Advertisement

ಬೆಳದಿಂಗಳ ಆಟ

06:00 AM Jun 21, 2018 | |

ಬಾನಂಗಳ ಕಪ್ಪಾಯಿತಣ್ಣ
ಚುಕ್ಕಿ ಚಂದ್ರಮರು ಬಂದಾಯಿತಣ್ಣ

Advertisement

ಬನ್ನಿ ಗೆಳೆಯರೆ ಹೋಗೋಣ
ಆಕಾಶದ ಏಣಿ ಹತ್ತೋಣ

ಮೋಡಗಳ ಮರೆಯಲ್ಲಿ ಅಡಗೋಣ
ಕಣ್ಣಾಮುಚ್ಚಾಲೆ ಆಡೋಣ

ಹಾಡುತ, ಆಡುತ ಕುಣಿಯೋಣ
ಸಂತಸದಿಂದಲಿ ನಲಿಯೋಣ 

ಚುಕ್ಕಿಗಳ ರಾಶಿಯ ಎಣಿಸೋಣ 
ಬೆಳದಿಂಗಳ ಊಟ ಮಾಡೋಣ

Advertisement

ಬೇಗನೆ ಆಟವ ಮುಗಿಸೋಣ
ಚಾದರ ಹೊದ್ದು ಮಲಗೋಣ

– ಜಮುನಾ ರಾಣಿ ಹೆಚ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next