Advertisement

ಅಥ್ಲೀಟ್ ಮಾರಿಯಾ ಒಲಿಂಪಿಕ್ಸ್ ಬೆಳ್ಳಿ ಪದಕ ಹರಾಜಿಗಿಟ್ಟಿದ್ದೇಕೆ ?

05:07 PM Aug 20, 2021 | Team Udayavani |

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಪೋಲ್ಯಾಂಡ್‌ನ ಅಥ್ಲೀಟ್ ಮಾರಿಯಾ ಆ್ಯಂಡ್ರೆಜಿಕ್ ಆ ಪದಕವನ್ನು ಹರಾಜಿಗಿಟ್ಟಿದ್ದಾರೆ. ಅವರ ಈ ನಿರ್ಧಾರಕ್ಕೆ ಕಾರಣ ಎಂಟು ತಿಂಗಳ ಒಂದು ಪುಟ್ಟ ಮಗು.

Advertisement

ಮಿಲೋಝೆಕ್ ಮಲಿಸಾ ಹೆಸರಿನ ಮಗು ಹೃದಯ ಸಂಬಂಧಿ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಕೋಟ್ಯಂತರ ರೂಪಾಯಿ ಅಗತ್ಯವಿದೆ. ಮಗುವಿನ ಪೋಷಕರು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಹಾಯ ಧನ ನೀಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಮಾರಿಯಾ ತನ್ನ ಚೊಚ್ಚಲ ಪದಕವನ್ನು ಹರಾಜಿಗಿಟ್ಟು, ಅದರಿಂದ ಬಂದಂತಹ ಹಣವನ್ನು ಮಗುವಿನ ಚಿಕಿತ್ಸೆಗೆ ಭರಿಸಿದ್ದಾರೆ.

ಮಾರಿಯಾ ಅವರು ಹರಾಜಿಗಿಟ್ಟಿರುವ ಬೆಳ್ಳಿ ಪದಕವನ್ನು ಪೋಲಿಶ್ ಸೂಪರ್ ಮಾರ್ಕೆಟ್ ಚೈನ್ ಝಬ್ಕಪೊಲ್ಸ್ಕ ಗೆದ್ದಿದೆ.  92,96,281 ರೂ. ಮೌಲ್ಯದ ಬಿಡ್ಡನ್ನು ಝಬ್ಕಪೊಲ್ಸ್ಕ ಗೆದ್ದಿದೆ. ಆದರೆ ಮಾನವೀಯತೆ ಮೆರೆದಿರುವ ಮಾರ್ಕೆಟಿಂಗ್ ಸಂಸ್ಥೆ, ಬಿಡ್ ಮೂಲಕ ಗೆದ್ದಿರುವ ಆ್ಯಂಡ್ರೆಜಿಕ್ ಬೆಳ್ಳಿ ಪದಕವನ್ನು ಮತ್ತೆ ಅವರಿಗೆ ವಾಪಸ್ ಮಾಡಲು ಬಯಸಿದೆ. ಬಿಡ್‌ನ ಹಣವನ್ನು ಮಿಲೋಝಕ್‌ ಚಿಕಿತ್ಸೆಗೆ ಬಳಸಲು ಝಬ್ಕಪೊಲ್ಸ್ಕ ನಿರ್ಧರಿಸಿದೆ.

ಇನ್ನು ಜಾವೆಲಿನ್ ಥ್ರೋ ಪಟು ಮಾರಿಯಾ ಆ್ಯಂಡ್ರೆಜಿಕ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಬಾರಿಗೆ ಒಲಿಂಪಿಕ್ಸ್ ಪದಕ ಗೆದ್ದಿದ್ದರು. ಮತ್ತೊಂದು ವಿಶೇಷ ಏನೆಂದರೆ ಮಾರಿಯಾ ಅವರು ಕ್ಯಾನ್ಸರ್ ವಿರುದ್ಧ ಗೆಲುವು ಪಡೆದವರು.

Advertisement

Udayavani is now on Telegram. Click here to join our channel and stay updated with the latest news.

Next