Advertisement

ನಿಸಾರ್ ಮೊದಲ ಕಾವ್ಯ ಗುರು…ಜನಮಾನಸದ ಕವಿ ಎಚ್.ಎಸ್. ವೆಂಕಟೇಶ್ ಮೂರ್ತಿ “ಬದುಕು-ಬರಹ”

09:45 AM Dec 05, 2019 | Nagendra Trasi |

ಬೆಂಗಳೂರು: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನುಡಿ ಹಬ್ಬ ಈ ಬಾರಿ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕವಿತೆ ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ ಮೊದಲಾದ ಪ್ರಕಾರಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ.

Advertisement

ಆಧುನಿಕ ಸಾಹಿತ್ಯದ ಕೃತಿಗಳನ್ನು ಸಾಹಿತ್ಯ ಪ್ರಿಯರಿಗೆ ಕೊಟ್ಟ ಮಹತ್ವದ ಲೇಖಕರಲ್ಲಿ ಎಚ್ ಎಸ್ ಕೂಡಾ ಒಬ್ಬರಾಗಿದ್ದಾರೆ. ಮಕ್ಕಳ, ಯುವ ಪೀಳಿಗೆಗೆ ಬೇಕಾದ ಗೀತೆಗಳನ್ನು ರಚಿಸಿ ಕವಿಯಾಗಿಯೂ ಗುರುತಿಸಿಕೊಂಡ ಹೆಗ್ಗಳಿಕೆ ಇವರದ್ದಾಗಿದೆ.

ಎಚ್ ಎಸ್ ಕಾವ್ಯ ಗುರು ನಿಸಾರ್ ಅಹಮದ್:

1944ರ ಜೂನ್ 23ರಂದು ಶಿವಮೊಗ್ಗ ಜಿಲ್ಲೆಯ ಹೊದಿಗ್ಗೆರೆ ಗ್ರಾಮದಲ್ಲಿ ಜನಿಸಿದ್ದರು. ಬಾಲ್ಯದ ಹೆಸರು ಶ್ರೀನಿವಾಸ ಎಂಬುದಾಗಿತ್ತು. ತಂದೆ ನಾರಾಯಣ ಭಟ್, ತಾಯಿ ನಾಗರತ್ನಮ್ಮ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು.

ನರಸಿಂಹ ಶಾಸ್ತ್ರಿಗಳು ವೆಂಕಟೇಶಮೂರ್ತಿಯವರಿಗೆ ಕುವೆಂಪು, ಬೇಂದ್ರೆ, ಗೊರೂರು, ಮಾಸ್ತಿ, ಕಾರಂತ ಮೊದಲಾದವರ ಕೃತಿಗಳನ್ನು ಪರಿಚಯಿಸಿದ್ದರು. ಹೀಗೆ ತಮ್ಮ ಚಿಂತನಾ ಕ್ರಮ ಬದಲಾಯಿಸಿಕೊಂಡ ಎಚ್ ಎಸ್ ಹೊಸ ಸಾಹಿತ್ಯ ಪ್ರಪಂಚಕ್ಕೆ ಪ್ರವೇಶಿಸಿದ್ದರು.

Advertisement

ಎಚ್ ಎಸ್ ತಮ್ಮ ಮೊದಲ ಕವನ ಸಂಕಲನ “ಪರಿವೃತ್ತ”ವನ್ನು ನರಸಿಂಹ ಶಾಸ್ತ್ರಿಗಳಿಗೆ ಅರ್ಪಿಸಿದ್ದಾರೆ. ಹೀಗೆ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರು ಎಚ್ ಎಸ್ ಅವರನ್ನು ಗಮನಿಸಿದ್ದ ನಂತರ ಅವರ ಒಡನಾಟ, ಪ್ರೋತ್ಸಾಹ ಮೂರ್ತಿಯವರಲ್ಲಿ ಹೊಸ ವಿಶ್ವಾಸ ಮೂಡಿಸಿತ್ತು. ನಿಸಾರ್ ತಮ್ಮ ಮೊದಲ ಕಾವ್ಯ ಗುರು ಎಂದು ಈಗಲೂ ನೆನಪಿಸಿಕೊಳ್ಳುತ್ತಾರೆ.

ಮೂರ್ತಿಯವರು ಮಲ್ಲಾಡಿಹಳ್ಳಿಯ ಶಾಲೆಯಲ್ಲಿ ಬಹುಬೇಗ ಜನಪ್ರಿಯರಾದರು. ಇಲ್ಲಿಯೇ ಅವರ ಸಾಹಿತ್ಯದ ಓದಿಗೂ, ರಚನೆಗೂ ಉತ್ತಮ ಪರಿಸರವಿತ್ತು. ಹಿರಿಯ ಅಧ್ಯಾಪಕರಾಗಿದ್ದ ಜಿಎಲ್ ರಾಮಪ್ಪನವರು ಕಥೆಗಾರ ಎನ್.ಎಸ್ ಚಿದಂಬರ ರಾವ್ ಅವರೂ ಗಂಭೀರ ಸಾಹಿತ್ಯ ಚರ್ಚೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಷ್ಟು ಅಧ್ಯಯನ ಶೀಲರಾಗಿದ್ದರು.

ಎಚ್ ಎಸ್ ವಿ ರಚಿಸುತ್ತಿದ್ದ ಕವನಗಳನ್ನು ಓದಿ ಅಧ್ಯಾಪಕರು ಪ್ರೋತ್ಸಾಹಿಸುತ್ತಿದ್ದರು. ತಾಯಿಯ ತವರು ಮನೆಯಲ್ಲಿ ನಡೆಯುತ್ತಿದ್ದ ಗಮಕವಾಚನ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಭಾವದಿಂದ ಕವನ ಬರೆಯಲು ಪ್ರೇರಣೆ ಎಂಬುದು ಎಚ್ ಎಸ್ ನೆನಪಿಸಿಕೊಂಡಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎ ಪದವಿ, ಬೆಂಗಳೂರು ವಿವಿಯಿಂದ ಎಂಎ ಪದವಿ ಪಡೆದಿರುವ ಎಚ್ ಎಸ್ ವೆಂಕಟೇಶಮೂರ್ತಿಯವರು ಕನ್ನಡದಲ್ಲಿ ಕಥನ ಕವನಗಳು ಮಹಾಪ್ರಬಂಧ ಮಂಡಿಸಿ, ಪಿಎಚ್ ಡಿ ಪಡೆದಿದ್ದರು. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಸುಮಾರು ಮೂವತ್ತು ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು.

ಬಿಡುವಿಲ್ಲದ ಬರವಣಿಗೆಯ ನಡುವೆಯೂ ಚಲನಚಿತ್ರ ಮತ್ತು ರಂಗಭೂಮಿ ಜತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದ ಎಚ್.ಎಚ್ ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು, ಕ್ರೌರ್ಯ, ಕೊಟ್ಟ, ಮತದಾನ ಸಿನಿಮಾಗಳಿಗೆ ಹಾಡುಗಳ ರಚನೆ, ಕೆಲವಕ್ಕೆ ಸಂಭಾಷಣೆ, ದೂರದರ್ಶನ ಧಾರಾವಾಹಿಗಳಾದ ಯಾವ ಜನ್ಮದ ಮೈತ್ರಿ, ಸವಿಗಾನ, ಮುಕ್ತಕ್ಕೆ ಶೀರ್ಷಿಕೆ ಗೀತೆ ಬರೆದಿದ್ದರು. ಅನಂತ ನಮನ, ತೂಗು ಮಂಚ, ಸುಳಿಮಿಂಚು, ಅಪೂರ್ವ ರತ್ನ, ಭಾವಭೃಂಗ-ಭಾವಗೀತೆಗಳ ಧ್ವನಿಸುರುಳಿಗಳು.

ಪ್ರಮುಖ ಕವನ ಸಂಕಲನಗಳು:

ಪರಿವೃತ್ತ, ಬಾಗಿಲು ಬಡಿವ ಜನಗಳು, ಮೊಖ್ತಾ, ಒಣ ಮರದ ಗಿಳಿಗಳು, ಮರೆತ ಸಾಲುಗಳು, ಸೌಗಂಧಿಕಾ, ಹರಿಗೋಲು, ವಿಸರ್ಗ, ಎಲೆಗಳು ನೂರಾರು, ಅಗ್ನಿಸ್ತಂಭ, ಎಷ್ಟೊಂದು ಮುಖ, ಮೂವತ್ತು ಮಳೆಗಾಲ

ಕಥಾ ಸಂಕಲನಗಳು:

ಬಾಣಸವಾಡಿಯ ಬೆಂಕಿ, ಪುಟ್ಟಾರಿಯ ಮತಾಂತರ

ಕಾದಂಬರಿಗಳು:

ತಾಪಿ, ಅಮಾನುಷರು, ಕದಿರನ ಕೋಟೆ, ಅಗ್ನಿಮುಖಿ

Advertisement

Udayavani is now on Telegram. Click here to join our channel and stay updated with the latest news.

Next