Advertisement

ಗಣರಾಜ್ಯೋತ್ಸವದಲ್ಲಿ ಜಮ್ ನಗರದ “ಪಾಗ್ಡಿ”ಯಲ್ಲಿ ಕಂಗೊಳಿಸಿದ ಪ್ರಧಾನಿ

12:56 PM Jan 26, 2021 | Team Udayavani |

ನವದೆಹಲಿ: ಪ್ರಧಾನಿ ಮೋದಿ ಎಂದಿಗೂ ಶಿಸ್ತು ಮತ್ತು ವಿಶೇಷತೆಯಿಂದ ಕಾಣಿಸಿಕೊಳ್ಳುತ್ತಾರೆ. ದಿನನಿತ್ಯ ತೊಡುವ ಧಿರಿಸಿನಿಂದಲೇ ಅವರು ಎಂದಿಗೂ ವಿಶೇಷ  ಆಕರ್ಷಿತರಾಗಿರುತ್ತಾರೆ. ಸ್ವಾತಂತ್ರ್ಯೋತ್ಸವ ಅಥವಾ ಗಣರಾಜ್ಯೋತ್ಸವದ ಸಂದರ್ಭದಲ್ಲಂತೂ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುವುದರ  ಮೂಲಕ  ಇಡೀ ದೇಶವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಾರೆ.

Advertisement

ಓದಿ : ಟಿಕ್ ಟಾಕ್ ಸೇರಿ ಚೀನಾ ಮೂಲದ 59 ಅಪ್ಲಿಕೇಶನ್ ಗಳಿಗೆ ಶಾಶ್ವತ ನಿಷೇಧ

ಹೌದು, 72 ನೇ ಗಣರಾಜ್ಯೋತ್ಸವದ ಸಮಾರಂಭದಲ್ಲೂ ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣ ಬಣ್ಣದ ಪೇಟಗಳನ್ನು ಧರಿಸುವ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.

ಇಂದಿನ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು   ಪ್ರಕಾಶಮಾನವಾದ ಕೇಸರಿ ಬಣ್ಣದ ಪೇಟವನ್ನು ಧರಿಸಿದ್ದಾರೆ. ಬೂದು ಬಣ್ಣದ ಜಾಕೆಟ್ ಮತ್ತು ಕೆನೆ ಹಾಲಿನ ಬಣ್ಣದ ಶಾಲು ಹೋಂದಿದ ಧಿರಿಸಿಗೆ ಪೇಟವು ಸುಂದರವಾಗಿ ಕಾಣಿಸುತ್ತಿತ್ತು.

ಪ್ರಧಾನಿ ತೊಟ್ಟ ಪೇಟದ ವಿಶೇಷತೆ ಏನು..?

Advertisement

ಈ ವರ್ಷ ಗಣರಾಜ್ಯೋತ್ಸವಕ್ಕೆ ಪ್ರಧಾನಿ ಧರಿಸಿದ್ದ ಪೇಟವು ಗುಜರಾತ್‌ ನ ಜಮ್  ನಗರದ ರಾಜ ಮನೆತನದಿಂದ ಗಣರಾಜ್ಯೋತ್ಸವದ ಸಮಾರಂಭಕ್ಕಾಗಿ ಗೌರವ ಪೂರ್ವಕವಾಗಿ ಉಡುಗೊರೆಯಾಗಿ ಕೊಟ್ಟಿರುವುದಾಗಿದೆ.  ಈ ಕೇಸರಿ  ವರ್ಣರಂಜಿತ ಪೇಟವನ್ನು ‘ಪಾಗ್ಡಿ’ ಅಥವಾ ‘ಹಲಾರಿ ಪಾಗ್’ (ರಾಯಲ್ ಹೆಡ್ ಪೇಟ) ಎಂದು ಕೂಡ ಹೇಳಲಾಗುತ್ತದೆ. ಉದ್ದವಾದ  ಹತ್ತಿ ಬಟ್ಟೆಯಿಂದ ಇದನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ.

ಕಳೆದ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ಕೇಸರಿ ಬಂದೆಜ್  ಶಿರಸ್ತ್ರಾಣ ಧರಿಸಿದ್ದರು. 2019 ರಲ್ಲಿ ಅವರು ಹಳದಿ ಮಿಶ್ರಿತ ಕಿತ್ತಳೆ ಬಣ್ಣದ ಪೇಟವನ್ನು ಧರಿಸಿದ್ದರು.

ಓದಿ :  ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ್ದ ಇಬ್ಬರ ಬಂಧನ!

 

 

 

Advertisement

Udayavani is now on Telegram. Click here to join our channel and stay updated with the latest news.

Next