Advertisement
“ಸಿ’ ಬಣದ ಇನ್ನೊಂದು ಪಂದ್ಯದಲ್ಲಿ ಮೆಕ್ಸಿಕೊ ತಂಡವು ಸೌದಿ ಅರೇಬಿಯ ತಂಡದೆದುರು 2-1 ಗೋಲುಗಳಿಂದ ಜಯ ಸಾಧಿಸಿತ್ತು. ಇದರಿಂದಾಗಿ ಪೋಲೆಂಡ್ ಮತ್ತು ಮೆಕ್ಸಿಕೊ ತಲಾ ನಾಲ್ಕು ಅಂಕ ಗಳಿಸಿದಂತಾಯಿತು. ಆದರೆ ಉತ್ತಮ ಗೋಲು ಅಂತರದ ಆಧಾರದಲ್ಲಿ ಪೋಲೆಂಡ್ ಬಣದ ಎರಡನೇ ತಂಡವಾಗಿ ಅಂತಿಮ 16ರ ಸುತ್ತಿಗೇರಿತು.
Related Articles
Advertisement
ಗೆಲುವಿನ ಗುರಿಯೊಂದಿಗೆ ಆಡಿದ್ದ ಅರ್ಜೆಂಟೀನ ಆಟಗಾರರು ಹೆಚ್ಚಿನ ಸಮಯ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ್ದರು. 67ನೇ ನಿಮಿಷದಲ್ಲಿ ಎಂಝೊ ಫೆರ್ನಾಂಡಿಸ್ ಅವರ ಉತ್ತಮ ಪಾಸ್‌ನಿಂದ ಜೂಲಿಯನ್ ಅಲ್ವಾರೆಜ್ ಯಾವುದೇ ತಪ್ಪು ಮಾಡದೇ ಗೋಲು ದಾಖಲಿಸಿ ಮುನ್ನಡೆಯನ್ನು 2-0ಕ್ಕೇರಿಸಿದರು.
ಗೆದ್ದರೂ ಹೊರಬಿದ್ದ ಮೆಕ್ಸಿಕೊ:
ಲುಸೈಲ್: ವಿಶ್ವಕಪ್‌ನ ಫುಟ್‌ಬಾಲ್ ಕೂಟದ ಅಂತಿಮ 16ರ ಸುತ್ತಿಗೇರುವ ಗುರಿಯೊಂದಿಗೆ ತೀವ್ರ ಪೈಪೋಟಿಯ ಹೋರಾಟ ನೀಡಿದ ಮೆಕ್ಸಿಕೊ ತಂಡವು “ಸಿ’ ಬಣದ ಪಂದ್ಯದಲ್ಲಿ ಸೌದಿ ಅರೇಬಿಯ ತಂಡವನ್ನು 2-1 ಗೋಲುಗಳಿಂದ ಸೋಲಿಸಲು ಯಶಸ್ವಿಯಾಯಿತು. ಆದರೆ ಉತ್ತಮ ಗೋಲು ಅಂತರದ ಆಧಾರದಲ್ಲಿ ಪೋಲೆಂಡ್ ದ್ವಿತೀಯ ತಂಡವಾಗಿ ಅಂತಿಮ 16ರ ಸುತ್ತಿಗೇರಿದ ಕಾರಣ ಮೆಕ್ಸಿಕೊ ಆಘಾತ ಅನುಭವಿಸಿತು.
ಹೆನ್ರಿ ಮಾರ್ಟಿನ್ ಮತ್ತು ಲೂಯಿಸ್ ಚಾವೇಜ್ ಅವರ ಅಮೋಘ ಗೋಲುಗಳಿಂದ ಮೆಕ್ಸಿಕೊ ತಂಡಕ್ಕೆ ಮುನ್ನಡೆ ಸಾಧಿಸುವ ಆಸೆ ಚಿಗುರೊಡೆದಿತ್ತು. ಆದರೆ ಸೌದಿಯ ಗೋಲ್‌ಕೀಪರ್ ಅಲ್-ಓವಾçಸ್ ಅವರ ಅದ್ಭುತ ನಿರ್ವಹಣೆಯಿಂದಾಗಿ ಮೆಕ್ಸಿಕೊ ತಂಡ ಬೃಹತ್ ಅಂತರದಿಂದ ಗೆಲ್ಲುವ ಅವಕಾಶದಿಂದ ವಂಚಿತವಾಯಿತು. ಇನ್ನಷ್ಟು ಗೋಲುಗಳ ಅಂತರದಿಂದ ಗೆದ್ದಿದ್ದರೆ ಮೆಕ್ಸಿಕೊ ಅಂತಿಮ 16ರ ಸುತ್ತಿಗೇರುವ ಸಾಧ್ಯತೆಯಿತ್ತು.
ಮೆಕ್ಸಿಕೊ ಹೊರಬಿದ್ದ ಕಾರಣ ವಿಶ್ವಕಪ್‌ನಲ್ಲಿ ಸತತ ಏಳನೇ ಬಾರಿ ಅಂತಿಮ 16ರ ಸುತ್ತಿಗೇರಿದ್ದ ಅದರ ಸಾಧನೆಯ ಓಟಕ್ಕೂ ತೆರೆ ಬಿತ್ತು. ಇದೇ ವೇಳೆ ಮೆಕ್ಸಿಕೊ ವಿರುದ್ಧ ಸೋತ ಸೌದಿ ಅರೇಬಿಯ ಕಳೆದ 28 ವರ್ಷಗಳಲ್ಲಿ ಮೊದಲ ಬಾರಿ ಬಣ ಹಂತದಿಂದ ಮುನ್ನಡೆಯುವ ಅವಕಾಶವನ್ನು ಕಳೆದುಕೊಂಡಿತು.
“ಸಿ’ ಬಣದ ಆರಂಭಿಕ ಪಂದ್ಯಗಳಲ್ಲಿ ಗೋಲು ಹೊಡೆಯಲು ವಿಫಲವಾಗಿದ್ದರಿಂದ ಮೆಕ್ಸಿಕೊ ತಂಡ ಬಹಳಷ್ಟು ಒತ್ತಡದಲ್ಲಿ ಸಿಲುಕಬೇಕಾಯಿತು. ಒಂದು ವೇಳೆ ಮೊದಲೆರಡು ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ನೀಡಿರುತ್ತಿದ್ದರೆ ಮೆಕ್ಸಿಕೊ ತಂಡಕ್ಕೆ ಅಂತಿಮ 16ರ ಸುತ್ತಿಗೆ ಏರುವ ಅವಕಾಶವಿತ್ತು.
ದ್ವಿತೀಯ ಅವಧಿಯ ಆಟ ಆರಂಭವಾಗಿ ಎರಡನೇ ನಿಮಿಷದಲ್ಲಿ ಮೆಕ್ಸಿಕೊ ಗೋಲು ಖಾತೆ ತೆರೆದಿತ್ತು. ಸೀಸರ್ ಮಾಂಟೆಸ್ ಒಂದು ಬದಿಯಿಂದ ನೀಡಿದ ಚೆಂಡನ್ನು ಮಾರ್ಟಿನ್ ಅದ್ಭುತ ರೀತಿಯಲ್ಲಿ ಗೋಲಾಗಿ ಪರಿವರ್ತಿಸಿದರು. ಐದು ನಿಮಿಷಗಳ ತರುವಾಯ ಮೆಕ್ಸಿಕೊ ಈ ಮುನ್ನಡೆಯನ್ನು ಎರಡಕ್ಕೇರಿಸಿದರು. ಚಾವೇಜ್ 20 ಮೀಟರ್ ದೂರರಿಂದ ಫ್ರೀ ಕಿಕ್ ಮೂಲಕ ಹೊಡೆದ ಚೆಂಡು ಸೌದಿ ಗೋಲ್‌ಕೀಪರ್ ಅವರನ್ನು ವಂಚಿಸಿ ಗೋಲ್‌ಪೋಸ್ಟ್‌ನ ಒಳಗಡೆ ಸೇರಿಕೊಂಡಿತು. ಪಂದ್ಯ ಮುಗಿಯಲು ಸ್ವಲ್ವ ಸಮಯವಿರುವಾಗ ಸೌದಿಯ ಅಲ್ ದವಾÕರಿ ಗೋಲನ್ನು ಹೊಡೆದು ಸೋಲಿನ ಅಂತರವನ್ನು ಕಡಿಮೆ ಮಾಡಿದರು.