Advertisement

ಐಲ: ‘ಲಕ್ಷದೀಪೋತ್ಸವ ಸಾಹಿತ್ಯ ಶಿಖೋಜ್ವಲನ’ಕವಿಗೋಷ್ಠಿ

09:00 AM Apr 04, 2018 | Karthik A |

ಉಪ್ಪಳ: ಅಗ್ನಿ ಫ್ರೆಂಡ್ಸ್‌ ಉಪ್ಪಳ ಇದರ ದಶಮಾನೋತ್ಸವದ ನೆನಪಿಗಾಗಿ ಐಲ ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಲಕ್ಷದೀಪೋತ್ಸವ ನಡೆಸಲಾಯಿತು. ಈ ಸುಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರವನ್ನೂ ಬೆಳಗಿಸುವ ದೃಷ್ಟಿಯಿಂದ ದಕ್ಷಿಣ ಕನ್ನಡ ಕಾಸರಗೋಡು ಜಿಲ್ಲೆಯ ಉದಯೋನ್ಮುಖ ಕವಿಗಳಿಂದ ‘ಲಕ್ಷದೀಪೋತ್ಸವ ಸಾಹಿತ್ಯ ಶಿಖೋಜ್ವಲನ’ ಹೆಸರಲ್ಲಿ ಮೂವತ್ತು ಕವಿಗಳಿಂದ ಕವಿಗೋಷ್ಠಿ ನಡೆಸಲಾಯಿತು. ದೀಪ ಹಾಗೂ ದೀಪೋತ್ಸವದ ಆಶಯವನ್ನೇ ಪ್ರತಿನಿಧಿಸುವ ಸ್ವರಚಿತ ಕವನಗಳನ್ನು ಕವಿಗಳು ವಾಚಿಸಿದರು.

Advertisement

ತುಳು – ಕನ್ನಡ ಕವಿ ಸಾಹಿತಿ, ಪ್ರಸಂಗಕರ್ತ ಯೋಗೀಶ ರಾವ್‌ ಚಿಗುರುಪಾದೆ  ಕವಿಗೋಷ್ಠಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಂದಿನ ಎಲೆಕ್ಟ್ರಾನಿಕ್‌ ಮಾಧ್ಯಮ ಯುಗದಲ್ಲೂ  ಸೃಜನ ಸಾಹಿತ್ಯಕ್ಕೆ ಕವಿಗಳಿಗೆ ಸಾಹಿತಿಗಳಿಗೆ ಅದರದ್ದೇ ಆದ ಗೌರವವಿದೆ. ಯಾವುದೆ ಕವಿ ಸೃಷ್ಟಿಯು ಆತನ ಬದುಕಿನ ಅನುಭವದಿಂದ ಮೂಡಿರುತ್ತದೆ. ಆತನಿಗಾದ ನೋವು ನಲಿವು ಸುಖ ದುಃಖಗಳು ಮಾನ ಅಪಮಾನಗಳು ಅದರಲ್ಲಿ ಪ್ರತಿಫಲಿಸುತ್ತವೆ. ಇನ್ನೊಬ್ಬನ ರಚನೆಯಲ್ಲಿ ನಮ್ಮ ದೃಷ್ಟಿಕೋನವನ್ನು ಬೆರೆಸಿ ಬೆಲೆಕಟ್ಟಬಾರದು. 

ಪ್ರತಿಯೊಬ್ಬನಲ್ಲೂ ಅವನದ್ದೇ ಆದ ಪ್ರತಿಭೆ ಇದ್ದೇ ಇದೆ. ಅದನ್ನು ನಾವು ಗುರುತಿಸಿ ಗೌರವಿಸಬೇಕು. ಪೂರ್ವಗ್ರಹ ರಹಿತವಾಗಿ ಸಾಹಿತ್ಯವನ್ನು ಓದಬೇಕು. ನಿರಂತರ ಅಧ್ಯಯನ ಶ್ರಮ ತೊಡಗಿಸಿಕೊಳ್ಳುವಿಕೆಯಿಂದ ಉತ್ತಮ ರಚನೆ ಮೂಡಿಬರುತ್ತದೆ. ನಾಡಿನಲ್ಲಿ ಸಾಕಷ್ಟು ಸಂಘ ಸಂಸ್ಥೆಗಳು ದಶಮಾನೋತ್ಸವ ಬೆಳ್ಳಿಹಬ್ಬ ಸ್ವರ್ಣಮಹೋತ್ಸವಗಳನ್ನು ಆಚರಿಸುತ್ತವೆ ಆದರೆ ಕವಿಗೋಷ್ಠಿಯನ್ನು ನಡೆಸಿ ದಶಮಾನೋತ್ಸವ ಆಚರಿಸಿದ್ದು ತೀರಾ ಅಪರೂಪದ ಘಟನೆ ಅದಕ್ಕಾಗಿ ಅಗ್ನಿ ಫ್ರೆಂಡ್ಸ್‌ ಸಂಘಟನೆಯನ್ನು ಅಭಿನಂದಿಸುತ್ತೇನೆ ಎಂದರು.

ಸಂಘಟಕ, ಕವಿ, ನಾಟಕಕಾರ ಜಯ ಮಣಿಯಂಪಾರೆ ಸಂಘಟಿಸಿ ನಿರ್ವಹಿಸಿದ ಕವಿಗೋಷ್ಠಿಯನ್ನು ನಿವೃತ್ತ ಶಿಕ್ಷಕಿ, ಮಹಿಳಾ ಯಕ್ಷಗಾನ ಅರ್ಥಧಾರಿ, ಬರಹಗಾರ್ತಿ ಜಯಲಕ್ಷ್ಮೀ ಕಾರಂತ ಮಂಗಲ್ಪಾಡಿ ದೀಪಬೆಳಗಿಸಿ ಉದ್ಘಾಟಿಸಿದರು, ಅಗ್ನಿ ಫ್ರೆಂಡ್ಸ್‌ನ ಅಧ್ಯಕ್ಷ ಲೋಹಿತ್‌ ಕುಮಾರ್‌ ಉಪ್ಪಳ, ಧಾರ್ಮಿಕ ಸೇವಾ ಮುಂದಾಳು ಡಾ| ಶ್ರೀಧರ ಭಟ್‌ ಉಪ್ಪಳ ಉಪಸ್ಥಿತರಿದ್ದರು.

ಕವಿಗಳಾದ ದೇವರಾಜ್‌ ಕೆ.ಎಸ್‌., ಸುಲೋಚನಾ ಪಚ್ಚಿನಡ್ಕ, ಜಾನ್ವಿ ಡಿ’ ರಾಜ್‌ ಉಪ್ಪಳ, ಶಶಿಕಲಾ ಕುಂಬ್ಳೆ, ಶ್ರೀಗಿರಿ ಅನಂತಪುರ, ಮಲ್ಲಿಕಾ ಜೆ. ರೈ, ವಿದ್ಯಾವಾಣಿ ಮಠದ ಮೂಲೆ, ಗಣೇಶ್‌ ಪೈ ಬದಿಯಡ್ಕ, ಜ್ಯೋತ್ಸ್ನಾ ಎಂ. ಭಟ್‌ ಕಡಂದೇಲು, ಚೇತನಾ ಕುಂಬಳೆ, ವನಿತಾ ನೀರೊಳಿಕೆ, ಮೌನೇಶ್‌ ಆಚಾರ್ಯ ಕಡಂಬಾರು,  ಚಿತ್ರಕಲಾ ಕುಂಬಳೆ, ಶ್ಯಾಮಲಾ ರವಿರಾಜ್‌ ಕುಂಬಳೆ, ಮನೋಜ್‌ ಅಟ್ಟೆಗೋಳಿ, ಕುಶಾಲಾಕ್ಷಿ ಕಣ್ವತೀರ್ಥ, ಶಶಿಕಲಾ ಕುಂಬಳೆ, ಆಶಾಲತಾ ಪೆರಡಾನ ಮೂಲೆ, ರೂಪಶ್ರೀ ಮಾಣಿಲ, ದೀಕ್ಷಿತಾ ಕೋಳ್ಯೂರು, ಶೇಖರ ಶೆಟ್ಟಿ ಬಾಯಾರು, ಚೇತನಾ ಕುಂಬ್ಳೆ, ಜಯಲಕ್ಷ್ಮೀ  ಕೂಡ್ಲು, ರೂಪಶ್ರೀ ಮಾಣಿಲ, ದೀಕ್ಷಿತ ಕೋಳ್ಯೂರು, ಚೇತನಾ ಕುಂಬ್ಳೆ, ಶ್ಯಾಮಲಾ ರವಿರಾಜ್‌ ಕುಂಬಳೆ, ಜಯಲಕ್ಷ್ಮೀ ಕೂಡ್ಲು, ಶರ್ಮಿಳಾ ಬಜಕೂಡ್ಲು, ಚಿತ್ರಕಲಾ ಕುಂಬಳೆ ಮುಂತಾದ ಕವಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next