Advertisement
ಪೋಣಿಸಿ ಮುತ್ತನು ಹಾಕಿದೆ ಮಾಲೆ
Related Articles
Advertisement
ನಾಚಿ ನೀರಾಗಿ ಇಬ್ಬನಿ ಕರಗಿಹುದು
ಮಿರ ಮಿರ ಮಿಂಚಲು ರವಿಯ ಕಿರಣ
ಹುಲ್ಲಿಗೆ ತಾಗಿ ಹೊಮ್ಮಿದೆ ಹೊಂಗಿರಣ..
ಗಿರಿ ಪರ್ವತಗಳ ಸಾಲು ಸಹ್ಯಾದ್ರಿಯಲಿ
ನೀಲಾದ್ರಿಯ ಸೊಗಸು ಮುಸ್ಸಂಜೆಯಲಿ
ತಲೆದೂಗಿ ಮರಗಳು ಕಾದಿರಲು ಸಾಲಲ್ಲಿ
ವರುಣ ಬರುವನು ಮೇಘಗಳ ಮರೆಯಲ್ಲಿ..
ಬೀಸಿ ಬರಲು ತಣ್ಣನೆ ಗಾಳಿ ಸವಿಯಾಗಿ
ಒಮ್ಮೊಮ್ಮೆ ಹಿತವಾಗಿ ಮತ್ತೂಮ್ಮೆ ಬಿರುಸಾಗಿ
ತೇಲಿ ಬರುತಿದೆ ಗಂಧರ್ವರ ಗಾನ ಸೊಗಸಾಗಿ
ಮೈ ಮರೆತು ನಿಂತೆ ಕೇಳುತ್ತಾ ಮೂಕನಾಗಿ..
ವನ್ಯಜೀವಿಗಳಿಗೆ ಆಸರೆಯು ಈ ವನ ರಾಣಿ
ನೋಡುಗರ ಮನ ತಣಿಸುವ ಸುಂದರ ಗಣಿ
ಬಾನತ್ತ ಮೈ ಚಾಚಿ ಮಲಗಿಹ ಪರ್ವತ ಶ್ರೇಣಿ
ಅದರಂದಕೆ ಸೋತು ಹೊಮ್ಮಿದೆ ಕಾವ್ಯವಾಣಿ..
ತ್ರಿಭುವನ್ ಗಂಗಾಧರ್,ದುಬೈ