Advertisement

ಜಾಮ್‌ ತಯಾರಿಕೆಯಿಂದ ಜೇಬು ತುಂಬಾ ಹಣ

10:46 AM Apr 13, 2020 | mahesh |

ಜನ ಆಹಾರದ ವಿಷಯದಲ್ಲಿ ಹಿಂದೆಂದಿಗಿಂತಲೂ ಕಾಳಜಿ ತೋರುತ್ತಿದ್ದಾರೆ. ಹೀಗಾಗಿ, ನೈಸರ್ಗಿಕ/ ಆಗ್ಯಾನಿಕ್‌ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕೆಮಿಕಲ್‌ ಫ್ರಿ ಹಣ್ಣು- ತರಕಾರಿಗಳತ್ತ ಜನರು  ವಾಲುತ್ತಿದ್ದಾರೆ. ಅವುಗಳಿಂದ ತಯಾರಾದ ಕೃಷಿ ಉತ್ಪನ್ನಗಳನ್ನೂ ಇಷ್ಟಪಡುತ್ತಿದ್ದಾರೆ. ಇಂಥ  ಹೊತ್ತಿನಲ್ಲೇ, ಜಾಮ್‌ ಬಿಜಿನೆಸ್‌ಗೆ ಕೈ ಹಾಕಿದರೆ, ಲಾಭದಾಯಕವಾಗುವ ಸಾಧ್ಯತೆ ಹೆಚ್ಚಿದೆ.

Advertisement

ಜಾಮ್‌ ಅನ್ನು ರಾಸಾಯನಿಕ ಮುಕ್ತಗೊಳಿಸುವುದರಿಂದ, ಅದೇ ಪ್ಲಸ್‌ ಪಾಯಿಂಟ್‌ ಆಗುತ್ತದೆ. ಹಣ್ಣಿನ ಪಲ್ಪ್ ಮತ್ತು ಸಕ್ಕರೆ, ಜಾಮ್‌ ತಯಾರಿಕೆಗೆ ಬೇಕಾಗಿರುವ ಮೂಲವಸ್ತುಗಳು. ಭಾರತ, ಹಣ್ಣು- ತರಕಾರಿಗಳ ಉತ್ಪಾದನೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಈಗಂತೂ, ಬೆಳಗ್ಗಿನ ಬ್ರೇಕ್‌ ಫಾಸ್ಟ್ ಗೆ ಮಾತ್ರವಲ್ಲ;
ಹೋಟೆಲ್, ಬೇಕರಿಗಳಿಗೂ ಅಧಿಕ ಪ್ರಮಾಣದಲ್ಲಿ ಜಾಮ್‌ ಬೇಕಾಗುತ್ತದೆ. ಈ ಕಾರಣಕ್ಕೆ, ಜಾಮ್‌ಗೆ ಸಹಜವಾಗಿಯೇ ತುಂಬಾ ಬೇಡಿಕೆಯೂ ಇದೆ. ಇದನ್ನೆಲ್ಲಾ
ಗಮನಿಸಿದರೆ, ಗುಣಮಟ್ಟದ ಜಾಮ್‌ ತಯಾರಿಸಿ, ಕೈ ತುಂಬಾ ಕಾಸು ಮಾಡುವ ಅವಕಾಶವೀಗ ಸೃಷ್ಟಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next