ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕೋವಿಡ್-19 ಮತ್ತು ವ್ಯಾಕ್ಸಿನೇಷನ್ ಪರಿಸ್ಥಿತಿ ಕುರಿತು ಬೆಳಿಗ್ಗೆ 10.30 ಕ್ಕೆ ಉನ್ನತ ಸರ್ಕಾರಿ ಅಧಿಕಾರಿಗಳು ಭಾಗವಹಿಸುವ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಕೋವಿಡ್ ವೈರಸ್ ನ B.1.1.529 ರೂಪಾಂತರಿ ಬಗ್ಗೆ ಹೆಚ್ಚುತ್ತಿರುವ ಜಾಗತಿಕ ಕಾಳಜಿಯ ನಡುವೆ ಈ ಸಭೆ ನಡೆಸಲಾಗುತ್ತಿದೆ.
B.1.1.529 ರೂಪಾಂತರವು ಈ ವಾರದ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾಯಿತು. ಬೋಟ್ಸ್ವಾನಾ, ಹಾಂಗ್ ಕಾಂಗ್, ಇಸ್ರೇಲ್ ಮತ್ತು ಬೆಲ್ಜಿಯಂನಲ್ಲಿ – 50 ರೂಪಾಂತರಿ ಪ್ರಕರಣಗಳನ್ನು ಹೊಂದಿದೆ.
ಇದನ್ನೂ ಓದಿ:ಹಲವು ದೇಶಗಳಲ್ಲಿ ಕಟ್ಟೆಚ್ಚರ; ಹೊಸ ರೂಪಾಂತರಿಯಿಂದ ಆತಂಕ
ಹೀಗಾಗಿ ಕೆಲವು ದೇಶಗಳಲ್ಲಿ ಕಟ್ಟೆಚ್ಚರದ ಸ್ಥಿತಿ ಘೋಷಣೆ ಮಾಡಲಾಗಿದೆ. ಜತೆಗೆ ಆಫ್ರಿಕಾ ಖಂಡದ ರಾಷ್ಟ್ರಗಳಿಂದ ವಿಮಾನಯಾನಕ್ಕೆ ನಿಷೇಧ, ಗಡಿಗಳಲ್ಲಿ ಮತ್ತೆ ಬಿಗಿ ತಪಾಸಣೆ ಕ್ರಮವನ್ನು ಶುರು ಮಾಡಿವೆ.
ಫ್ರಾನ್ಸ್ 48 ಗಂಟೆಗಳ ಕಾಲ ಆಫ್ರಿಕಾ ಖಂಡದಿಂದ ವಿಮಾಯಾನ ನಿಷೇಧಿಸಿ ಆದೇಶ ಹೊರಡಿಸಿದೆ. ಐರೋಪ್ಯ ಒಕ್ಕೂಟದ ರಾಷ್ಟ್ರಗಳು, ಸಿಂಗಾಪುರ, ಯುನೈಟೆಡ್ ಕಿಂಗ್‌ಡಮ್, ಜಪಾನ್ ಸರಕಾರಗಳು ಆಫ್ರಿಕಾ ಖಂಡದ ದಕ್ಷಿಣ ಆಫ್ರಿಕಾ, ನಮೀಬಿಯಾ, ಜಿಂಬಾಬ್ವೆ, ಬೋಟ್ಸ್‌ವಾನಾ, ಲೆಸೆತೋ ಮತ್ತು ಎಸ್ವೆತಿನಿಗಳಿಂದ ವಿಮಾನ ಹಾರಾಟ ನಿಷೇಧಿಸಿವೆ.