Advertisement

ಪಂಜಾಬ್ ಕೇಸರಿ, ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತರಾಯ್ 155ನೇ ಜನ್ಮ ಜಯಂತಿ

09:58 AM Jan 29, 2020 | Nagendra Trasi |

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ, ಪಂಜಾಬ್ ಕೇಸರಿ ಎಂದೇ ಜನಪ್ರಿಯರಾಗಿದ್ದ ಲಾಲಾ ಲಜ ಪತ ರಾಯ್ ಅವರ 155ನೇ ಜನ್ಮ ದಿನಾಚರಣೆ ದೇಶಾದ್ಯಂತ ಮಂಗಳವಾರ ಆಚರಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಲಾಲಾ ಲಜಪತ ರಾಯ್ ಅವರಿಗೆ ಗೌರವ ನಮನ ಸಲ್ಲಿಸಿದರು.

Advertisement

ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಲಾಲ ಲಜಪತರಾಯ್ ಅವರ ಕೊಡುಗೆ ಅಪಾರವಾದದ್ದು. ಭಾರತ ಯಾವಾಗಲೂ ನಿಮ್ಮಿಂದ ಪ್ರಭಾವಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು,  ಭಾರತ ಮಾತೆಯ ಧೀರ ಪುತ್ರನಿಗೊಂದು ಸಲಾಂ, ಪಂಜಾಬ್ ಕೇಸರಿ ಲಾಲಾ ಲಜಪತರಾಯ್ ಅವರ 155ನೇ ಜನ್ಮ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಅವರ ತ್ಯಾಗವನ್ನು ನೆನಪಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ದೇಶದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ ರಾಯ್ ಅವರ ಜನ್ಮ ಜಯಂತಿ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೌರವ ಸಲ್ಲಿಸಿದರು. ನಿಜವಾದ ದೇಶಭಕ್ತ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನಿಗೆ ತಲೆಬಾಗಿ ನಮಿಸುವೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಲಾಲ ಲಜಪತ ರಾಯ್ ಅವರು 1928ರ ನವೆಂಬರ್ 17ರಂದು ಹೃದಯಘಾತಕ್ಕೊಳಗಾಗಿ ವಿಧಿವಶರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next