ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದ ನೂರು ನಗರದ ವಿವಿ ಪುರಂನಲ್ಲಿ ನಡೆದ ಪೋಕ್ಸೋ ಪ್ರಕರಣದಲ್ಲಿ ತಪ್ಪಿತಸ್ಥನಿಗೆ 13 ವರ್ಷ ಕಠಿಣ ಕಾರಾಗೃಹ, 15 ಸಾವಿರ ರೂ. ದಂಡ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಫ್‌ಟಿಎಸ್‌ಸಿ-1ರ ನ್ಯಾಯಾಧೀಶೆ ಬಿ.ಸಿ.ಭಾನುಮತಿ ತೀರ್ಪು ನೀಡಿದ್ದಾರೆ.
ಗೌರಿಬಿದನೂರು ತಾಲೂಕಿನ ಕಡ ಬೂರು ಗ್ರಾಮದ ಆರೋಪಿ ನರಸಿಂಹ ಮೂರ್ತಿ ಅಲಿಯಾಸ್ ಮೂರ್ತಿ (23) ಎಂಬಾತನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಏನಿದು ಪ್ರಕರಣ: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ವಿವಿ ಪುರಂ ನಿವಾಸಿ ಮುರಳೀಧರ್ ಬಿನ್ ಲೇಟ್ ರತ್ನಯ್ಯಶೆಟ್ಟಿ 27-8-2018 ರಂದು ನೀಡಿದ ದೂರಿನ ಮೇರೆಗೆ ಗೌರಿ ಬಿದನೂರಿನ ನಗರ ಪೊಲೀಸ್ ಠಾಣೆ ಯಲ್ಲಿ 187/2018 ಕಲಂ 376(1) ಐಪಿಸಿ ಜೊತೆಗೆ 4 ಮತ್ತು 8 ಪೋಕ್ಸೋ ಕಾಯ್ದೆ 2012ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರಕ್ಷಕ ವೃತ್ತ ನಿರೀ ಕ್ಷಕ ವೈ.ಅಮರನಾರಾಯಣ ಅವರು ತನಿಖೆ ಕೈಗೊಂಡು ದೋಷಾ ರೋಪಣ ಪಟ್ಟಿ ಸಲ್ಲಿಸಿದರು.
ಇದನ್ನೂ ಓದಿ:- ಸಾಲ ವಿತರಣೆಯಲ್ಲಿ ತಾರತಮ್ಯ ಮಾಡಿಲ್ಲ
ನ್ಯಾಯಾಧೀಶರು ವಾದ-ಪ್ರತಿವಾದ ಆಲಿಸಿ ಆರೋಪಿ ನರಸಿಂಹಮೂರ್ತಿ ಅಲಿಯಾಸ್ ಮೂರ್ತಿ (23) ಎಂಬಾತನಿಗೆ ಸಾಕ್ಷ್ಯಾಧಾರವನ್ನು ಪರಿಶೀಲಿಸಿ ತಪ್ಪಿತಸ್ಥವೆಂದು ಪರಿಗಣಿಸಿ 13 ವರ್ಷ ಕಠಿಣ ಕಾರಾಗೃಹ, 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರಿ ಅಭಿಯೋಜಕರಾಗಿ ಮುನಿ ರೆಡ್ಡಿ ಅವರು ವಾದಮಂಡಿಸಿದರು. ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ವೆಸಗುವುದು ಶಿಕ್ಷಾರ್ಹ ಅಪರಾಧವಾಗಿದೆ. ಆರೋಪಿಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಸಿಪಿಐ ವೈ.ಅರಮನಾರಾಯಣ, ಆರೋ ಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನಂದಿಸಿದ್ದಾರೆ.