Advertisement
ಅವರು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಕೊಡಮಾಡಿದ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. ಪಂಜರದಲ್ಲಿರುವ ಹಕ್ಕಿಗಿಂತ ಸ್ವತಂತ್ರವಾಗಿರುವ ಹಕ್ಕಿಯ ಹಾಡು ಮಹತ್ವ ಪೂರ್ಣ ಎಂದು ತಿಳಿದಿದ್ದೇವೆ. ಅದೇ ರೀತಿ ಅಮೆರಿಕದ ವಿದ್ವಾಂಸ ವರ್ಜಿನಿಯ ಮಹಿಳೆಯರ ಬರೆಹ ಬರಬೇಕಾದರೆ ಆರ್ಥಿಕ ಸ್ವಾತಂತ್ರ್ಯ ಮತ್ತು ಏಕಾಂತ (ಖಾಸಗಿ) ಸ್ವಾತಂತ್ರ್ಯ ಬೇಕೆನ್ನುತ್ತಾನೆ. ನಾವೇ ಕಟ್ಟಿದ ಅಥವಾ ಬೇರೆಯವರು ಕಟ್ಟಿದ ಗೋಡೆಗಳ ನಡುವೆ ಬಂಧಿತನಾದ ಮನುಷ್ಯ ಹೊರಗಿನವನಿಗಿಂತ ಭಿನ್ನವಾಗಿ ಕಾಣಬಹುದೆ? ನನ್ನ ತಾಯಿ ಇಂತಹ ಸ್ವಾತಂತ್ರÂಗಳಿಲ್ಲದೆ ಬರೆಹಗಳನ್ನು ಸಾಧಿಸಿದ್ದನ್ನು ನೋಡುವಾಗ ಇದೆಲ್ಲಾ ಕಟ್ಟುಕತೆಗಳಂತೆ ಕಾಣುತ್ತದೆ ಎಂದರು.
ಪ್ರಶಸ್ತಿ ಪುರಸ್ಕೃತ “ಜೀನ್ಸ್ ತೊಟ್ಟ ದೇವರು’ ಕೃತಿಯನ್ನು ಬಿಡುಗಡೆಗೊಳಿಸಿದ ಸಾಹಿತಿ ವೈದೇಹಿಯವರು, ಕಡೆಂಗೋಡ್ಲು ಶಂಕರ ಭಟ್ಟರ ಕತೆಗಳಲ್ಲಿದ್ದ ಸ್ತ್ರೀಕೇಂದ್ರಿತ ವಿಚಾರಗಳು ನನ್ನ ಮೇಲೂ ಪರಿಣಾಮ ಬೀರಿವೆ. ನಾವು ದ್ವೇಷ ಭಾಷೆಯ ಬದಲು ಪ್ರೀತಿ ಭಾಷೆ ಯನ್ನು ಬೆಳೆಸಬೇಕಾಗಿದೆ ಎಂದರು.
Related Articles
“ಕಡೆಂಗೋಡ್ಲು ಕಾವ್ಯದ ದಾರಿ’ ವಿಷಯ ಕುರಿತು ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕಿ ಡಾ|ಮಹೇಶ್ವರಿ ಯು. ಅವರು ಕಡೆಂಗೋಡ್ಲು ಅವರ ಕೃತಿಗಳಲ್ಲಿ ಸಾವಿನ ವಿಷಯ ಎದ್ದು ಕಾಣುತ್ತದೆ. ವಸ್ತು ಆಯ್ಕೆಯಲ್ಲಿ ತಾತ್ವಿಕತೆ ಕಂಡು
ಬಂದು ದಾರ್ಶನಿಕರಾಗಿ ಕಾಣುತ್ತಾರೆಂದರು.
Advertisement
ಬರೆದಂತೆ ಬದುಕಿದರೆ…ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತಿ ಚಿಂತಕ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಗಾಂಧೀವಾದಿಯಾಗಿದ್ದ ಕಡೆಂಗೋಡ್ಲು ಅವರು ಪತ್ರಿಕೋದ್ಯಮವನ್ನು ಜೀವನದ ಅವಿಭಾಜ್ಯ ಅಂಗವಾಗಿರಿಸಿಕೊಂಡಿದ್ದರು. ಬರೆಹಕ್ಕೂ, ಬದು
ಕಿಗೂ ಸಮನ್ವಯ ಮಾಡಿಕೊಂಡಿದ್ದರು. ಬರೆದಂತೆ ಬದುಕಿದರೆ ಮಾತ್ರ ವ್ಯಕ್ತಿತ್ವಕ್ಕೆ ಮೌಲ್ಯ ಬರುತ್ತದೆ ಎಂದರು.
ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಕುಸುಮಾ ಕಾಮತ್, ಕಡೆಂಗೋಡ್ಲು ಶಂಕರ ಭಟ್ಟರ ಪುತ್ರ ಡಾ|ಕೆ.ಎಸ್.ಭಟ್ ಶುಭ ಕೋರಿದರು. ಕೇಂದ್ರದ ಸಂಯೋಜನಾಧಿಕಾರಿ ವರದೇಶ್ ಹಿರೇಗಂಗೆ ಸ್ವಾಗತಿಸಿ ಸಹ ಸಂಯೋಜನಾಧಿಕಾರಿ ಡಾ| ಅಶೋಕ್ ಆಳ್ವ ವಂದಿಸಿದರು. ಭಾÅಮರಿ ಶಿವಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು.