Advertisement

ತೌಖ್ತೇ ಅವಾಂತರ : ಎಚ್ಚರವಹಿಸಿ : ಕರಾವಳಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪ್ರಧಾನಿ ಕರೆ

05:52 PM May 17, 2021 | Team Udayavani |

ನವ ದೆಹಲಿ : ತೌಖ್ತೇ ಚಂಡಮಾರುತದ ಹಿನ್ನಲೆಯಲ್ಲಿ ದೇಶದ ಕರಾವಳಿ ರಾಜ್ಯಗಳ ಪರಿಸ್ಥಿತಿಯನ್ನು ನಿಭಾಯಿಸುವಂತೆ ಸೂಚಿಸಿ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದಾರೆ.

Advertisement

ಚಂಡ ಮಾರುತ ಭೀಕರ ಸ್ವರೂಪವನ್ನು ಕಂಡು ಕೊಂಡಿದ್ದು, ಗುಜಾರಾತ್ ನನ್ನು ಇಂದು ತಲುಪುವ ಸಾಧ್ಯತೆ ಹವಾಮಾನ ಇಲಾಖೆ ಎಚ್ಚರ ನೀಡಿತ್ತು.

ಚಂಡಮಾರುತದ ಸಿದ್ಧತೆ ಮತ್ತು ಪ್ರತಿಕ್ರಿಯೆಯ ಬಗ್ಗೆ ಚರ್ಚಿಸಲು ಪ್ರಧಾನಿ ಇಂದು ಮಹಾರಾಷ್ಟ್ರ, ಗುಜರಾತ್ ಮತ್ತು ಗೋವಾದ ಮುಖ್ಯಮಂತ್ರಿಗಳನ್ನು, ದಮನ್ ಮತ್ತು ದೀಯು ಲೆಫ್ಟಿನೆಂಟ್ ಗವರ್ನರ್ ಅವರೊಂದಿಗೆ ಮಾತನಾಡಿದ್ದಾರೆ.

ಇದನ್ನೂ ಓದಿ : ಬಬಲೇಶ್ವರ ಕ್ಷೇತ್ರದ ಕಾರಜೋಳ, ತಿಕೋಟಾದಲ್ಲಿ ಕೋವಿಡ್ ಕೇರ್ ಕೇಂದ್ರ: ಎಂ.ಬಿ.ಪಾಟೀಲ್

ಇನ್ನು, ಇಂದು(ಸೋಮವಾರ, ಮೇ. 17) ಮಧ್ಯಾಹ್ನ 2.30 ರ ಸುಮಾರಿಗೆ, ಚಂಡಮಾರುತವು  ಮುಂಬಯಿಯಿಂದ ಪಶ್ಚಿಮ-ವಾಯುವ್ಯಕ್ಕೆ 165 ಕಿಲೋಮೀಟರ್ ಮತ್ತು ದೀಯುವಿನ ಆಗ್ನೇಯಕ್ಕೆ 130 ಕಿಲೋಮೀಟರ್ ದೂರದಲ್ಲಿತ್ತು. ಇಂದು ರಾತ್ರಿ 10 ರಿಂದ ರಾತ್ರಿ 11 ಸುಮಾರಿಗೆ ದೀಯುವೀನ ಪೂರ್ವಕ್ಕೆ ಪೊರ್ಬಂದರ್ ಮತ್ತು ಮಾಹುವಾ ನಡುವೆ ಗುಜರಾತ್ ಕರಾವಳಿ ದಾಟಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

Advertisement

ಮುಂಬೈನ ಕೆಲವು ಕರಾವಳಿ ಭಾಗಗಳಲ್ಲಿ ಇಂದು ಭಾರಿ ಗಾಳಿ ಮತ್ತು ಮಳೆ ಕಾಣಿಸಿಕೊಂಡ ಪರಿಣಾಮ ಮಹಾರಾಷ್ಟ್ರ ಸರ್ಕಾರ ಹೈ ಅಲರ್ಟ್ ಘೋಷಣೆ ಮಾಡಿದೆ. ಮತ್ತು ಎನ್ ಡಿ ಆರ್ ಎಫ್ ತಮಡವನ್ನು ನಿಯೋಜಿಸಲಾಗಿದೆ.

ಗುಜರಾತ್ ನ ತಗ್ಗು ಕರಾವಳಿಯ ತಗ್ಗು ಪ್ರದೇಶಗಳಲ್ಲಿ ಇದ್ದ ಜನರನ್ನು ಅಪಾಯದ ಮುನ್ನೆಚ್ಚರಿಕೆಯಿಂದ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಇನ್ನು, ಚಂಡಮಾರುತದ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ ರಾಜ್ಯ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್,   ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಿಂದ 12,000 ಕ್ಕೂ ಹೆಚ್ಚು ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.  ಸ್ಥಳಾಂತರಗೊಂಡವರಲ್ಲಿ ರಾಯಗಡದಲ್ಲಿ 8,380 ಜನರು, ರತ್ನಾಗಿರಿಯಲ್ಲಿ 3,896, ಮತ್ತು ಸಿಂಧುದುರ್ಗ್ ಜಿಲ್ಲೆಗಳಲ್ಲಿ 144 ಜನರನ್ನು ಸ್ಥಳಾಂತರಿಸಲಾಗಿದೆ.

“ಕೊಂಕಣದ ಕೆಲವು ಭಾಗಗಳಲ್ಲಿನ ರೈತರು ಪರಿಸ್ಥಿತಿಯಿಂದಾಗಿ ನಷ್ಟವನ್ನು ಅನುಭವಿಸಿದ್ದಾರೆ. ಸ್ಪಾಟ್ ತಪಾಸಣೆ ಪ್ರಾರಂಭವಾಗಿದೆ” ಎಂದು  ಮಲಿಕ್ ತಿಳಿಸಿದ್ದಾರೆ.

ಇನ್ನು,  ಮೇ 16 ರ ರಾತ್ರಿ ಚಂಡಮಾರುತದಿಂದಾಗಿ ಸಮುದ್ರಗಳ ನಡುವೆ ಕೊಚ್ಚಿ ಕರಾವಳಿಯಲ್ಲಿ 35 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸಿಲುಕಿದ್ದ 12 ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್ ತಿಳಿಸಿದೆ.

ಇದನ್ನೂ ಓದಿ : ಪೇಟಿಎಂ ನೀಡುತ್ತಿದೆ ಭರ್ಜರಿ ಕ್ಯಾಶ್ ಬ್ಯಾಕ್ : LPG ಬುಕ್ಕಿಂಗ್ ಮಾಡಿ 800 ರೂ ಉಳಿಸಿ

Advertisement

Udayavani is now on Telegram. Click here to join our channel and stay updated with the latest news.

Next