Advertisement

ಪ್ರಧಾನಿ, ರಾಷ್ಟ್ರಪತಿ ಪ್ರವಾಸಕ್ಕೆ ವಿಶೇಷ ವಿಮಾನ: ಇದರಲ್ಲಿದೆ ಕ್ಷಿಪಣಿ ನಿರೋಧಕ ವ್ಯವಸ್ಥೆ !

05:43 PM Oct 02, 2020 | Mithun PG |

ಮಣಿಪಾಲ: ದೇಶದ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಿಗಳ ಪ್ರವಾಸಕ್ಕಾಗಿ ವಿಶೇಷವಾಗಿ ತಯಾರಿಸಲ್ಪಟ್ಟ ಏರ್‌ ಇಂಡಿಯಾ ಒನ್‌ ವಿಮಾನ ಭಾರತ ತಲುಪಿದೆ. ಅಮೆರಿಕದಿಂದ ದೆಹಲಿಯ ಏರ್‌ ಪೋರ್ಟ್ ಗೆ ಏರ್‌ ಇಂಡಿಯಾ ಒನ್‌ ಬಂದಿಳಿದಿದ್ದು, ಗಣ್ಯರ ಸಂಚಾರಕ್ಕೆ ಹಾಗೂ ಭದ್ರತೆ ಅನೂಕೂಲವಾಗುವಂತೆ ಈ ವಿಮಾನವನ್ನು ರೂಪಿಸಲಾಗಿದೆ.

Advertisement

2018ರಲ್ಲಿ ಯೋಜನೆಗೆ ಅಂಕಿತ:

ಗಣ್ಯರ ಸಂಚಾರಕ್ಕೆ ಹಲವು ಭದ್ರತಾ ಅಂಶಗಳನ್ನು ಹೊಂದಿದ ಎರಡು ವಿಮಾನಗಳನ್ನು ಮೀಸಲಿಡಲು ಸರಕಾರ ನಿರ್ಧರಿಸಿತ್ತು. ಅದರ ಭಾಗವಾಗಿ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾದಲ್ಲಿ ಪ್ರಯಾಣಿಕ ಸೇವೆಯಲ್ಲಿ ನಿರತವಾಗಿದ್ದ ಎರಡು ವಿಮಾನಗಳನ್ನು ಅಮೆರಿಕದ ಬೋಯಿಂಗ್‌ ಕಂಪನಿಗೆ 2018ರಲ್ಲಿ ಕಳುಹಿಸಿ, ಮಾರ್ಪಾಡು ಮಾಡಲು ಸೂಚಿಸಲಾಗಿತ್ತು. ಈ ವಿಮಾನಗಳು ಜುಲೈನಲ್ಲೇ ಭಾರತಕ್ಕೆ ಸಿಗಬೇಕಾಗಿದ್ದವು. ಆದರೆ ಕೋವಿಡ್ ಕಾರಣ ಜುಲೈನಲ್ಲಿ, ತಾಂತ್ರಿಕ ಕಾರಣದಿಂದ ಆಗಸ್ಟ್‌ನಲ್ಲಿ  ಹಸ್ತಾಂತರ ಮುಂದಕ್ಕೆ ಹೋಗಿತ್ತು.

ಇದನ್ನೂ ಓದಿ: ಹತ್ರಾಸ್ ಪ್ರಕರಣ:ರಾಜ್ಯದಲ್ಲಿ ಎಲ್ಲಾ ಮಹಿಳೆಯರ ರಕ್ಷಣೆ, ಭದ್ರತೆಗೆ ಸರ್ಕಾರ ಬದ್ಧ: ಸಿಎಂ ಯೋಗಿ

Advertisement

ಏರ್‌ ಫೋರ್ಸ್‌ ಒನ್‌ ಮಾದರಿಯ ಭದ್ರತಾ ಸೌಕರ್ಯ

ಅಮೆರಿಕ ಅಧ್ಯಕ್ಷರು ಬಳಸುವ ಏರ್‌ಫೋರ್ಸ್‌ ಒನ್‌ ರೀತಿಯ ಮಾದರಿಯಲ್ಲಿಯೇ  ಏರ್‌ ಇಂಡಿಯಾ ಒನ್‌ ಕೂಡ ಭದ್ರತಾ ಸೌಕರ್ಯ ಹೊಂದಿದ್ದು, ಕ್ಷಿಪಣಿ ದಾಳಿ ನಡೆದರೂ ಜಗ್ಗದ ಈ ವಿಮಾನದ ಮರು ವಿನ್ಯಾಸ, ವಿಮಾನ ಖರೀದಿ, ವಿವಿಐಪಿಗಳ ಓಡಾಟಕ್ಕೆ ತಕ್ಕಂತೆ ಬದಲಾವಣೆ ಮಾಡಲು 8400 ಕೋಟಿ ರು. ಖರ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ

ಬೋಯಿಂಗ್ 777 ಎಂಬ ಹೆಸರಿನ ಈ ವಿಮಾನಗಳು ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಹೊಂದಿದ್ದು, ಲಾರ್ಜ್‌ ಏರ್‌ಕ್ರಾಫ್ಟ್, ಇನ್ ಫ್ರೆರಾರ್ಡ್ ಕೌಂಟರ್ ಮೆಸರ್ಸ್ (ಎಲ್ಎಐಆರ್‌ಸಿಎಂ) ಹಾಗೂ ಸೆಲ್ಫ್  ಪೊಟೆಕ್ಷನ್‌ ಸೂಟ್ಸ್‌’ (ಎಸ್‌ಪಿಎಸ್‌)  ಸಿಸ್ಟಂಗಳು ಈ ವಿಮಾನದಲ್ಲಿದೆ.  ಸಮಾಜ ವಿದ್ರೋಹಿ ಶಕ್ತಿಗಳು ಹೆಗಲ ಮೇಲಿಟ್ಟು ನಡೆಸುವ ಕ್ಷಿಪಣಿ ದಾಳಿಯಿಂದ ರಕ್ಷಣೆ ಒದಗಿಸುವಲ್ಲಿಯೂ ಇದು ಸಹಕಾರಿಯಾಗಲಿದ್ದು, ಈ ಸಾಧನಗಳನ್ನು 1400 ಕೋಟಿ ರು. ವೆಚ್ಚದಲ್ಲಿ ಭಾರತಕ್ಕೆ ಒದಗಿಸಲು ಫೆಬ್ರವರಿಯಲ್ಲಿ ಅಮೆರಿಕ ನಿರ್ಧಾರ ಕೈಗೊಂಡಿತ್ತು.

ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಪ್ರಕರಣ: ಸಂತ್ರಸ್ತೆಯ ಮರಣೋತ್ತರ ಪರೀಕ್ಷೆಯ ವರದಿಯಲ್ಲೇನಿದೆ?

ನಿರಂತರವಾಗಿ 17 ಗಂಟೆ ಕಾಲ ಹಾರುತ್ತದೆ

ಈ ವಿಮಾನ ಅಲ್ಟ್ರಾ ಸೂಪರ್‌ ಆಗಿದ್ದು, ವಿವಿಐಪಿಗಳಿಗೆ ದೊಡ್ಡ ಕ್ಯಾಬಿನ್‌, ಕಿರಿದಾದ ತುರ್ತು ಚಿಕಿತ್ಸಾ ಘಟಕ ಸೇರಿದಂತೆ ನಿರಂತರವಾಗಿ 17 ಗಂಟೆ ಕಾಲ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಬಹುತೇಕ ಬ್ಯುಸಿನೆಸ್‌ ಕ್ಲಾಸ್‌ ಸೀಟ್‌ ಅಳವಡಿಕೆ ಮಾಡಲಾಗಿರುವ ಈ ವಿಮಾನವನ್ನು ವಾಯುಸೇನೆ ಪೈಲಟ್‌ಗಳಿಂದ ಮಾತ್ರ ಚಾಲನೆ ಮಾಡಲಾಗುತ್ತದೆ. ಈ ವಿಮಾನ ಅತ್ಯಾಧುನಿಕ ಸಂವಹನ ವ್ಯವಸ್ಥೆಯನ್ನು ಹೊಂದಿದ್ದು, ಹ್ಯಾಕ್‌ ಮಾಡಲಾಗದ ಆಡಿಯೋ ಮತ್ತು ವಿಡಿಯೋ ಸಂವಹನವನ್ನೂ ಕೂಡ ನಡೆಸಬಹುದು.

ಸದ್ಯ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಪ್ರಧಾನಿ ಪ್ರವಾಸಕ್ಕೆ ಈ ಬೋಯಿಂಗ್‌-747 ವಿಮಾನವನ್ನು ಬಳಸಲಾಗುತ್ತಿದ್ದು, ಮತ್ತೊಂದು ಬೋಯಿಂಗ್‌-777 ಏರ್‌ ಇಂಡಿಯಾ ಒನ್‌ ವಿಮಾನ ಮುಂದಿನ ದಿನಗಳಲ್ಲಿ ಭಾರತಕ್ಕೆ ಹಸ್ತಾಂತರ ಆಗಲಿದೆ.

ಇದನ್ನೂ ಓದಿ:“ಆತ ಯೋಗಿನೋ-ರೋಗಿನೋ” ಉ.ಪ್ರದೇಶ ಸಿಎಂ ಆದಿತ್ಯನಾಥ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Advertisement

Udayavani is now on Telegram. Click here to join our channel and stay updated with the latest news.

Next