Advertisement
2021 ಫೆಬ್ರವರಿ ತಿಂಗಳಲ್ಲಿ ಮಹಿಳಾ ಠಾಣೆಯಲ್ಲಿ ಬಲವಂತದ ಭ್ರೂಣಹತ್ಯೆ ಮಾಡಿಸಿರುವ ಕುರಿತಂತೆ ಸಂತ್ರಸ್ತ ಬಾಲಕಿಯೊಬ್ಬಳು ನೀಡಿದ ಹೇಳಿಕೆ ಆಧಾರದಲ್ಲಿ ಪೋಕೊÕ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆದರೆ ಬಳಿಕ ಬಾಲಕಿ ಮೊದಲಿನ ಹೇಳಿಕೆ ಹಿಂಪಡೆದು, ತನ್ನ ತಂದೆ ಮೂರು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳಾ ಠಾಣೆಯ ಎಸ್‌ಐ ಶ್ರೀಕಲಾ ಅವರ ಬಳಿ ಆರೋಪ ಮಾಡಿದ್ದಳು.
Related Articles
ಸಂತ್ರಸ್ತೆಯ ತಿರುಚಿದ ಹೇಳಿಕೆ ಆಧಾರದಲ್ಲಿ ತನಿಖಾ ಧಿಕಾರಿ ದೋಷಾ ರೋಪಣ ಪಟ್ಟಿ ಸಲ್ಲಿಸಿದ್ದಾರೆ. ನೈಜ ಹಾಗೂ ಸಂಭಾವ್ಯ ತಪ್ಪಿತಸ್ಥರನ್ನು ರಕ್ಷಿಸುವ ಸಲುವಾಗಿ ಅಮಾಯಕ ವ್ಯಕ್ತಿಗಳ ಮೇಲೆ ವೃಥಾ ಉಂಟಾಗುವ ದುಷ್ಪರಿಣಾಮಕ್ಕೆ ತನಿಖಾಧಿಕಾರಿ ಮತ್ತು ಅವರ ತಂಡವನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮತ್ತು ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು ಅಭಿಪ್ರಾಯಪಟ್ಟಿದ್ದಾರೆ.
Advertisement
ತನಿಖಾ ಧಿಕಾರಿ ಮತ್ತು ಅವರ ತಂಡವು ಸಂತ್ರಸ್ತೆಯ ತಂದೆಗೆ 4 ಲಕ್ಷ ರೂ. ಹಾಗೂ ಆರೋಪಿ ಎಂದು ಗುರುತಿಸಲಾದ ಇನ್ನೊಬ್ಬ ವ್ಯಕ್ತಿಗೆ 1 ಲಕ್ಷ ರೂ.ಯನ್ನು 40 ದಿನಗಳ ಒಳಗೆ ಪಾವತಿಸಬೇಕು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ. ತನಿಖೆಯ ಲೋಪ, ದಾಖಲೆಗಳನ್ನು ತಿರುಚಿರುವುದಕ್ಕೆ, ಹುದ್ದೆ ಮತ್ತು ಅಧಿ ಕಾರ ದುರ್ಬಳಕೆಗೆ ತನಿಖಾ ಧಿಕಾರಿ ಮತ್ತು ಅವರ ತಂಡವೇ ಹೊಣೆಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ಆದೇಶದ ಪ್ರತಿಯನ್ನು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಮಂಗಳೂರು ಪೊಲೀಸ್ ಕಮಿನಷರ್ ಅವರಿಗೆ ಕಳುಹಿಸುವಂತೆ ನಿರ್ದೇಶನ ನೀಡಿದ್ದಾರೆ.
ಹೈಕೋರ್ಟ್‌ಗೆ ಮೇಲ್ಮನವಿಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ತನಿಖಾಧಿಕಾರಿಯವರು, ಯಾವುದೇ ಪ್ರಕರಣದಲ್ಲಿ 90 ದಿನದೊಳಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಬೇಕು. ಆದರೆ ಸಂತ್ರಸ್ತೆ ಹೇಳಿಕೆ ಬದಲು ಮಾಡಿದ ಕಾರಣ ಆರೋಪಿಗಳ ಡಿಎನ್‌ಎ ವರದಿ ಬರಲು ವಿಳಂಬವಾಗಿತ್ತು. 90 ದಿನದೊಳಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದೆವು. ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.