉಪನ್ಯಾಸಕ ಮೊಯಿದಿನ್‌ ಕುಂಞಿ ಮತ್ತು ಟ್ರಾಫಿಕ್‌ ಪೂರ್ವ ಠಾಣೆಯ ಎಎಸ್‌ಐ ಹರಿಶ್ಚಂದ್ರ ಬೈಕಂಪಾಡಿ ನಿರ್ವಹಿಸಿದರು.

ಪ್ರತಿಜ್ಞಾ ವಿಧಿ ಬೋಧನೆ
7 ಪೊಲೀಸ್‌ ತಂಡಗಳು ಆಕರ್ಷಕ ಪಥ ಸಂಚಲನದಲ್ಲಿ ಭಾಗವಹಿಸಿದ್ದವು. ರುದ್ರೇಶ್‌ ಪ್ರತಿಜ್ಞಾ ವಿಧಿ ಬೋಧಿಸಿದರು. ಉರ್ವ ಪೊಲೀಸ್‌ ಠಾಣೆಯ ಸಿಬಂದಿ ಮಂಜುನಾಥ್‌ ಕ್ರೀಡಾ ಜ್ಯೋತಿಯೊಂದಿಗೆ ಆಗಮಿಸಿದರು. 1500 ಮೀಟರ್‌ ಓಟದೊಂದಿಗೆ ಕ್ರೀಡಾಕೂಟ ಆರಂಭಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next