ಯಾವುದೇ ಅನುಮತಿ ಇಲ್ಲದೆ ನರೇಂದ್ರ ಮೋದಿ ಅವರು ಲಕ್ಷಾಂತರ ಕಾರ್ಯಕರ್ತರೊಂದಿಗೆ ವರ್ಚುವಲ್ ಸಂವಾದ ನಡೆಸಿದ್ದಾರೆ. ಈ ಬಗ್ಗೆ ಆಯೋಗದ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದಾಗ, ಅನುಮತಿ ಪಡೆದಿಲ್ಲದಿರುವುದು ಗೊತ್ತಾಗಿದೆ. ಇದು ಚುನಾವಣ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
Advertisement
50 ಲಕ್ಷ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ವರ್ಚುವಲ್ ಆಗಿ ಸಂವಾದ ನಡೆಸಿರುವುದಾಗಿ ಸ್ವತಃ ಬಿಜೆಪಿ ಅಧಿಕೃತವಾಗಿ ಹೇಳಿಕೊಂಡಿದೆ. ಅದು ಎಲ್ಲೆಡೆ ಪ್ರಕಟವಾಗಿದೆ. ಆದರೆ ಇದಕ್ಕೆ ಆಯೋಗದಿಂದ ಯಾವುದಾದರೂ ಅನುಮತಿ ಪಡೆಯಲಾಗಿದೆಯೇ? ಸಂವಾದ ಆಯೋಜನೆ ಪ್ರಾಯೋಜಕತ್ವ ಯಾರದ್ದು? ಅದರ ವೆಚ್ಚ ಯಾರ ಖಾತೆಗೆ ಜಮೆ ಮಾಡಲಾಗುತ್ತದೆ? ನಿಯಮ ಉಲ್ಲಂಘನೆಯಾಗಿದ್ದರೆ ಯಾರ ವಿರುದ್ಧ ಪ್ರಕರಣ ದಾಖಲಿಸುತ್ತೀರಿ ಮುಂತಾದ ಹಲವಾರು ಪ್ರಶ್ನೆಗಳಿಗೆ ಬಿಜೆಪಿ ಮತ್ತು ಆಯೋಗ ಉತ್ತರ ನೀಡಬೇಕಿದೆ ಎಂದು ಹೇಳಿದರು.