ನವದೆಹಲಿ: ಮಂದಗತಿಯಲ್ಲಿರುವ ದೇಶದ ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಮಹತ್ವದ ನಿರ್ಧಾರಗಳನ್ನು ಶುಕ್ರವಾರ ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯ ಹೈಲೈಟ್ಸ್:
*ಬ್ಯಾಂಕ್ ಗಳ ವಾಣಿಜ್ಯ ವ್ಯವಹಾರಗಳ ವಿಚಾರದಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶಿಸುವುದಿಲ್ಲ
*250 ಕೋಟಿ ರೂಪಾಯಿಗಿಂತ ಅಧಿಕ ಮೊತ್ತದ ಸಾಲದ ಬಗ್ಗೆ ವಿಶೇಷ ಏಜೆನ್ಸಿ ಮೇಲ್ವಿಚಾರಣೆ ನೋಡಿಕೊಳ್ಳಲಿದೆ
*ದೇಶದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗಾಗಿ ಸರಕಾರ ಸಮರ್ಪಕವಾದ ನಿರ್ಧಾರ ಕೈಗೊಳ್ಳಲಿದೆ
*ಪಂಜಾಬ್ ನ್ಯಾಶನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಅನ್ನು ವಿಲೀನಗೊಳಿಸಲಾಗುವುದು
*ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ , ಇಂಡಿಯನ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್ ವಿಲೀನ
*ನೀರವ್ ಮೋದಿಯಂತಹವರ ವಂಚನೆ ತಡೆಯಲು ಎಸ್ ಡಬ್ಲ್ಯುಐಎಫ್ ಟಿ ಸಂದೇಶವನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಲಿಂಕ್ ಮಾಡಲಾಗುವುದು
*2018ರ ಡಿಸೆಂಬರ್ ಅಂತ್ಯದಲ್ಲಿ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಗಳಲ್ಲಿನ ಬ್ಯಾಡ್ ಗ್ರಾಸ್ ಲೋನ್ 8.65 ಲಕ್ಷ ಕೋಟಿಯಿಂದ 7.9 ಲಕ್ಷ ಕೋಟಿಗೆ ಇಳಿಕೆಯಾಗಿದೆ
*ಬ್ಯಾಂಕ್ ಗಳ ವಿಲೀನದಿಂದಾಗಿ ಕ್ಯಾಪಿಟಲ್ ಸಾಲದ ಮೊತ್ತ ಹೆಚ್ಚಳವಾಗಲಿದೆ
*ಆಂಧ್ರ ಬ್ಯಾಂಕ್, ಯೂನಿಯನ್ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್ ವಿಲೀನ
*ದೇಶದ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಗಳ ವಿಲೀನದೊಂದಿಗೆ ಒಟ್ಟು 27 ಬ್ಯಾಂಕ್ ಗಳಲ್ಲಿ 12 ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಗಳು ವಹಿವಾಟು ನಡೆಸಲಿದೆ.
*ಇಂಡಿಯನ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್ ಕೂಡಾ ವಿಲೀನ
*ಪಂಜಾಬ್ ನ್ಯಾಶನಲ್ ಬ್ಯಾಂಕ್, ಓಬಿಸಿ ಹಾಗೂ ಯೂನೈಟೆಡ್ ಬ್ಯಾಂಕ್ ವಿಲೀನದ ಮೂಲಕ ಭಾರತದ 2ನೇ ಅತೀ ದೊಡ್ಡ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಆಗಿ ಪರಿವರ್ತನೆ
*ಈಗಾಗಲೇ ವಿಲೀನಗೊಂಡಿರುವ ಬ್ಯಾಂಕ್ ಆಫ್ ಬರೋಡಾ, ದೇನಾ ಬ್ಯಾಂಕ್ ಹಾಗೂ ವಿಜಯ್ ಬ್ಯಾಂಕ್ ಸಿಬ್ಬಂದಿಗಳನ್ನು ತೆಗೆದುಹಾಕುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ
*ಯೂನಿಯನ್, ಆಂಧ್ರ ಮತ್ತು ಕಾರ್ಪೋರೇಶನ್ ಬ್ಯಾಂಕ್ ಗಳ ವಿಲೀನದೊಂದಿಗೆ ದೇಶದ 5ನೇ ಬೃಹತ್ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಆಗಲಿದ್ದು, ಒಟ್ಟು 14.6 ಲಕ್ಷ ಕೋಟಿ ವಹಿವಾಟು ನಡೆಸಲಿದೆ.
*ಪಂಜಾಬ್ ನ್ಯಾಶನಲ್ ಬ್ಯಾಂಕ್ ಮತ್ತು ಯುನೈಟೆಡ್ ಬ್ಯಾಂಕ್ ವಿಲೀನದೊಂದಿಗೆ ದೇಶದ 2ನೇ ಅತೀ ದೊಡ್ಡ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಆಗಲಿದ್ದು, ಒಟ್ಟು 17.95 ಲಕ್ಷ ಕೋಟಿ ವಹಿವಾಟು ನಡೆಸಲಿದೆ.
*ಪಂಜಾಬ್ ನ್ಯಾಶನಲ್ ಬ್ಯಾಂಕ್ ಗಳ ಉದ್ಯೋಗಿಗಳ ಸಂಖ್ಯೆ 65,116, ಓಬಿಸಿ ಬ್ಯಾಂಕ್ ಉದ್ಯೋಗಿಗಳ ಸಂಖ್ಯೆ 21,729, ಯುನೈಟೆಡ್ ಬ್ಯಾಂಕ್ ಉದ್ಯೋಗಿಗಳ ಸಂಖ್ಯೆ 13,804