Advertisement

G20 Summit: ಜಾಗತಿಕ ವಿಶ್ವಾಸದ ಕೊರತೆ ತೊಡೆದುಹಾಕಿ, ಬಾಂಧವ್ಯ ಮೂಡಿಸಬೇಕಾಗಿದೆ: ಪ್ರಧಾನಿ

03:27 PM Sep 09, 2023 | Team Udayavani |

ನವದೆಹಲಿ: ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನ ಭಾರತದ ಆಂತರಿಕ ಮತ್ತು ಬಾಹ್ಯ ಕ್ಷೇತ್ರವನ್ನು ಪ್ರತಿನಿಧಿಸುವ ಸಂಕೇತವಾಗಿ ಹೊರಹೊಮ್ಮಲಿದೆ. ನಾವು ಜೀವಿಸುತ್ತಿರುವ ಈ ಕಾಲಘಟ್ಟದಲ್ಲಿ ದೀರ್ಘಕಾಲದ ಸಮಸ್ಯೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

Advertisement

ಇದನ್ನೂ ಓದಿ:MLA: ಹುಟ್ಟುಹಬ್ಬದ ಪ್ರಯುಕ್ತ ಜೀವಂತ ಹಾವನ್ನೇ ಕುತ್ತಿಗೆಗೆ ಸುತ್ತಿಕೊಂಡು ಬಂದ ಶಾಸಕ.!

ನವದೆಹಲಿಯಲ್ಲಿ ಐತಿಹಾಸಿಕ ಎರಡು ದಿನಗಳ ಕಾಲದ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿ ಶನಿವಾರ (ಸೆಪ್ಟೆಂಬರ್‌ 09) ಪ್ರಧಾನಿ ಮೋದಿ ಮಾತನಾಡಿದರು.

ಮಾನವೀಯತೆ ನೆಲೆಯೊಂದಿಗೆ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಇದನ್ನು ಸಾಕಾರಗೊಳಿಸಲು ನಾವು ಎಲ್ಲರ ಜತೆಗೂಡಿ, ಎಲ್ಲರ ಏಳಿಗೆ, ಎಲ್ಲರ ವಿಶ್ವಾಸ ಮತ್ತು ಎಲ್ಲರ ಪ್ರಯತ್ನ(ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ , ಸಬ್‌ ಕಾ ಪ್ರಯಾಸ್)ದ ಮೂಲಕ ಸಾಧ್ಯವಾಗಲಿದೆ ಎಂದು ಪ್ರಧಾನಿ ಹೇಳಿದರು.

Advertisement

ಕೋವಿಡ್‌ ಸಂದರ್ಭದಲ್ಲಿ ಜಗತ್ತು ವಿಶ್ವಾಸದ ಕೊರತೆಯನ್ನು ಎದುರಿಸಿತ್ತು. ನಂತರ ಉಕ್ರೇನ್‌ ಯುದ್ಧದಿಂದಾಗಿ ಅದು ಇನ್ನಷ್ಟು ಹೆಚ್ಚಾಯಿತು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಜಾಗತಿಕ ಒಳಿತಿಗಾಗಿ ಹೆಜ್ಜೆಹಾಕಬೇಕಾಗಿದೆ. ಅದಕ್ಕಾಗಿ ಜಾಗತಿಕ ವಿಶ್ವಾಸದ ಕೊರತೆಯನ್ನು ಬಾಂಧವ್ಯದ ವಿಶ್ವಾಸದ ಮೂಲಕ ಜೋಡಿಸಬೇಕಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಜಿ20 ಶೃಂಗಸಭೆಯ ಅಧ್ಯಕ್ಷತೆ ಭಾಷಣಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು, ಮೊರೊಕ್ಕೊದಲ್ಲಿ ಸಂಭವಿಸಿದ ಭೀಕರ ಭೂಕಂಪ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದು, ಘಟನೆಯಲ್ಲಿ ಗಾಯಗೊಂಡವರು ಎಲ್ಲರೂ ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುವೆ. ಅಲ್ಲದೇ ಕಷ್ಟದ ಸಂದರ್ಭವನ್ನು ಎದುರಿಸುತ್ತಿರುವ ಮೊರೊಕ್ಕೊಗೆ ಎಲ್ಲಾ ರೀತಿಯ ನೆರವು ನೀಡಲು ಭಾರತ ಸಿದ್ಧವಾಗಿದೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಗಮನ ಸೆಳೆದಿದ್ದು:

*ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಗಣ್ಯರಿಗೆ ಹಸ್ತಲಾಘವ ಮಾರಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತಿಸಿದ ಸಂದರ್ಭದಲ್ಲಿ ಪ್ರಧಾನಿಯವರ ಹಿಂಬದಿಯಲ್ಲಿ 13ನೇ ಶತಮಾನದ ಒಡಿಶಾದ ಪುರಿಯ ಕೊನಾರ್ಕ್‌ ಸೂರ್ಯ ದೇವಾಲಯದ ಕಲ್ಲಿನ ಚಿತ್ರ ಪ್ರತಿನಿಧಿಸುವ ಫೋಟೊ ಎಲ್ಲರ ಗಮನ ಸೆಳೆದಿತ್ತು.

*ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿ20 ಶೃಂಗಸಭೆ ನಡೆಯಲಿರುವ ಭಾರತ್‌ ಮಂಟಪದ ಬಳಿ ಗಣ್ಯರನ್ನು ಸ್ವಾಗತಿಸಲು ಬಂದ ಸಂದರ್ಭದಲ್ಲಿ ಅವರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋಲ್‌ ಜತೆಗಿದ್ದರು.

*ಜಿ20 ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕುಳಿತಿದ್ದ ನೇಮ್‌ ಪ್ಲೇಟ್‌ ನಲ್ಲಿ ಇಂಡಿಯಾ ಬದಲು ಭಾರತ್‌ ಎಂದು ನಮೂದಿಸಿರುವುದು ಗಮನಸೆಳೆಯುವಂತೆ ಮಾಡಿದೆ.

*ಜಿ20 ಶೃಂಗಸಭೆಗೆ ಜರ್ಮನ್‌ ಚಾನ್ಸಲರ್‌ ಓಲಾಫ್‌ ಸ್ಕೋಲ್ಜ್‌, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರೊನ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌, ಟರ್ಕಿ ಅಧ್ಯಕ್ಷ ರಿಸಿಪ್‌ ತಯ್ಯಿಪ್‌ ಎರ್ಡೊಗಾನ್‌, ಕೆನಡಾ ಪ್ರಧಾನಿ ಜಸ್ಟೀನ್‌ ಟ್ರುಡೋ, ಇಟಲಿಯ ಜಾರ್ಜಿಯಾ ಮೆಲೋನಿ, ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್‌ ಸುಕ್‌ ಯೊಲ್‌ ಮತ್ತು ಬ್ರೆಜಿಲ್‌ ಅಧ್ಯಕ್ಷ ಲೂಯಿಜ್‌ ಇನಾಸಿಯೊ ಲೂಲಾ ಡಿಸಿಲ್ವಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

*ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಗೈರು ಹಾಜರಾಗಿದ್ದರು.

*ಈ ಬಾರಿ ಭಾರತಕ್ಕೆ ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನ ಸಿಕ್ಕಿದ್ದು, ಇದು ಪ್ರತಿವರ್ಷ ಜಿ20 ಸದಸ್ಯ ರಾಷ್ಟ್ರಗಳಿಗೆ ಅಧ್ಯಕ್ಷ ಸ್ಥಾನ ಹಸ್ತಾಂತರವಾಗುತ್ತಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next