ನವದೆಹಲಿ : 21 ವರ್ಷಗಳ ಹಿಂದೆ ಅಕ್ಟೋಬರ್ 7 ರಂದು ನರೇಂದ್ರ ಮೋದಿ ಅವರು ಗುಜರಾತ್ ನ ಮುಖ್ಯಮಂತ್ರಿ ಆಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ದಿನವನ್ನು ಬಿಜೆಪಿ ನಾಯಕರು ಸೇರಿ ಹಲವು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.
ಕಳೆದ 21 ವರ್ಷಗಳ ಪಿಎಂ ಮೋದಿ ಸಾರ್ವಜನಿಕ ಸೇವೆಯಲ್ಲಿ ಮತ್ತು ಸರ್ಕಾರದ ಮುಖ್ಯಸ್ಥರಾಗಿ ಭಾರತದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ತಂದಿದ್ದಾರೆ ಎಂದು ಹಲವು ಮಂದಿ ಬಿಜೆಪಿ ಸಂಸದರು, ಸಚಿವರುಗಳು ಮತ್ತು ನಾಯಕರು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ವಂದೇ ಭಾರತ್ ರೈಲಿಗೆ ಢಿಕ್ಕಿಯಾದ ಎಮ್ಮೆಗಳ ಮಾಲೀಕರ ವಿರುದ್ಧ ಎಫ್ ಐಆರ್
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 2002 ರ ಗುಜರಾತಿನ ವಿಧಾನಸಭಾ ಚುನಾವಣೆಗೆ ಬಿಜೆಪಿಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡು, ಪಕ್ಷದ ಉನ್ನತ ಹುದ್ದೆಯಲ್ಲಿದ್ದ, ಶಾಸಕರಲ್ಲದೇ ಇದ್ದ ನರೇಂದ್ರ ಮೋದಿಯವರಿಗೆ ನಾಯಕತ್ವ ನೀಡಿ 7 ಅಕ್ಟೋಬರ್ 2001 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಕಾರಣರಾಗಿದ್ದರು.
24 ಫೆಬ್ರವರಿ 2002 ರಂದು ರಾಜ್‌ಕೋಟ್ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಜಯಗಳಿಸುವ ಮೂಲಕ ಮೋದಿ ಅವರು ಮೂಲಕ ಗುಜರಾತ್ ವಿಧಾನಸಭಾ ಸದಸ್ಯರಾಗಿದ್ದರು.ಆ ಬಳಿಕ ರಾಜಕೀಯದಲ್ಲಿ ಹಿಂತಿರುಗಿ ನೋಡದ ಮೋದಿ ಅವರು ಯಾವುದೇ ಚುನಾವಣೆಯಲ್ಲಿ ಸೋಲು ಕಾಣದೆ ಪೂರ್ಣ ಬಹುಮತದಿಂದ ಎರಡು ಬಾರಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಬರಲು ಕಾರಣವಾಗಿದ್ದರು.