ಉಳ್ಳಾಲ: ಉಳ್ಳಾಲದಲ್ಲಿ ಕಡಲ್ಕೊರೆತಕ್ಕೆ ಶಾಶ್ವತವಾಗಿ ನಿರ್ಮಾಣ ವಾಗಿರುವ ಪೈಲಟ್ ಯೋಜನೆಗಳು ಕಡಲ್ಕೊರೆತದ ಇತರ ಪ್ರದೇಶಗಳಿಗೆ ಮಾದರಿಯಾಗಲಿವೆ. ಪ್ರಸ್ತುತ ಕಾಮಗಾರಿ ಹಂತದಲ್ಲಿರುವ ಉಳ್ಳಾಲ ಸಮ್ಮರ್ ಸ್ಯಾಂಡ್ ಬಳಿಯಿಂದ ಸೀಗ್ರೌಂಡ್ ವರೆಗೆ 22 ಕೋ.ರೂ. ಅನುದಾನದಲ್ಲಿ ಯೋಜನೆ ಕಾರ್ಯಗತವಾಗುತ್ತಿದ್ದು, ಶೀಘ್ರವೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದರು.
ಉಳ್ಳಾಲ ಶಾಶ್ವತ ಕಡಲ್ಕೊರೆತ ಕಾಮಗಾರಿ ವೀಕ್ಷಿಸಿ ಬಂದರು ಇಲಾಖೆಯ ಎಂಜಿನಿಯರ್‌ಗಳೊಂದಿಗೆ ಮತ್ತು ಗುತ್ತಿಗೆ ದಾರರೊಂದಿಗೆ ಮಾಹಿತಿ ಪಡೆದು ಅವರು ಮಾತನಾಡಿದರು.
ಈಗಾಗಲೇ ಎಡಿಬಿ ಯೋಜನೆಯಡಿ ಹಳೆ ತಡೆಗೋಡೆ ನಿರ್ವಹಣೆ, ಬಮ್ಸ್‌ರಚನೆ ಸಹಿತ ಶಾಶ್ವತ ಕಾಮಗಾರಿಗಳು ಕೋಟೆಪುರದಿಂದ ಮೊಗವೀರಪಟ್ಟಣದ ವರೆಗೆ ಯಶಸ್ವಿಯಾಗಿ ನಡೆದಿವೆ. ಲಾಕ್ ಡೌನ್ ನಿಂದಾಗಿ 2 ತಿಂಗಳು ಕಾಮಗಾರಿಗೆ ಹಿನ್ನಡೆಯಾಗಿದ್ದು, ಇದೀಗ ತ್ವರಿತಗತಿಯಲ್ಲಿ ನಿರ್ವಹಿಸಲು ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್‌ಗಳಿಗೆ ಮತ್ತು ಗುತ್ತಿಗೆ ದಾರರಿಗೆ ಆದೇಶ ನೀಡಲಾಗಿದೆ ಎಂದರು.
ಉಚ್ಚಿಲ ಕಡಲ್ಕೊರೆತ;
ತಾತ್ಕಾಲಿಕ ಕ್ರಮಕ್ಕೆ ಆಗ್ರಹ
ಸೋಮೇಶ್ವರ ಉಚ್ಚಿಲ ಸಮುದ್ರ ತೀರದಲ್ಲಿ ಶಾಶ್ವತ ಕಾಮಗಾರಿ ಆರಂಭಗೊಂಡಿ ದ್ದರೂ ಮಳೆಗಾಲದ ಮೊದಲು ಈ ಬಾರಿಯ ಕಡಲ್ಕೊರೆತ ಎದುರಿಸಲು ಸಿದ್ಧತೆಗೆ ಆಗ್ರ ಹಿಸಿ,ತಾತ್ಕಾಲಿಕ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಬಂದರು ಇಲಾಖೆ, ಮೀನುಗಾರಿಕೆ ಇಲಾಖೆಯ ಎಂಜಿನಿಯರ್‌ಗಳು, ಆಧಿಕಾರಿ, ಗುತ್ತಿಗೆದಾರರು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.