Advertisement

ಪೊಯಿಸರ್‌ ಜಿಮ್ಖಾನದ 18ನೇ ವಾರ್ಷಿಕ ಕ್ರೀಡಾಕೂಟ

12:30 PM Dec 03, 2018 | Team Udayavani |

ಮುಂಬಯಿ: ಪೊಯಿಸರ್‌ ಜಿಮ್ಖಾನದ ವತಿಯಿಂದ 18ನೇ ವಾರ್ಷಿಕ ಕ್ರೀಡಾಕೂಟವು ನ. 24 ರಂದು ಪ್ರಾರಂಭಗೊಂಡಿದ್ದು, ಡಿ.2 ರವರೆಗೆ ನಡೆಯಲಿದೆ. 

Advertisement

ಪೊಯಿಸರ್‌ ಜಿಮ್ಖಾನ ಮೈದಾನ ದಲ್ಲಿ ಈ ಕ್ರೀಡಾಕೂಟವು ಜರ ಗುತ್ತಿದ್ದು, ಉತ್ತರ ಮುಂಬಯಿ ಕ್ರೀಡಾ ಮಹೋತ್ಸವ ಲಾಂಭನದಲ್ಲಿ ಆಯೋಜಿಸಲಾಗಿದ್ದು, ವೈವಿಧ್ಯ ಮಯ ಕ್ರೀಡೆಗಳು ದಿನಂಪ್ರತೀ ಅದ್ದೂರಿಯಾಗಿ ನಡೆಯುತ್ತಿದೆ.

ನ. 24ರಂದು ಕ್ರಿಕೆಟ್‌ ಪಂದ್ಯಾಟವನ್ನು  ಆಯೋಜಿಸಲಾ ಗಿತ್ತು. ಒಟ್ಟು 16 ತಂಡಗಳು   ಪಾಲ್ಗೊಂಡಿದ್ದು, ಫೈನಲ್‌ನಲ್ಲಿ ಕಾಂದಿವಲಿಯ ಸ್ವಾಮಿ ವಿವೇಕಾನಂದ ಶಾಲೆ ಹಾಗೂ ಆಕ್ಸ್‌ಫರ್ಡ್‌ ಶಾಲಾ ತಂಡಗಳು ಸೆಣಸಾಡಿದ್ದವು. 

ಸ್ವಾಮೀ ವಿವೇಕಾನಂದ ಶಾಲಾ ತಂಡದ ಕ್ಯಾಪ್ಟನ್‌ ಆಯುಷ್‌ ಜೆಟ್ವಾ ಇವರ 94 ರನ್ನುಗಳ ನೆರವಿನಿಂದ ತಂಡವು ವಿಜಯಮಾಲೆಯನ್ನು ತನ್ನದಾಗಿಸಿಕೊಂಡಿತು.
ಸ್ವಾಮಿ ವಿವೇಕಾನಂದ ತಂಡವು ಬಾರಿಸಿದ 209 ರನ್ನುಗಳಿಗೆ ವಿರುದ್ಧ ವಾಗಿ ಆಕ್ಸ್‌ಫರ್ಡ್‌ ತಂಡವು 188 ರನ್‌ಗಳಿಗೆ ಸರ್ವಪತನವನ್ನು ಕಂಡಿತು. ವಿಜೇತ ತಂಡಗಳಿಗೆ ಗಣ್ಯರು ಪ್ರಶಸ್ತಿ ಪ್ರದಾನಿಸಿದರು.  ಕ್ರೀಡಾಕೂಟದ ಯಶಸ್ಸಿಗೆ ಸಹಕರಿ ಸುವಂತೆ ಪೊಯಿಸರ್‌ ಜಿಮಾ^ನದ ಉಪಾಧ್ಯಕ್ಷ, ಸಂಘಟಕ ಕರುಣಾಕರ ಶೆಟ್ಟಿ ಅವರು ತಿಳಿಸಿದ್ದಾರೆ. 

ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement
Advertisement

Udayavani is now on Telegram. Click here to join our channel and stay updated with the latest news.

Next