Advertisement

ಫೆ.10ಕ್ಕೆ ಪ್ರಧಾನಿ ಉದ್ಘಾಟಿಸಲಿದ್ದಾರೆ ಅಬುಧಾಬಿಯ ಮೊದಲ ದೇಗುಲ

06:20 AM Feb 01, 2018 | Harsha Rao |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಫೆ.9ರಿಂದ 12ರವರೆಗೆ ಪ್ಯಾಲೆಸ್ತೀನ್‌, ಯುಎಇ, ಒಮಾನ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಅವರು ಅಬುಧಾಬಿಯಲ್ಲಿ ನಿರ್ಮಿಸಲಾಗಿರುವ ಮೊದಲ ಹಿಂದೂ ದೇಗುಲವನ್ನು ಉದ್ಘಾಟಿಸಲಿದ್ದಾರೆ. 

Advertisement

2015ರಲ್ಲಿ ಪ್ರಧಾನಿ ಮೋದಿ ಮೊದಲ ಬಾರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಸರಕಾರ 20 ಸಾವಿರ ಚದರ ಮೀಟರ್‌ ಸ್ಥಳವನ್ನು ನೀಡುವುದಾಗಿ ಅಲ್‌ ವತಾº ಎಂಬಲ್ಲಿ ನೀಡುವುದಾಗಿ ವಾಗ್ಧಾನ ಮಾಡಿ, ನಡೆದುಕೊಂಡಿತ್ತು. ಸರಕಾರ ಜಮೀನು ನೀಡಿದ್ದರೂ, ಖಾಸಗಿ ವತಿಯಿಂದಲೇ ದೇಗುಲ ನಿರ್ಮಾಣವಾಗಿದೆ. ಯುಎಇಯಲ್ಲಿ 26 ಲಕ್ಷ ಮಂದಿ ಭಾರತೀಯರು ವಾಸಿಸುತ್ತಿದ್ದಾರೆ. ಅಂದರೆ ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇ.30ರಷ್ಟು ಮಂದಿ ಭಾರತೀಯರೇ ಆಗಿದ್ದಾರೆ. 

ಫೆ.11ರಂದು ದುಬೈನಲ್ಲಿ ನಡೆಯಲಿರುವ ಆರನೇ ವಿಶ್ವ ಸರಕಾರಿ ಸಮ್ಮೇಳನ (ವರ್ಲ್ಡ್ ಗವರ್ನ್ ಮೆಂಟ್‌ ಸಮಿಟ್‌)ನಲ್ಲಿ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ಯುಎಇ ಪ್ರವಾಸಕ್ಕೆ ಮೊದಲು ಪ್ರಧಾನಿ ಫೆ.9ರಂದು ಜೋರ್ಡಾನ್‌ ಮೂಲಕ ಪ್ಯಾಲೆಸ್ತೀನ್‌ಗೆ ತೆರಳಿ ದ್ವಿಪಕ್ಷೀಯ ಸಂಬಂಧ  ಸೇರಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಜೋರ್ಡಾನ್‌ನಲ್ಲಿ ಅವರು ದೊರೆ ಎರಡನೇ ಅಬ್ದುಲ್ಲಾರನ್ನು ಭೇಟಿ ಮಾಡುವ ಸಾಧ್ಯತೆ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next