Advertisement

ಬಂತು ನೋಡಿ ಪಾಕೆಟ್‌ ಆಧಾರ್‌ ಕಾರ್ಡ್‌!

08:20 PM Nov 02, 2020 | Suhan S |

ಸರ್ಕಾರಿ ಕಚೇರಿಗಳಿಗೆ ಹೋದಾಗಲೋ, ಉದ್ಯೋಗ ಹುಡುಕುತ್ತಿರುವಾಗಲೋ ಅಥವಾ ಶಾಲಾ-ಕಾಲೇಜುಗಳಲ್ಲಿ ಕೆಲವೊಮ್ಮೆ ಆಧಾರ್‌ ಕಾರ್ಡ್‌  ಗಳನ್ನು ಕೇಳುವುದು ಈಗಂತೂ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಈ ಆಧಾರ್‌ ಕಾರ್ಡ್‌ಗಳು ಕೂಡಾ  ಎಟಿಎಂ ಕಾರ್ಡ್‌ನಂತೆಯೇ ಇದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಅನಿಸುವುದು ಸಹಜ.

Advertisement

ಅಂಥವರಿಗಾಗಿಯೇ ಇದೀಗ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಎಟಿಎಂ ಗಾತ್ರದ ಆಧಾರ್‌ ಕಾರ್ಡ್‌ ನೀಡಲಿದೆ!

ಏನಿದು ಪಾಕೆಟ್‌ ಆಧಾರ್‌ ಕಾರ್ಡ್‌? : ಅತ್ಯಾಧುನಿಕ ಭದ್ರತಾ ಪೀಚರ್‌ ಹೊಂದಿರಲಿರುವ ಈ ಕಾರ್ಡ್‌ನ ಎಟಿಎಂ ಕಾರ್ಡ್‌ ಗಾತ್ರದಲ್ಲಿ ಪಾಲಿವಿನಿಲ್‌ ಕ್ಲೋರೈಡ್‌ (ಪಿವಿಸಿ)ಕಾರ್ಡ್‌ ನಲ್ಲಿ ಮುದ್ರಿಸಲಾಗುತ್ತದೆ. ಇದರಿಂದಾಗಿ ಆಧಾರ್‌ ಕಾರ್ಡ್‌ಗಳನ್ನು ಜೇಬಿನಲ್ಲಿಯೇ ಸುಲಭವಾಗಿ ಕೊಂಡೊಯ್ಯಬಹುದಾಗಿದೆ.

ಕಾರ್ಡ್‌ ಪಡೆಯುವುದು ಹೇಗೆ? :

ಈಗಾಗಲೇ ಆಧಾರ್‌ ಕಾರ್ಡ್‌ ಹೊಂದಿರುವ ಜನರು ಪಿವಿಸಿ ಕಾರ್ಡ್‌ ಪಡೆಯಬಹುದಾಗಿದೆ. ಯುಐಡಿಎಐನ ಅಧಿಕೃತ ವೆಬ್‌ಸೈಟ್‌  https://uidai.gov.in/  ಅಥವಾ   https://resident.gov.in/  ಗೆ ಭೇಟಿ ನೀಡಿ “ಆರ್ಡರ್‌ ಆಧಾರ್‌ ಕಾರ್ಡ್‌’ ಆಯ್ಕೆ ಮೇಲೆ ಕ್ಲಿಕ್‌ ಮಾಡಬೇಕು. ನಂತರ ಮುಂಬರುವ ಸೂಚನೆಗಳನ್ನು ಪಾಲಿಸುತ್ತಾ ಹೋದಂತೆ ಕೊನೆಯಲ್ಲಿ ಮನವಿ ಸ್ವೀಕೃತಗೊಳ್ಳುತ್ತದೆ. ಶುಲ್ಕ ಕೇವಲ ರೂ.50 ಪಾವತಿಸಿ ಪಿವಿಸಿ ಆಧಾರ್‌ಕಾರ್ಡ್‌ಗೆ ಮನವಿ ಸಲ್ಲಿಸಿದ 5-6 ದಿನದೊಳಗೆ ಸ್ಪೀಡ್‌ ಪೋಸ್ಟ್ ಮೂಲಕ ಆರ್ಡರ್‌ ಮಾಡಿದವರ ಮನೆಗೆ ತಲುಪಲಿದೆ ಎಂದು ಯುಐಡಿಎಐ ಹೇಳಿದೆ.

Advertisement

ಆಧಾರ್‌ ಪಿವಿಸಿ ಕಾರ್ಡ್‌ನ ಸೇವೆಯಲ್ಲಿ…..

  • ಉತ್ತಮ ಗುಣಮಟ್ಟದ ಮುದ್ರಣ.
  • ಪಿವಿಸಿ ಕಾರ್ಡ್‌ಗೆ ಹೆಚ್ಚು ಬಾಳಿಕೆ. ಒಯ್ಯಲು ಅನುಕೂಲಕರ.
  • ಹಾಲೋಗ್ರಾಂ, ಘೋಸ್ಟ್
    ಇಮೇಜ್‌ ಮೊದಲಾದ ಭದ್ರತಾ ಫೀಚರ್‌.
  • ಕಾರ್ಡ್‌ನಲ್ಲಿ ಉಬ್ಬಿದ ಆಧಾರ್‌ ಲಾಂಛನ ಇರುತ್ತದೆ.
  • ಮಳೆಯಲ್ಲೂ ಹಾಳಾಗದ ಕಾರ್ಡ್‌.
  • ಆಫ್ಲೈನ್‌ ಮೂಲಕವೂ ಪರಿಶೀಲಿಸಬಹುದು.

 

 -ಎಂ.ಎಸ್‌. ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next