Advertisement
ಈ ಮೊಬೈಲ್ ಪೋನ್ M2010J19CG ಮೊಡೆಲ್ ನಂಬರಿನಲ್ಲಿ ಬರುವ ನಿರೀಕ್ಷೆಗಳಿದ್ದು, ಈ ಬಗ್ಗೆ ಬೇಂಚ್ ಮಾರ್ಕ್ ಸೈಟ್ ಗೀಕ್ ಬೇಂಚ್‌ನಲ್ಲಿ ಮಾಹಿತಿ ಹರಿದಾಡಿತ್ತು. ಈ ಪೋನ್ ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರಲಿರುವ ರೆಡ್‌ಮಿ ನೋಟ್ 10 ಮಾದರಿಯಲ್ಲೇ ಇರಲಿದೆ ಎಂದು ಊಹಿಸಲಾಗಿದೆ.
Related Articles
Advertisement
Poco ತಾನು ಮಾರುಕಟ್ಟೆಗೆ ಪರಿಚಯಿಸಲಿರುವ ಹೊಸ ಮೊಬೈಲ್ ಕುರಿತಾಗಿ ಯಾವುದೇ ಹೆಚ್ಚಿನ ಮಾಹಿತಿಗಳನ್ನು ಇಲ್ಲಿಯವರೆಗೆ ಹಂಚಿಕೊಂಡಿಲ್ಲ. ಆದರೆ ಟಿಪ್ ಸ್ಟಾರ್ ಮುಖುಲ್ ಶರ್ಮ ತಮ್ಮ ಯೂಟೂಬ್ ವೀಡಿಯೊದಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಈ ಮೊಬೈಲ್ 16.57 ಇಂಚುಗಳ ಫುಲ್ ಹೆಚ್ ಡಿ ಡಿಸ್‌ಪ್ಲೇ ಹೊಂದಿರಲಿದ್ದು, ಜೊತೆಗೆ ಡೋಟ್ ಡ್ರೋಪ್ ವಿನ್ಯಾಸವನ್ನು ಒಳಗೊಂಡಿರುವ ಸಾಧ್ಯತೆಗಳಿವೆ. (company speak for a waterdrop-style notch)
Poco M3 ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ ಡ್ರ‍್ಯಾಗನ್ 662 SoC ಅನ್ನು ಒಳಗೊಂಡಿರಲಿದೆ. ಹಾಗೆಯೇ ಈ ಮೊಬೈಲ್ ಪೋನ್ 48 ಮೆಗಾಪಿಕ್ಸೆಲ್ ಒಳಗೊಂಡ ಟ್ರಿಬಲ್ ರಿಯಲ್ ಕ್ಯಾಮರಾ ಹೋದಿರುವ ಸಾಧ್ಯತೆಗಳಿವೆ ಎಂದಿದ್ದಾರೆ. ಈ ಪೋನ್ ಡ್ಯುವೆಲ್ ಸ್ಪೀಕರ್ ಮತ್ತು 6000 ಎಮ್ ಹೆಚ್ ಬ್ಯಾಟರಿ ಸಾಮರ್ಥ್ಯದೊಂದಿಗೆ 18 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯಗಳನ್ನು ಒಳಗೊಂಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕೋವಿಡ್ ನಿಯಂತ್ರಣದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ : ಪ್ರಿಯಾಂಕ್ ಖರ್ಗೆ ಟೀಕೆ