Advertisement
ಪ್ರಧಾನಿ ಮೋದಿ ಅವರಿಂದು ನೇಪಾಲದ ಉನ್ನತ ರಾಜಕೀಯ ನಾಯಕರೊಂದಿಗೆ ಮಾತುಕತೆ ನಡೆಸಿ ದ್ವಿಪಕ್ಷೀಯ ಬಾಂಧವ್ಯಗಳನ್ನು ಮತ್ತಷ್ಟು ಸದೃಢಗೊಳಿಸಿ ಮೇಲ್ಮಟ್ಟಕ್ಕೆ ಒಯ್ಯುವ, ಉಭಯ ದೇಶಗಳ ವಿಶಾಸಾರ್ಹತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚರ್ಚೆ ನಡೆಸುವರು.
WATCH: PM Narendra Modi offers prayers at Janki Temple in #Nepal‘s Janakpur pic.twitter.com/a0alC1YvCV— ANI (@ANI) May 11, 2018Related Articles
Advertisement
”ಮಾತಾ ಜಾನಕಿಯ ಜನ್ಮ ಸ್ಥಳಕ್ಕೆ ಭೇಟಿ ನೀಡಲು ಒದಗಿರುವ ಈ ಅವಕಾಶದಿಂದ ನಾನು ಧನ್ಯನಾಗಿದ್ದೇನೆ. ಭಾರತ ಮತ್ತು ನೇಪಾಲ ಉಭಯ ದೇಶಗಳ ನಡುವಿನ ರಾಮಾಯಣ ವರ್ತುಲವನ್ನು ನಿರ್ಮಿಸುವಲ್ಲಿ ಜತೆಗೂಡಿ ಶ್ರಮಿಸಬೇಕಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ನೇಪಾಲದ ಪ್ರಧಾನಿ ಕೆ ಪಿ ಶರ್ಮಾ ಓಲಿ ಅವರು ಪ್ರಧಾನಿ ಮೋದಿ ಅವರ ಜತೆಗಿದ್ದರು. ರಾಮಾಯಣ ವರ್ತುಲ ಯೋಜನೆಯನ್ನು ಭಾರತೀಯ ಪ್ರವಾಸೋದ್ಯಮ ಸಚಿವಾಲಯವು ಹಮ್ಮಿಕೊಂಡಿದ್ದು ಇದು ಭಾರತ – ನೇಪಾಲ ಧಾರ್ಮಿಕ ಪ್ರವಾಸೋದ್ಯಮಕ್ಕೆ ಇಂಬು ನೀಡಲಿದೆ.