Advertisement

ಶ್ರೀಲಂಕಾ ಲಂಕಾ ಹಂಗಾಮಿ ಅಧ್ಯಕ್ಷರಾಗಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅಧಿಕಾರಿ ಸ್ವೀಕಾರ

11:17 PM Jul 15, 2022 | Team Udayavani |

ಕೊಲೊಂಬೊ: ಶ್ರೀಲಂಕಾ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಅವರು ಶುಕ್ರವಾರ ದೇಶದ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Advertisement

ದೇಶ ಬಿಟ್ಟು ಪರಾರಿಯಾಗಿರುವ ಗೋಟಬಯಾ ರಾಜಪಕ್ಸ ಅವರ ಉತ್ತರಾಧಿಕಾರಿಯನ್ನು ನೇಮಕ ಮಾಡುವವರೆಗೂ ವಿಕ್ರಮಸಿಂಘೆ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ಇದೇ ವೇಳೆ, ಶ್ರೀಲಂಕಾದಲ್ಲಿ ಈವರೆಗೆ ಅಧ್ಯಕ್ಷರನ್ನು ಉದ್ದೇಶಿಸಿ ಮಾತನಾಡುವಾಗ ಬಳಸುತ್ತಿದ್ದ “ಹಿಸ್‌ ಎಕ್ಸಲೆನ್ಸಿ’ ಎಂಬ ಗೌರವಸೂಚಕ ಪದದ ಬಳಕೆಯನ್ನು ನಿರ್ಬಂಧಿಸಿ ನೂತನ ಅಧ್ಯಕ್ಷ ವಿಕ್ರಮಸಿಂಘೆ ಆದೇಶ ಹೊರಡಿಸಿದ್ದಾರೆ. ಜತೆಗೆ, “ಅಧ್ಯಕ್ಷೀಯ ಧ್ವಜ’ದ ಬಳಕೆಯನ್ನೂ ನಿಷೇಧಿಸಿದ್ದಾರೆ. ವ್ಯಕ್ತಿಯನ್ನು ರಕ್ಷಿಸುವ ಬದಲು ದೇಶವನ್ನು ರಕ್ಷಿಸುವುದೇ ನಮ್ಮ ಆದ್ಯತೆಯಾಗಬೇಕು ಎಂದಿದ್ದಾರೆ.

ಮಹಿಂದಾ ದೇಶ ತೊರೆಯುವಂತಿಲ್ಲ: ಲಂಕಾ ಸುಪ್ರೀಂ ಕೋರ್ಟ್‌ ನಲ್ಲಿ ರಾಜಪಕ್ಸ ಕುಟುಂಬಕ್ಕೆ ಮತ್ತಷ್ಟು ಹಿನ್ನಡೆಯಾಗಿದೆ. ಗೋಟಬಯಾ ಅವರು ದೇಶ ತೊರೆದ ಬೆನ್ನಲ್ಲೇ, ಅವರ ಇಬ್ಬರು ಸಹೋದರರಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಮತ್ತು ಮಾಜಿ ಹಣಕಾಸು ಸಚಿವ ಬೇಸಿಲ್‌ ರಾಜಪಕ್ಸ ಅವರು ದೇಶ ಬಿಟ್ಟು ಹೋಗುವಂತಿಲ್ಲ ಎಂದು ಕೋರ್ಟ್‌ ಶುಕ್ರವಾರ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next