Advertisement

ನಾಳೆ ಪ್ರಧಾನಿ ಮೋದಿ ಉಪವಾಸ

09:10 AM Apr 11, 2018 | Team Udayavani |

ಹೊಸದಿಲ್ಲಿ: ಬಜೆಟ್‌ ಅಧಿವೇಶನದ ಎರಡನೇ ಅವಧಿ ವಿಪಕ್ಷಗಳ ಗದ್ದಲದಿಂದಾಗಿಯೇ ಸಂಪೂರ್ಣ ವ್ಯರ್ಥವಾಗಿದ್ದಕ್ಕೆ ಪ್ರತಿಭಟನಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ದಿಲ್ಲಿಯಲ್ಲಿ ಉಪವಾಸ ನಡೆಸಲಿದ್ದಾರೆ.

Advertisement

ಮೋದಿ ಜತೆಗೆ ಬಿಜೆಪಿಯ ಎಲ್ಲ ಸಂಸದರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉಪವಾಸ ನಡೆಸಲಿದ್ದಾರೆ. ಹುಬ್ಬಳ್ಳಿಯಲ್ಲಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರೂ ಅಂದು ಉಪವಾಸ ಕೈಗೊಳ್ಳಲಿದ್ದಾರೆ. ಉಪವಾಸ ಸತ್ಯಾಗ್ರಹ ನಡೆಸಿದರೂ ಮೋದಿ ಅವರ ದೈನಂದಿನ ಕೆಲಸಗಳಿಗೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ. ಅಧಿಕಾರಿಗಳು ಹಾಗೂ ಜನರ ಭೇಟಿ ನಡೆಸುವುದು, ಮಾತುಕತೆ ಹಾಗೂ ಕಡತ ವಿಲೇವಾರಿ ಪ್ರಕ್ರಿಯೆಗಳನ್ನು ಎಂದಿನಂತೆ ಅವರು ನಿರ್ವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next