ನವದೆಹಲಿ: ಹನುಮ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಏಪ್ರಿಲ್ 16) ಗುಜರಾತ್ ನ ಮೋರ್ಬಿಯಲ್ಲಿ 108 ಅಡಿ ಎತ್ತರದ ಭಗವಾನ್ ಹನುಮಾನ್ ಪ್ರತಿಮೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಅನಾವರಣಗೊಳಿಸಿದರು.
ಇದನ್ನೂ ಓದಿ:ಬೊಮ್ಮಾಯಿ ಬಗ್ಗೆ ನಾನು ಏನೋ ಅಂದುಕೊಂಡಿದ್ದೆ, ಆದರೆ…: ಡಿ ಕೆ ಶಿವಕುಮಾರ್
ಹನುಮಂತನ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ಹಿಂದೆ ನಾವು ಶಿಮ್ಲಾದಲ್ಲಿ ಇಂತಹ ಬೃಹತ್ ಹನುಮಾನ್ ವಿಗ್ರಹವನ್ನು ನೋಡುತ್ತಿದ್ದೇವು. ಇಂದು ಮೋರ್ಬಿಯಲ್ಲಿ ಎರಡನೇ ಪ್ರತಿಮೆ ಸ್ಥಾಪಿಸಲಾಗಿದೆ. ಅಷ್ಟೇ ಅಲ್ಲ ರಾಮೇಶ್ವರಂ ಮತ್ತು ಪಶ್ಚಿಮಬಂಗಾಳದಲ್ಲಿಯೂ ಹನುಮಾನ್ ಪ್ರತಿಮೆಯನ್ನು ಸ್ಥಾಪಿಸುವಂತೆ ಹೇಳಿರುವುದಾಗಿ ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ತಿಳಿಸಿದರು.
ಇದು ಕೇವಲ ಹನುಮಾನ್ ಜೀ ಪ್ರತಿಮೆ ಸ್ಥಾಪನೆಯ ನಿರ್ಣಯವಲ್ಲ, ಆದರೆ ಇದು “ಏಕ್ ಭಾರತ್, ಶ್ರೇಷ್ಠ” ಭಾರತ್ ಸಂಕಲ್ಪದ ಭಾಗವಾಗಿದೆ ಎಂದು ಪ್ರಧಾನಿ ಹೇಳಿದರು.
ಹನುಮಾನ್ ಜೀ ಚಾರ್ ಧಾಮ್ ಯೋಜನೆಯ ಭಾಗವಾಗಿ ದೇಶದ ನಾಲ್ಕು ಕಡೆಗಳಲ್ಲಿ ಹನುಮಾನ್ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧಿಸಿದ್ದು, ಇದರಲ್ಲಿ ಎರಡು ಪ್ರತಿಮೆಗಳು ಸ್ಥಾಪನೆಯಾದಂತಾಗಿದೆ. ಇಂದು ಗುಜರಾತ್ ನ ಮೋರ್ಬಿಯಲ್ಲಿ ಹನುಮಾನ್ ಜೀ ಪ್ರತಿಮೆ ಅನಾವರಣಗೊಂಡಿದ್ದು, 2010ರಲ್ಲಿ ಹಿಮಾಚಲ್ ಪ್ರದೇಶದ ಶಿಮ್ಲಾದಲ್ಲಿ ಮೊದಲ ಹನುಮಾನ್ ಜೀ ಪ್ರತಿಮೆ ಸ್ಥಾಪಿಸಲಾಗಿತ್ತು ಎಂದು ವರದಿ ತಿಳಿಸಿದೆ.