ಕ್ಯಾಪ್ಸಿಕಂ 1/4 ಕೆಜಿ
ಈರುಳ್ಳಿ 1/4 ಕೆಜಿ
ಟೊಮೇಟೋ 1/4 ಕೆಜಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್ ರುಚಿಗೆ ತಕ್ಕಷ್ಟು
ಗೋಡಂಬಿ 25ಗ್ರಾಂ
ತಾಜಾ ಕೊತ್ತಂಬರಿ (ಕತ್ತರಿಸಿದ್ದು)
ಗರಂ ಮಸಾಲ ಒಂದು ಚಮಚ
ಜೀರಿಗೆ ಪುಡಿ ಕಾಲು ಚಮಚ
ಅಚ್ಚುಕಾರದ ಪುಡಿ ರುಚಿಗೆ ತಕ್ಕಷ್ಟು.
Advertisement
ಮಾಡುವ ವಿಧಾನ:ಕ್ಯಾಪ್ಸಿಕಂ ಅನ್ನು ತೊಳೆದು ದಪ್ಪಗೆ ಹೆಚ್ಚಿಕೊಳ್ಳಿ. ಮೂರು ಈರುಳ್ಳಿಯನ್ನು, ಎರಡು ಟೊಮೇಟೋವನ್ನು ಸಣ್ಣಗೆ ಕತ್ತರಿಸಿಕೊಳ್ಳಿ. ಬಾಣಲೆಗೆ ಕೊಂಚ ಎಣ್ಣೆ ಹಾಕಿ, ಸಾಸಿವೆ ಜೀರಿಗೆ ಸಿಡಿಸಿ. ಹೆಚ್ಚಿದ ಈರುಳ್ಳಿ ಟೊಮೇಟೋವನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ಒಂದು ಈರುಳ್ಳಿ ಹಾಗೂ ಮೂರು ಟೊಮೇಟೋವನ್ನು ಗೋಡಂಬಿಯ ಜೊತೆ ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಳ್ಳಿ. ಈ ಮಿಶ್ರಣವನ್ನು ಹುರಿದ ಈರುಳ್ಳಿ ಟೊಮೇಟೋ ಮಿಶ್ರಣಕ್ಕೆ ಸೇರಿಸಿ ತಳ ಹಿಡಿಯದಂತೆ ಕೈಯಾಡಿಸಿ. ಇದಕ್ಕೆ ಉಪ್ಪು, ಗರಂ ಮಸಾಲ, ಅಚ್ಚುಕಾರದ ಪುಡಿ, ಜೀರಿಗೆ ಪುಡಿ, ಶುಂಟಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಎಲ್ಲ ಚೆನ್ನಾಗಿ ಮಿಶ್ರವಾಗಿ ಕುದಿಯುವಾಗ ಹೆಚ್ಚಿಟ್ಟ ಕ್ಯಾಪ್ಸಿಕಂ ಅನ್ನು ಸೇರಿಸಿ ಎರಡು ನಿಮಿಷ ಮುಚ್ಚಿಡಿ. ಎರಡು ನಿಮಿಷದ ನಂತರ
ಸ್ಟವ್ ಆರಿಸಿ. ಆ ಬಿಸಿಯ ಹಬೆಯಲ್ಲಿಯೇ ಕ್ಯಾಪ್ಸಿಕಂ ಮೃದುವಾಗಬೇಕು. ಇದಕ್ಕೆ ಹೆಚ್ಚಿದ ಕೊತ್ತಂಬರಿಯಿಂದ ಅಲಂಕರಿಸಿ. ಇದನ್ನು ಚಪಾತಿ ಅಥವಾ ಪೂರಿಗೆ ಜೊತೆ ತಿನ್ನಬಹುದು.