Advertisement

ರಷ್ಯಾಕ್ಕೆ ಉದ್ದೀಪನವೇ ವಿಷ..!

07:49 PM Dec 13, 2019 | Lakshmi GovindaRaj |

ಜಾಗತಿಕ ಕ್ರೀಡಾಕೂಟಗಳಲ್ಲಿ ರಷ್ಯಾಕ್ಕೆ ದೊಡ್ಡ ಹೆಸರಿತ್ತು. ಒಲಿಂಪಿಕ್ಸ್‌ನಂತಹ ವಿಶ್ವ ಕೂಟದಲ್ಲಿ ರಷ್ಯಾದ ಸ್ಪರ್ಧಿಗಳು ಚಿನ್ನದ ಪದಕವನ್ನು ಭರ್ಜರಿಯಾಗಿ ಬೇಟೆಯಾಡುತ್ತಿದ್ದರು. ರಷ್ಯಾ ಸಾಧನೆಗೆ ವಿಶ್ವವೇ ನಿಬ್ಬೆರಗಾಗಿತ್ತು. ಆದರೆ ಇಂದು ಅದೇ ರಷ್ಯಾಕ್ಕೆ ಉದ್ದೀಪನದ ಕಳಂಕ ಬಲವಾಗಿಯೇ ಅಂಟಿಕೊಂಡಿದೆ. ತಲೆ ಎತ್ತಿ ಓಡಾಡಲು ಆಗದ ಪರಿಸ್ಥಿತಿಯನ್ನು ಆ ದೇಶದ ಕ್ರೀಡಾಪಟುಗಳು ಎದುರಿಸುತ್ತಿದ್ದಾರೆ. ಅಲ್ಲಿನ ಸಮಸ್ಯೆಯನ್ನು ಸರಿಪಡಿಸಲು ಆ ದೇಶದ ಆಡಳಿತ ವ್ಯವಸ್ಥೆಗೆ ಸಾಧ್ಯವಾಗಿಲ್ಲ.

Advertisement

ಕಳೆದ ಒಲಿಂಪಿಕ್ಸ್‌ನಲ್ಲಿ ಇದೇ ವಿವಾದದಿಂದಾಗಿ ಇಡೀ ಅಥ್ಲೆಟಿಕ್ಸ್‌ ವಿಭಾಗವೇ ನಿಷೇಧಗೊಂಡಿತ್ತು. ಆನಂತರ ನಿಷೇಧದಿಂದ ವಾಪಸ್‌ ಬಂದಿತ್ತು. ಆದರೆ ಸೂಕ್ತ ರೀತಿಯಲ್ಲಿ ತನಿಖೆಗೆ ಸ್ಪಂದಿಸದಿರುವ ಹಿನ್ನೆಲೆಯಲ್ಲಿ ಮುಂದಿನ ಒಲಿಂಪಿಕ್ಸ್‌ನಿಂದ ಒಟ್ಟಾರೆ ರಷ್ಯಾವೇ ವನ್ನೇ ಹೊರಗಿಡಲಾಗಿದೆ. ಮಾತ್ರವಲ್ಲ ರಷ್ಯಾ 4 ವರ್ಷದ ಕಠಿಣ ನಿಷೇಧ ಶಿಕ್ಷೆಗೆ ಗುರಿಯಾಗಿದೆ. ವಿಶ್ವ ಉದ್ದೀಪನ ಸಂಸ್ಥೆ (ವಾಡಾ) ಇಂತಹದೊಂದು ಕಠಿಣ ನಿಷೇಧವನ್ನು ಘೋಷಿಸಿದೆ.

ಇದರಿಂದಾಗಿ ರಷ್ಯಾ ಮುಂಬರುವ ಟೋಕೊ ಒಲಿಂಪಿಕ್ಸ್‌ ಹಾಗೂ 2022ರ ಕತಾರ್‌ ವಿಶ್ವಕಪ್‌ ಫ‌ುಟ್‌ಬಾಲ್‌ ಕೂಟವನ್ನು ಕಳೆದುಕೊಂಡಂತಾಗಿದೆ. ಯಾವುದೇ ಸ್ಪರ್ಧಿಗಳು ರಷ್ಯಾದ ಧ್ವಜದಡಿ ಸ್ಪರ್ಧೆ ಮಾಡುವಂತಿಲ್ಲ. ನಿರ್ದೋಷಿ ಕ್ರೀಡಾಪಟುಗಳಿಗೆ ಯಾವುದೇ ಸಮಸ್ಯೆ ಇಲ್ಲ. ಅಪರಾಧಿಯಲ್ಲ ಎನ್ನುವುದು ಸಾಬೀತಾದರೆ ಒಲಿಂಪಿಕ್ಸ್‌ ಧ್ವಜದಡಿ ಸ್ಪರ್ಧೆ ಮಾಡಲು ವಿಶೇಷ ಅವಕಾಶ ನೀಡುವುದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಒಕ್ಕೂಟ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next