Advertisement

ಪಿಎನ್‌ಬಿ ಬಹುಕೋಟಿ ವಂಚನೆ: ನೀರವ್‌ ಮೋದಿ, ಚೋಕ್ಸಿಗೆ ಸಮನ್ಸ್‌

11:46 AM Feb 16, 2018 | Team Udayavani |

ಮುಂಬಯಿ : ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ಗೆ 11,400 ಕೋಟಿ ರೂ.ವಂಚಿಸಿರುವ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಬಿಲಿಯಾಧಿಪತಿ ವಜ್ರ ಉದ್ಯಮಿ ನೀರವ್‌ ಮೋದಿ ಮತ್ತು ಆತನ ಉದ್ಯಮ ಪಾಲುದಾರ ಮೆಹುಲ್‌ ಚೋಕ್ಸಿ ಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ಜಾರಿ ಮಾಡಿದೆ. 

Advertisement

ಹಣ ಅಕ್ರಮ ಕಾಯಿದೆಯಡಿ ನೀರವ್‌ ಮೋದಿ ಮತ್ತು ಚೋಕ್ಸಿ ಅವರಿಗೆ ಸಮನ್ಸ್‌ ಜಾರಿ ಮಾಡಲಾಗಿದ್ದು ಅವರು ವಾರದೊಳಗೆ ಸಾಕ್ಷ್ಯ ನುಡಿಯಬೇಕು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಸಮನ್ಸ್‌ ನೊಟೀಸನ್ನು ಈ ಇಬ್ಬರು ಉದ್ಯಮಿಗಳ ಸಂಸ್ಥೆಗಳ ನಿರ್ದೇಶಕರಿಗೆ ತಲುಪಿಸಲಾಗಿದೆ. 

ನೀರವ್‌ ಮೋದಿ ಅವರು ತಮ್ಮದೇ ಹೆಸರಿನಲ್ಲಿ ಚಿನ್ನಾಭರಣಗಳ ಬ್ರಾಂಡ್‌ ಸರಣಿ ಮಳಿಗೆಗಳನ್ನು ನಡೆಸುತ್ತಿದ್ದಾರೆ; ಚೋಕ್ಸೀ ಅವರು ಗೀತಾಂಜಲಿ ಜೆಮ್ಸ್‌ನ ಪ್ರಮೋಟರ್‌ ಆಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next