Advertisement
ಎಂ. ಗೋಪಾಲಕೃಷ್ಣ ಅಡಿಗ
Related Articles
Advertisement
ಕುವೆಂಪು: ಜ್ಞಾನಪೀಠ ಪುರಸ್ಕೃತ ಕವಿ. ಕುವೆಂಪುರವರು ಮೈಸೂರಿನಲ್ಲಿದ್ದ ದಿನಗಳು. ಗಾಯಕಿ ಲೀಲಾವತಿ ಯವರು ಕವಿ ಕುವೆಂಪುರವರನ್ನು ಅವರ ನಿವಾಸ ಉದಯರವಿಗೆ ತೆರಳಿ ಭೇಟಿಯಾದರು. ಸಾಹಿತ್ಯ ಹಾಗೂ ಸಂಗೀತದ ಬಗ್ಗೆ ನಡೆದ ಮಾತುಕತೆಗಳ ನಡುವೆ ಕುವೆಂಪು ಹೇಳಿದರು. ನೀವು ನನ್ನ ಕವನಗಳನ್ನು ಹಾಡದಿದ್ದರೆ ನನ್ನ ಪುಸ್ತಕಗಳೆಲ್ಲ ಬೀರುವಿನಲ್ಲಿಯೇ ಇರುತ್ತಿತ್ತು. ಕುವೆಂಪುರವರು ಬೆಂಗಳೂರು ಆಕಾಶವಾಣಿಗೆ ಹೀಗೆ ಬರೆದಿದ್ದರಂತೆ. ನನ್ನ ಕವನಗಳನ್ನು ಪಿ. ಕಾಳಿಂಗ ರಾವ್ ಮತ್ತು ಲೀಲಾವತಿ ಹೊರತು ಬೇರೆ ಯಾರೂ ಹಾಡಬಾರದು. ಮಾನಸಗಂಗೋತ್ರಿಯ ಆರಂಭೋತ್ಸವದಲ್ಲಿಯೂ ಲೀಲಾವತಿಯವರಿಂದಲೇ ಹಾಡಿಸಿದರಂತೆ.
ದ.ರಾ. ಬೇಂದ್ರೆ
ವರಕವಿ ಬೇಂದ್ರೆಯವರ ಮಾತು, ಕವನಗಳೆಂದರೆ ಅನೇಕರಿಗೆ ಆಸಕ್ತಿ. ಸ್ವತಃ ಅವರೇ ಕೆಲವೊಮ್ಮೆ ವಾಚಿ ಸುತ್ತಿದ್ದರು. ಒಮ್ಮೆ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಂಪರೆ ಎಂಬ ರೂಪಕದ ಪ್ರದರ್ಶನ. ಬೇಂದ್ರೆ ಯವರೇ ಅದನ್ನು ರಚಿಸಿದ್ದರು. ಅದರಲ್ಲಿ ಲೀಲಾವತಿ ಯವರು ಬೇಂದ್ರೆಯವರ ಎರಡು ಕವನಗಳನ್ನು ಹಾಡಿದ್ದರು. ಕಾರ್ಯಕ್ರಮ ಮುಗಿಯಿತು. ಲೀಲಾವತಿ ಯವರು ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಬೇಂದ್ರೆಯವರು ಎದುರಾದರು. ಗಾಯನಕ್ಕೆ ಮಾರು ಹೋದ ಬೇಂದ್ರೆಯವರು ಹೇಳಿದ ಮಾತನ್ನು ಲೀಲಾವತಿಯವರು ಹೀಗೆ ನೆನಪಿಸಿಕೊಂಡಿ¨ªಾರೆ. “ಏನ್ ಛಲೋ ಹಾಡ್ತೀಯವ್ವಾ. ಆಶಾ ಭೋಂಸ್ಲೆ ಹಾಗೆ. ಈಗ ಮನೀಗೆ ಹೋಗಿ ಮತ್ತೆ ನಿನ್ನ ಗಾಯನ ರೇಡಿಯೋದಾಗ ಕೇಳ್ತೀನಿ’.
ಕೆ.ಎಸ್. ನರಸಿಂಹಸ್ವಾಮಿ ಕನ್ನಡದ ಪ್ರೇಮ ಕವಿ ಕೆ.ಎಸ್.ಎನ್. ಒಮ್ಮೆ ಆಕಾಶವಾಣಿಯಲ್ಲಿ ಸಂಗೀತ ರೂಪಕ. ಅದಕ್ಕೊಂದು ಹಾಡು ಬೇಕಾಗಿತ್ತು. ಲೀಲಾವತಿಯವರು ಕೆ.ಎಸ್.ಎನ್. ಬಳಿ ಕವನಕ್ಕಾಗಿ ಕೋರಿಕೆ ಸಲ್ಲಿಸಿದರು. ಅಷ್ಟರಲ್ಲಿ ಅನಾರೋಗ್ಯದಿಂದ ಲೀಲಾವತಿಯವರು ಆಸ್ಪತ್ರೆಗೆ ದಾಖಲಾಗಬೇಕಾಯಿತು. ನರಸಿಂಹಸ್ವಾಮಿಯವರು ಲೀಲಾವತಿಯವರನ್ನು ಹುಡುಕಿಕೊಂಡು ಆಸ್ಪತ್ರೆಗೆ ಬಂದರು. ತಾನು ಬರೆದು ತಂದ ಕವನವನ್ನು ನೀಡಿ ಶೀಘ್ರ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು. ಕೆ.ಎಸ್.ಎನ್. ಅವರ ಸಹೃದಯತೆಗೊಂದು ನಿದರ್ಶನ. ಶಿವರುದ್ರಪ್ಪ
ಇವರ ಪ್ರಸಿದ್ಧ ಕವನ “ಉಡುಗಣವೇಷ್ಟಿತ’. ಲೀಲಾವತಿಯವರಿಗೆ ಕೀರ್ತಿ ತಂದ ಕವನ. ಇದರೊಂದಿಗೆ ಎಂಥ ಅವಿನಾಭಾವ ಸಂಬಂಧ ಅವರಲ್ಲಿ ಬೆಳೆದಿತ್ತೆಂದರೆ ಲೀಲಾವತಿ ಎಂದರೆ ಉಡು ಗಣವೇಷ್ಟಿತ, ಉಡುಗಣವೇಷ್ಟಿತ ಎಂದರೆ ಲೀಲಾವತಿ ಎಂದು ಜನಜನಿತವಾಗಿತ್ತು. ಶಿವರುದ್ರಪ್ಪನವರೇ ಹೇಳಿದಂತೆ ಈ ಕವನವನ್ನು ಲೀಲಾವತಿಯವರು ಸೊಗ ಸಾಗಿ ಹಾಡುವುದರ ಮೂಲಕ ಶೋತೃಗಳ ನಡುವೆ ನನಗೊಂದು ಸ್ಥಾನ ಕಲ್ಪಿಸಿದರು. ಸಿದ್ದಲಿಂಗಯ್ಯ
ಒಮ್ಮೆ ಕವಿಗೋಷ್ಠಿ. ಸಿದ್ದಲಿಂಗಯ್ಯನವರನ್ನು ಆಹ್ವಾನಿಸಲಾಗಿತ್ತು. ಆಗ ಅವರು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು. ಕವಿಗೋಷ್ಠಿ ಮುಗಿಸಿ ಹೋಗುವಾಗ ಪ್ರಯಾಣದ ವೆಚ್ಚ ನೀಡಲು ಲೀಲಾವತಿ ಮುಂದಾ ದರು. ಆಗ ಸಿದ್ದಲಿಂಗಯ್ಯನವರು ಸ್ವೀಕರಿಸಲಿಲ್ಲ. ಅದಕ್ಕೆ ಅವರು ಕೊಟ್ಟ ಕಾರಣ ಅವರ ಪ್ರಾಮಾಣಿಕತೆಗೆ ಸಾಕ್ಷಿ. ನಾನು ಪುಸ್ತಕ ಪ್ರಾಧಿಕಾರದ ಕಾರಿನಲ್ಲಿ ಬಂದಿದ್ದೇನೆ. ಹಾಗಾಗಿ ಈ ಪ್ರಯಾಣದ ವೆಚ್ಚ ಬೇಡ. ಈ ಘಟನೆಯಿಂದ ಅವರ ಬಗ್ಗೆ ನನಗಿದ್ದ ಗೌರವ ಮತ್ತಷ್ಟು ಹೆಚ್ಚಾಯಿತೆಂದು ಲೀಲಾವತಿಯವರು ನೆನಪಿಸಿಕೊಳ್ಳುತ್ತಾರೆ. ಸಂಗೀತ ಹಾಗೂ ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಗಾಯಕ ಕಾವ್ಯಕ್ಕೆ ಕಳೆ ಕೊಟ್ಟರೆ, ಕವಿಯು ಗಾಯಕನ ಕಲೆಗೆ ಕಳೆ ಕೊಡುತ್ತಾನೆ.