ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯೊಬ್ಬನಿಗೆ ಸಂತ್ರಸ್ತೆಯನ್ನು ವರಿಸಲು ಹೈಕೋರ್ಟ್ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಿದೆ. ಪೋಕ್ಸೋ ಕಾಯ್ದೆಯಡಿ ತನ್ನ ಮೇಲೆ ಮೈಸೂರಿನ ಫಾಸ್ಟ್‌ಟ್ರ್ಯಾಕ್ ಕೋರ್ಟ್‌ನಲ್ಲಿ ನಡೆಯುತ್ತಿರುವ ರದ್ದು ಪಡಿಸಬೇಕು ಎಂದು ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸಂತ್ರಸ್ತೆಯನ್ನು ಮದುವೆಯಾ ಗಲು ಜುಲೈ 3ರವರೆಗೆ ಆರೋಪಿಗೆ ಜಾಮೀನು ನೀಡಿದೆ.
ಸಂತ್ರಸ್ತೆಯನ್ನು ಮದುವೆಯಾಗಿ ಜುಲೈ 3ರ ಸಂಜೆ ಹಿಂದಿರುಗಬೇಕು, ಜುಲೈ 4 ರಂದು ವಿವಾಹ ನೋಂದಣಿ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಜಾಮೀನಿನ ಮೇಲೆ ಹೊರಗಿರುವ ಸಂದರ್ಭದಲ್ಲಿ ವಾರಕ್ಕೊಮ್ಮೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹಾಜರಾಗಬೇಕು. ಒಂದು ವೇಳೆ ಜಾಮೀನಿನ ಷರತ್ತು ಮತ್ತು ಉದ್ದೇಶವನ್ನು ಉಲ್ಲಂಘಿಸಿದರೆ ನ್ಯಾಯಾಲಯ ಗಂಭೀರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಆರೋಪಿ ಮತ್ತು ಸಂತ್ರಸ್ತೆ ಪರಸ್ಪರ ಪ್ರೀತಿಸುತ್ತಿದ್ದು, 2023ರಲ್ಲಿ ಸಂತ್ರಸ್ತೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಸಂತ್ರಸ್ತೆಯ ತಾಯಿ ಪೊಲೀಸ್ ದೂರು ನೀಡಿದ್ದರು. ಆಗ ಸಂತ್ರಸ್ತೆಗೆ 16 ವರ್ಷ 9 ತಿಂಗಳಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಾದ ಮರುದಿನದಿಂದಲೇ ಆರೋಪಿ ಬಂಧನದಲ್ಲಿದ್ದಾನೆ. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಆರೋಪಿ ಮತ್ತು ಸಂತ್ರಸ್ತೆ ಪರಸ್ಪರ ಪ್ರೀತಿಸುತ್ತಿದ್ದರು. ಪರಸ್ಪರ ಲೈಂಗಿಕ ಸಂಪರ್ಕದಿಂದ ಜನಿಸಿದ ಮಗುವಿಗೆ ಈಗ ಒಂದು ವರ್ಷವಾಗಿದೆ. ಹಾಗೆಯೇ ಈಗ ಸಂತ್ರಸ್ತೆಗೆ 18 ವರ್ಷ ತುಂಬಿದೆ. ಅವರಿಬ್ಬರು ಮದುವೆ ಯಾಗಲು ನಿರ್ಧರಿಸಿದ್ದು, ಪೋಷಕರು ಒಪ್ಪಿಕೊಂಡಿ ದ್ದಾರೆ. ಈ ರಾಜೀಸಂಧಾನವನ್ನು ಪರಿಗಣಿಸಿ ಪ್ರಕರಣವನ್ನು ಇತ್ಯರ್ಥಪಡಿಸಬೇಕು ಎಂದು ಆರೋಪಿ ಮತ್ತು ಸಂತೃಸ್ತೆಯ ಪರ ವಕೀಲರು ನ್ಯಾಯಲಯದಲ್ಲಿ ನಿವೇದಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಮತ್ತು ಸಂತ್ರಸ್ತೆ ಮಗು ವಿನ ತಂದೆ- ತಾಯಿ ಎಂಬುದನ್ನು ಡಿಎನ್‌ಎ ಪರೀಕ್ಷೆ ಋಜುವಾತು ಮಾಡಿದೆ.
ಸಣ್ಣ ಮಗುವಿಗೆ ಈ ಹಿಂದೆ ಏನೆಲ್ಲಾ ಘಟಿಸಿದೆ ಎಂಬುದರ ಅರಿವಿಲ್ಲ. ಮಗು ಭವಿಷ್ಯ ದಲ್ಲಿ ಯಾವುದೇ ರೀತಿಯ ಅವಮಾನ ಎದುರಿಸಬಾ ರದು. ತಾಯಿ. ಮಗುವಿನ ಹಿತಾಸಕ್ತಿಯ ರಕ್ಷಣೆ ಆಗಬೇ ಕಿದೆ. ಹಾಗಾಗಿ ಆರೋಪಿಗೆ ಸಂತ್ರಸ್ತೆಯನ್ನು ಮದುವೆ ಯಾಗಲು ಆರೋಪಿಗೆ ಅವಕಾಶ ನೀಡುವುದು ಸೂಕ್ತ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.