Advertisement

ಗುಜರಾತ್‌ನಲ್ಲಿ ಮೋದಿ “ಏಕತಾ ದಿನ’ಆಚರಣೆ

10:08 AM Nov 01, 2019 | Sriram |

ನವದೆಹಲಿ: ಗುರುವಾರ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 144ನೇ ಜನ್ಮದಿನವಾಗಿದ್ದು, ಈ ಹಿನ್ನೆಲೆಗೆ ಗುಜರಾತ್‌ಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಕೇವಾಡಿಯಾದಲ್ಲಿರುವ ಏಕತಾ ಪ್ರತಿಮೆಗೆ ಪುಷ್ಪಾಂಜಲಿ ಸಲ್ಲಿಸಲಿದ್ದಾರೆ.

Advertisement

ಜತೆಗೆ, ಏಕತಾ ದಿವಸ ಪರೇಡ್‌ನ‌ಲ್ಲಿ ಭಾಗವಹಿಸಲಿರುವ ಮೋದಿ, ನಂತರ ತಂತ್ರಜ್ಞಾನ ಪ್ರದರ್ಶನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ನಾಗರಿಕ ಸೇವೆಗಳ ಪ್ರೊಬೆಷರನಿಗಳ ಜೊತೆಗೆ ಸಂವಾದವನ್ನೂ ನಡೆಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಅಂದರೆ 2014ರಿಂದ ಅಕ್ಟೋಬರ್‌ 31 ಅನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಜತೆಗೆ, ವಿವಿಧ ಕ್ಷೇತ್ರಗಳ ಜನರು ಆ ದಿನ ಏಕತೆಗಾಗಿ ಓಟ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ದೇಶದ ಮೊದಲ ಗೃಹ ಮಂತ್ರಿ ಪಟೇಲರಿಗೆ ಗೌರವ ಸಲ್ಲಿಸಲಾಗುತ್ತಿದೆ. ಅದರಂತೆ, ಗುರುವಾರವೂ ದೇಶಾದ್ಯಂತ ಹಲವು ಕಾರ್ಯಕ್ರಮಗಳು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next