Advertisement

ಪ್ರಧಾನಿಯಿಂದ ವಿಶ್ವದ ಅತೀ ದೊಡ್ಡ ಶಿವನ ಮುಖದ ಪ್ರತಿಮೆ ಅನಾವರಣ

06:12 PM Feb 24, 2017 | Sharanya Alva |

ಕೊಯಂಬತ್ತೂರು: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ತಮಿಳುನಾಡಿನ ಕೊಯಂಬತ್ತೂರಿನ ವೆಳ್ಳಯನಗಿರಿಯಲ್ಲಿನ ಈಶಾ ಯೋಗ ಕೇಂದ್ರದಲ್ಲಿನ ಆದಿಯೋಗಿ ಅಥವಾ ಶಿವನ ಬೃಹತ್ ಮುಖವನ್ನು(112 ಅಡಿ ) ಲೋಕಾರ್ಪಣೆಗೊಳಿಸಿದರು.

Advertisement

ಇದು ಭೂಮಂಡಲದಲ್ಲಿಯೇ ಶಿವನ ಅತ್ಯಂತ ಬೃಹತ್ ಎತ್ತರದ ಮುಖ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸದ್ಗುರು ಜಗ್ಗಿ ವಾಸುದೇವ್ ಅವರ ಈಶಾ ಫೌಂಡೇಶನ್ ನಿಂದ ನಿರ್ಮಾಣವಾದ ಈ ಬೃಹತ್ ಶಿವನ ಮುಖವನ್ನು ಸಂಜೆ ಪ್ರಧಾನಿ ಮೋದಿ ಅವರು ಅನಾವರಣಗೊಳಿಸಿದರು. ಯೋಗದ ಮೂಲ ವಿವೇಚನೆಗೆ ಶಿವನೇ ಕಾರಣ. ಆದಿಯೋಗಿ ಪ್ರತಿಮೆ ನಿರ್ಮಾಣ ಮಾಡಲು ಸುಮಾರು 2.5 ವರ್ಷಗಳ ಕಾಲ ಹಿಡಿದಿತ್ತು. ಈ ಬೃಹತ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಜನಸ್ತೋಮವೇ ನೆರೆದಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ತಮಿಳುನಾಡು, ಕೇರಳ ಗಡಿಭಾಗ ಹಾಗೂ ಕೊಯಂಬತ್ತೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಿಗದಿಯಂತೆ  5.45ಕ್ಕೆ ಸೂಲೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಅವರು ಬಂದಿಳಿದಿದ್ದರು. ಬಳಿಕ ಅಲ್ಲಿಂದ ಹೆಲಿಕ್ಯಾಪ್ಟರ್ ನಲ್ಲಿ ಕೊಯಂಬತ್ತೂರಿಗೆ ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next