Advertisement

ಬುದ್ಧನ ನಿರ್ವಾಣ ಸ್ಥಳದಲ್ಲಿ ಮೋದಿಯಿಂದ ಅಂ.ರಾ. ವಿಮಾನ ನಿಲ್ದಾಣ ಉದ್ಘಾಟನೆ

11:01 PM Oct 19, 2021 | Team Udayavani |

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಬುಧವಾರ ಉತ್ತರಪ್ರದೇಶದ ಕುಶಿನಗರದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ.

Advertisement

260 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸುಂದರ ನಿಲ್ದಾಣದ ಮೂಲಕ ದೇಶೀಯ ವಿಮಾನಗಳೂ ಕಾರ್ಯಾಚರಿಸಲಿವೆ. ಬುಧವಾರ ಬೆಳಗ್ಗೆ 10ಕ್ಕೆ ಶ್ರೀಲಂಕಾದ ಕೊಲಂಬೊದಿಂದ ಕುಶಿನಗರಕ್ಕೆ ವಿಮಾನವೊಂದು ಬಂದಿಳಿಯಲಿದೆ. ಅನಂತರ ಉದ್ಘಾಟನೆ ನೆರವೇರಲಿದೆ.

ಕೊಲಂಬೊದಿಂದ ಬರಲಿರುವ ಈ ವಿಮಾನದಲ್ಲಿ ವಿವಿಧ ದೇಶಗಳ ಬೌದ್ಧ ಭಿಕ್ಷುಗಳು, ರಾಯಭಾರಿಗಳು, ಇತರೆ ಗಣ್ಯರೂ ಸೇರಿ ಒಟ್ಟು 100 ಮಂದಿ ಇರುತ್ತಾರೆ. ವಿಮಾನ ನಿಲ್ದಾಣದ ಉದ್ಘಾಟನೆಯ ನಂತರ ಬುದ್ಧನ ಪರಿನಿರ್ವಾಣ ಸ್ತೂಪದಲ್ಲಿ ನಡೆಯುವ ಅಭಿಧಮ್ಮ ದಿನಾಚರಣೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ.

ಬೌದ್ಧ ಭಿಕ್ಷುಗಳು ಮೂರು ತಿಂಗಳು ನಿರಂತರ ಧ್ಯಾನ, ಇತರೆ ಆಧ್ಯಾತ್ಮಿಕ ಚಟುವಟಿಕೆಗಳನ್ನು ಮುಗಿಸುವ ದಿನಕ್ಕೆ ಅಭಿಧಮ್ಮ ಎನ್ನುತ್ತಾರೆ. ಈ ಕಾರ್ಯಕ್ರಮದಲ್ಲಿ ಬೋಧಿ ವೃಕ್ಷ ನೆಟ್ಟು ನಂತರ ಬೌದ್ಧ ಸೂತ್ರಗಳ ತಾಳೆಗರಿ ಗ್ರಂಥಗಳು, ಅಜಂತಾ ಗುಹೆಗಳಲ್ಲಿ ರಚಿತವಾಗಿರುವ ಚಿತ್ರಗಳ ಪ್ರದರ್ಶನವನ್ನು ಮೋದಿ ವೀಕ್ಷಿಸಲಿದ್ದಾರೆ.

ಇದನ್ನೂ ಓದಿ:100ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

Advertisement

ಇದಾದ ನಂತರ 280 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ರಾಜಕೀಯ ಮೆಡಿಕಲ್‌ ಕಾಲೇಜನ್ನು ಉದ್ಘಾಟಿಸಲಿದ್ದಾರೆ.

ಕುಶಿನಗರ ಬುದ್ಧನ ನಿರ್ವಾಣ ಸ್ಥಳ
ಉತ್ತರಪ್ರದೇಶದ ಕುಶಿನಗರ ಜಿಲ್ಲೆಯ ಮುಖ್ಯ ನಗರ ಕುಶಿನಗರ. ಇದು ಬೌದ್ಧ ಧರ್ಮದ ಸ್ಥಾಪಕ ಗೌತಮ ಬುದ್ಧನ ದೇಹಬಿಟ್ಟ ಸ್ಥಳ. ಇದನ್ನೇ ಬೌದ್ಧರು ಮಹಪರಿನಿರ್ವಾಣ ಸ್ಥಳ ಎಂದು ಕರೆಯುತ್ತಾರೆ. ಆದ್ದರಿಂದಲೇ ಇಲ್ಲಿ ಬುದ್ಧನ ಸುಂದರ ಸ್ತೂಪ ಅಥವಾ ದೇವಸ್ಥಾನವಿದೆ. ಇದು ಬೌದ್ಧರ ಪಾಲಿಗೆ ಪವಿತ್ರ ಯಾತ್ರಾಸ್ಥಳ.

Advertisement

Udayavani is now on Telegram. Click here to join our channel and stay updated with the latest news.

Next