Advertisement
ದಕ್ಷಿಣ ಜಿಲ್ಲೆಯ ಪ್ರವಾಸದಲ್ಲಿರುವ ಮುಖ್ಯಮಂತ್ರಿಯವರು ದ.ಕ. ಜಿ.ಪಂ.ನ ಸಭಾಂಗಣದಲ್ಲಿ ಪ್ರಧಾನಿ ಜತೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ಸಭೆ ನಡೆಯಲಿದೆ.
Related Articles
ಮುಖ್ಯಮಂತ್ರಿಯವರ ಬುಧವಾರದ ದ.ಕ. ಜಿಲ್ಲಾ ಪ್ರವಾಸ ಕಾರ್ಯಕ್ರಮ ಪರಿಷ್ಕರಣೆಗೊಂಡಿದೆ. ಬೆಳಗ್ಗೆ 10.20ಕ್ಕೆ ಬೆಂಗಳೂರಿನಿಂದ ಹೊರಟು 11.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
Advertisement
11.50ಕ್ಕೆ ಜಿ.ಪಂಗೆ ಆಗಮಿಸುವರು. ಅಪರಾಹ್ನ 3 ಗಂಟೆಗೆ ಮೂಡುಬಿದಿರೆಗೆ ತೆರಳಿ ಅಲ್ಲಿನ ಎಕ್ಸಲೆಂಟ್ ಪಿ.ಯೂ. ಕಾಲೇಜಿನ ನೂತನ ಅನ್ನದಾಸೋಹ ಕಟ್ಟಡ ಉದ್ಘಾಟನೆ, 3.30ಕ್ಕೆ ಜೈನ ಬಸದಿಗೆ ಭೇಟಿ, 3.50ಕ್ಕೆ ಮೂಡುಬಿದಿರೆಯ ಪ್ರಸ್‌ಕ್ಲಬ್ ಆವರಣದಲ್ಲಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸುವರು.
ಸಂಜೆ 4ರಿಂದ 5.30ರ ವರೆಗೆ ಮೂಡುಬಿದಿರೆಯ ಆಡಳಿತ ಸೌಧದ ಮುಂಭಾಗದಲ್ಲಿ ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. 5.40ಕ್ಕೆ ರಸ್ತೆ ಮೂಲಕ ಬಜಪೆಗೆ ಆಗಮಿಸಿ 6.50ಕ್ಕೆ ವಿಮಾನದಲ್ಲಿ ಬೆಂಗಳೂರಿಗೆ ತೆರಳುವರು.ಸಚಿವರಾದ ವಿ. ಸೋಮಣ್ಣ,ಸುನೀಲ್ ಕುಮಾರ್ ಅವರು ಕಾರ್ಯ ಕ್ರಮದಲ್ಲಿ ಭಾಗವಹಿಸಲಿದ್ದಾರೆ.