ಹೊಸದಿಲ್ಲಿ: ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಬೆಳಿಗ್ಗೆ ಲೇಹ್ ಗೆ ಭೇಟಿ ನೀಡಿದರು. ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಜ. ಬಿಪಿನ್ ರಾವತ್ ಮತ್ತು ಭೂ ಸೇನಾ ಪಡೆ ಮುಖ್ಯಸ್ಥ ಜ. ಎಂ. ಎನ್ ನರವಣೆ ಪ್ರಧಾನಿಗಳ ಸಾಥ್ ನೀಡಿದ್ದಾರೆ.
ಗಾಲ್ವಾನ್ ಕಣಿವೆಯಲ್ಲಿ ಇತ್ತೀಚೆಗೆ ನಡೆದಿದ್ದ ಭಾರತ- ಚೀನಾ ಸಂಘರ್ಷದ ನಂತರ ಗಡಿ ಭಾಗದ ಸ್ಥಿತಿಗತಿಯ ಮಾಹಿತಿಯನ್ನು ಪ್ರಧಾನಿ ಪಡೆಯಲಿದ್ದಾರೆ.
ಸೇನಾ ಪಡೆಗಳ ಮುಖ್ಯಸ್ಥ ಜ. ಬಿಪಿನ್ ರಾವತ್ ಅವರು ಇಂದು ಭೇಟಿ ನೀಡುವ ಕಾರ್ಯಕ್ರಮ ಈ ಮೊದಲೇ ನಿಗಧಿಯಾಗಿತ್ತು. ಆದರೆ ಪ್ರಧಾನಿ ಮೋದಿಯವರು ಅಚ್ಚರಿಯ ಭೇಟಿ ನೀಡಿದ್ದಾರೆ.
ಇತ್ತೀಚಿಗೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಲಡಾಖ್ ಗಡಿಯಲ್ಲಿ ನಮ್ಮ ನೆಲ ಕಬಳಿಸಲು ಬಂದಿದ್ದ ಚೀನಾ ಸೇನೆಗೆ ತಕ್ಕ ಉತ್ತರ ನೀಡಲಾಗಿದೆ ಎಂದು ಹೇಳಿದ್ದರು. ನಮ್ಮ ಸೈನಿಕರ ಬಲಿದಾನ ವ್ಯರ್ಥವಾಗಲು ನಾವು ಎಂದಿಗೂ ಬಿಡುವುದಿಲ್ಲ ಎಂದಿದ್ದರು.
ಪ್ರಧಾನಿ ಮೋದಿ ಲೇಹ್ ಭೇಟಿ ಭಾರತೀಯ ಸೈನಿಕರಿಗೆ ಹೊಸ ಹುರುಪು ನೀಡಿದೆ. ಮುಂದಿನ ದಿನಗಳಲ್ಲಿ ಯೋಜನೆಗೆ ಇದು ಪುಷ್ಠಿಯಾಗಲಿದೆ ಎನ್ನಲಾಗಿದೆ.