Advertisement

ಜನರಿಗೆ NDRF ಮೇಲೆ ಗೌರವ ಇದೆ, ಆದರೆ ಪೊಲೀಸ್ ಇಲಾಖೆ ಮೇಲೆ ಯಾಕಿಲ್ಲ? ಮೋದಿ

04:42 PM Jul 31, 2021 | Team Udayavani |

ನವದೆಹಲಿ:ರಾಷ್ಟ್ರೀಯ ಹಿತಾಸಕ್ತಿಯ ಮೂಲಕ ಪೊಲೀಸರ ಕ್ರಮದ ಬಗ್ಗೆ ಮಾಹಿತಿ ನೀಡಬೇಕು. ಅಷ್ಟೇ ಅಲ್ಲ ಯುವ ಪೊಲೀಸ್ ಅಧಿಕಾರಿಗಳು ಪೊಲೀಸ್ ಇಲಾಖೆಯ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಇದನ್ನೂ ಓದಿ:ಕೋಟ : ಮನೆಗಳ್ಳತನ, ದೇಗುಲ ಕಳ್ಳತನದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳ ಬಂಧನ

ಅವರು ಶನಿವಾರ(ಜುಲೈ 31) ಹೈದರಾಬಾದ್ ಪೊಲೀಸ್ ಅಕಾಡೆಮಿಯಲ್ಲಿ ಐಪಿಎಸ್ ಪ್ರೊಬೇಷನ್ ಅಧಿಕಾರಿಗಳ ಜತೆ ಮಾತನಾಡುತ್ತ ಸಲಹೆ ನೀಡಿದರು. ಈ ವೃತ್ತಿಯಲ್ಲಿ ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಿ ಅದು ದೇಶದ ಹಿತಾಸಕ್ತಿಯನ್ನು ಹೊಂದಿರಬೇಕು ಎಂದರು.

ನಿಮ್ಮ ಎಲ್ಲಾ ಕ್ರಮಗಳು ದೇಶ ಮೊದಲು ಎಂಬಂತೆ ಪ್ರಭಾವಿತಗೊಳಿಸಬೇಕು ಎಂದು ಪ್ರಧಾನಿ ಮೋದಿ ವರ್ಚುವಲ್ ಸಂವಹನ ಕಾರ್ಯಕ್ರಮದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ ಕೂಡಾ ಭಾಗಿಯಾಗಿದ್ದರು.

ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(ಎನ್ ಡಿಆರ್ ಎಫ್)ದ ಕಾರ್ಯವನ್ನು ಶ್ಲಾಘಿಸಿರುವ ಮೋದಿ, ಈ ಗೌರವವನ್ನು ಪೊಲೀಸ್ ಇಲಾಖೆಗೆ ಪಡೆಯಲು ಸಾಧ್ಯವಿಲ್ಲವೇ ಎಂದು ಅಚ್ಚರಿ ವ್ಯಕ್ತಪಡಿಸಿದರು.

Advertisement

ಪ್ರವಾಹದಂತಹ ಸಂದರ್ಭದಲ್ಲಿ ಒಂದು ವೇಳೆ ಎನ್ ಡಿಆರ್ ಎಫ್ ಬಮದರೆ ನಮ್ಮನ್ನು ರಕ್ಷಿಸುತ್ತಾರೆ ಎಂದು ಜನರು ನಂಬಿದ್ದಾರೆ. ತಮ್ಮ ಕೆಲಸದಿಂದಲೇ ಎನ್ ಡಿಆರ್ ಎಫ್ ವಿಶ್ವಾಸ ಮತ್ತು ಗೌರವ ಗಳಿಸಿದೆ. ಎನ್ ಡಿಆರ್ ಎಫ್ ನಲ್ಲೂ ಹಲವು ಮಂದಿ ಪೊಲೀಸರಿದ್ದಾರೆ. ಆದರೆ ಎನ್ ಡಿಆರ್ ಎಫ್ ರೀತಿ ಪೊಲೀಸ್ ಪಡೆ ಯಾಕೆ ಗೌರವ ಗಳಿಸಿಲ್ಲ? ಉತ್ತರ ನಿಮಗೇ ಗೊತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಪೊಲೀಸ್ ಇಲಾಖೆಯ ಬಗ್ಗೆ ಜನರಿಗೆ ನಕರಾತ್ಮಕ ಭಾವನೆ ಇರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೋವಿಡ್ ಸಂದರ್ಭದಲ್ಲಿ ಈ ಭಾವನೆ ಬದಲಾಗಿದೆ, ಅದಕ್ಕೆ ಕಾರಣ ಪೊಲೀಸರು ಆ ಸಂದರ್ಭದಲ್ಲಿ ನಿರ್ವಹಿಸಿದ ಕಾರ್ಯದಿಂದಾಗಿ ಆಗಿದೆ. ಆದರೆ ಮತ್ತೆ ಜನರಲ್ಲಿ ಪೊಲೀಸರ ಕುರಿತು ನಕರಾತ್ಮಕ ಭಾವನೆ ಇದೆ. ಈ ಭಾವನೆಯನ್ನು ಬದಲಾಯಿಸುವ ಹೊಣೆಗಾರಿಕೆ ನಿಮ್ಮದಾಗಿದೆ. ನೀವು ವ್ಯವಸ್ಥೆಯನ್ನೇ ಬದಲಾಯಿಸುತ್ತೀರೋ ಅಥವಾ ವ್ಯವಸ್ಥೆಯಲ್ಲಿ ಬದಲಾಣೆ ತರುತ್ತೀರೋ ಎಂಬುದಕ್ಕೆ ನಿಮ್ಮ ಅಧಿಕಾರ ಮತ್ತು ನೈತಿಕತೆ ಮುಖ್ಯವಾಗುತ್ತದೆ ಎಂದು ಪ್ರಧಾನಿ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next