Advertisement

ಆಟೋ ಚಾಲಕರಿಗೆ ಪೊಲೀಸರ ಎಚ್ಚರಿಕೆ

10:15 PM May 05, 2020 | Sriram |

ಉಡುಪಿ: ಉಡುಪಿಯ ಪ್ರಮುಖ ಜಂಕ್ಷನ್‌ಗಳಲ್ಲಿ ಮಂಗಳವಾರ ಪೊಲೀಸರು ಆಟೋ ಚಾಲಕರಿಗೆ ಬಿಸಿಮುಟ್ಟಿಸಿದರು.ಉಡುಪಿಯಲ್ಲಿ ಆಟೋ ಚಾಲಕರು ಒಳಗೊಂದು ಶರ್ಟ್‌ ಧರಿಸಿ, ಹೊರಗೆ ಖಾಕಿ ಶರ್ಟ್‌ ತೆರೆದ ರೀತಿ ಇರುವು ದರ ಬಗ್ಗೆ ಚಾಲಕರಿಗೆ ಎಚ್ಚರಿಕೆ ನೀಡಲಾಯಿತು.

Advertisement

ಮೋಟಾರು ವಾಹನ ಕಾಯ್ದೆಯ ಪ್ರಕಾರ ಆಟೋ ಚಾಲಕರು ಕೇವಲ ಒಂದು ಖಾಕಿ ಶರ್ಟ್‌ ಮಾತ್ರ ಧರಿಸಿರಬೇಕು. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸರು ಯತ್ನಿಸುತ್ತಿದ್ದಾರೆ. ನಿಯಮ ಉಲ್ಲಂಘಿಸಿದವರನ್ನು ರಿಕ್ಷಾದಿಂದ ಇಳಿಸಿ ಬಟನ್‌ ಹಾಕಿಸಿ ಪೊಲೀಸರು ಪಾಠ ಹೇಳಿ ಕಳುಹಿಸುತ್ತಿದ್ದಾರೆ. ನಗರದ ಅಂಬಲಪಾಡಿ ಜಂಕ್ಷನ್‌, ಕಲ್ಸಂಕ ಜಂಕ್ಷನ್‌, ಮಣಿಪಾಲ, ಡಯಾನ ಸರ್ಕಲ್‌ ಸಿಟಿ ಬಸ್‌ ನಿಲ್ದಾಣಗಳಲ್ಲಿ ಓಡಾಡುವ ಆಟೋ ರಿಕ್ಷಾ ಚಾಲಕರಿಗೆ ಈ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ.

500 ರೂ. ದಂಡ
ಆಟೋ ಚಾಲಕರು ಜನಸೇವೆ ಮಾಡುವವರು. ಕಾನೂನು ಉಲ್ಲಂಘನೆ ಮಾಡುವವರ ಮೇಲೆ ದಂಡ ಹಾಕುತ್ತಿದ್ದೇವೆ. ಇವಿಷ್ಟೇ ಅಲ್ಲದೆ ಹೆಲ್ಮೆಟ್‌, ಸೀಟ್‌ ಬೆಲ್ಟ್‌ಗಳನ್ನು ಹಾಕದವರಿಗೆ ದಂಡ ಹಾಕಿದ್ದೇವೆ. ಬುಧವಾರದಿಂದ ಡಬಲ್‌ ಶರ್ಟ್‌ ಹಾಕುವ ರಿಕ್ಷಾ ಚಾಲಕರಿಗೆ 500 ರೂ. ದಂಡ ವಿಧಿಸಲಾಗುವುದು.
-ಅಬ್ದುಲ್‌ ಖಾದರ್‌,
ಟ್ರಾಫಿಕ್‌ ಎಸ್‌ಐ

Advertisement

Udayavani is now on Telegram. Click here to join our channel and stay updated with the latest news.

Next