Advertisement

ಮಹಿಳಾ ದಿನಾಚರಣೆ: ಪ್ರಧಾನಿ ಮೋದಿಯ ಟ್ವಿಟ್ಟರ್ ಖಾತೆಯನ್ನು ನಿಭಾಯಿಸಲಿರುವ ‘ನಾರಿ ಶಕ್ತಿ’ಯರು

10:11 AM Mar 09, 2020 | Mithun PG |

ನವದೆಹಲಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ನಾರಿ ಶಕ್ತಿ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಮಹಿಳಾ ಸಾಧಕರಿಗೆ ಇಂದು ತಮ್ಮ ಟ್ವಿಟ್ಟರ್ ಖಾತೆಯನ್ನು ನಿಭಾಯಿಸುವ ಅವಕಾಶವನ್ನೂ ನೀಡಲಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ರಾಷ್ಟ್ರಪತಿ ಭವನದಲ್ಲಿ ಭಾನುವಾರ  ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ನಾರಿ ಶಕ್ತಿ ಪ್ರಶಸ್ತಿಗಳನ್ನು ನೀಡಿದ ನಂತರ ಪ್ರಧಾನಿ ಮೋದಿ ಅವರು ನಾರಿ ಶಕ್ತಿ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಲಿದ್ದಾರೆ. ತದನಂತರದಲ್ಲಿ ಪ್ರಧಾನಿ ಮೋದಿಯವರ ಟ್ವಿಟ್ಟರ್ ಖಾತೆಯನ್ನು ಮಹಿಳಾ ಸಾಧಕರು ನಿರ್ವಹಿಸಲಿದ್ದಾರೆ ಎಂದು ಪ್ರಧಾನಿ ಕಚೇರಿ ಶನಿವಾರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿತ್ತು.

ಮಾರ್ಚ್ 3ರಂದೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳೆಯರನ್ನು ಪ್ರೇರೇಪಿಸಲು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿರುವ  ತಮ್ಮ ಖಾತೆಗಳನ್ನು  ನಿಭಾಯಿಸಲು ಅವಕಾಶ ಮಾಡಿಕೊಡುವುದಾಗಿ ಪ್ರಧಾನಿ ಘೋಷಿಸಿದ್ದರು.

ಫೇಸ್‌ ಬುಕ್‌ನಲ್ಲಿ 44 ಮಿಲಿಯನ್. ಟ್ವಿಟರ್‌ ನಲ್ಲಿ 53 ಮಿಲಿಯನ್ ಮತ್ತು ಇನ್ ಸ್ಟಾಗ್ರಾಂ ನಲ್ಲಿ 35.2 ಮಿಲಿಯನ್‌ ಗಿಂತಲೂ ಹೆಚ್ಚು ಫಾಲೋವರ್ಸ್ ಗಳನ್ನು ಹಾಗೂ ಯುಟ್ಯೂಬ್‌ನಲ್ಲಿ 4.5 ಮಿಲಿಯನ್ ಸಬ್ ಸ್ಕ್ರೈಬರ್ಸ್ ಅನ್ನು ಪ್ರಧಾನಿ ಮೋದಿ ಹೊಂದಿದ್ದಾರೆ.  ಜಾಗತಿಕ ಮಟ್ಟದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಅತೀ ಹೆಚ್ಚು ಫಾಲೋಯಿಂಗ್ ಮಾಡುವ ರಾಜಕಾರಣಿಗಳಲ್ಲಿ ಒಬ್ಬರು ಎಂದು ಪ್ರಧಾನಿ ಗುರುತಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next