Advertisement

ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆ

07:49 PM Sep 27, 2022 | Team Udayavani |

ಟೋಕಿಯೋ: ಸರ್ಕಾರಿ ಗೌರವಗಳೊಂದಿಗೆ ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಕ್ರಿಯೆ ಮಂಗಳವಾರ ನಡೆಯಿತು.

Advertisement

ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌, ಜಪಾನ್‌ ಪ್ರಧಾನಿ ಫ‌ುಮಿಯೊ ಕಿಶಿದಾ, ಜಪಾನ್‌ ರಾಜಕುಮಾರ ಅಕಿಶಿನೊ ಸೇರಿದಂತೆ ಜಗತ್ತಿನ ಹಲವು ನಾಯಕರು ಅಂತಿಮ ನಮನ ಸಲ್ಲಿಸಿದರು.

ಅಂತ್ಯಕ್ರಿಯೆಯಲ್ಲಿ 20 ದೇಶಗಳ ಸರ್ಕಾರಿ ಮುಖ್ಯಸ್ಥರು ಸೇರಿದಂತೆ 100ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು ಭಾಗವಹಿಸಿದ್ದರು.

ಚುನಾವಣೆ ಹಿನ್ನೆಲೆಯಲ್ಲಿ ಜು.8ರಂದು ದಕ್ಷಿಣ ಜಪಾನ್‌ನ ನಾರಾ ನಗರದಲ್ಲಿ ತಮ್ಮ ಡೆಮಾಕ್ರಾಟಿಕ್‌ ಲಿಬರಲ್‌ ಪಕ್ಷದ ಅಭ್ಯರ್ಥಿಯೊಬ್ಬರ ಪರ ಬಹಿರಂಗ ಪ್ರಚಾರದ ಸಂದರ್ಭದಲ್ಲಿ ಶಿಂಜೋ ಅಬೆ(67) ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.

ರಾಜಮನೆತದವರು ಅಲ್ಲದಿದ್ದರೂ ಶಿಂಜೋ ಅಬೆ ಅವರಿಗೆ ಸರ್ಕಾರಿ ಅಂತ್ಯಕ್ರಿಯೆ ನಡೆಸಿರುವುದು ಹಾಗೂ ಅಂತ್ಯಕ್ರಿಯೆಗೆ ಬರೋಬ್ಬರಿ 94 ಕೋಟಿ ರೂ. ವೆಚ್ಚ ಮಾಡಿರುವುದಕ್ಕೆ ಪ್ರತಿಪಕ್ಷಗಳು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.

Advertisement


ಕಿಶಿದಾ- ಮೋದಿ ಮಾತುಕತೆ:
ಇದೇ ವೇಳೆ ಪ್ರಧಾನಿ ಮೋದಿ ಅವರು ಜಪಾನ್‌ ಪ್ರಧಾನಿ ಫ‌ುಮಿಯೊ ಕಿಶಿದಾರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇಂಡೋ-ಪೆಸಿಫಿಕ್‌ ಪ್ರದೇಶದ ಮುಕ್ತ ವ್ಯಾಪಾರ-ವಹಿವಾಟು ಹಾಗೂ ಭಾರತ ಮತ್ತು ಜಪಾನ್‌ ನಡುವೆ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದರು. “ಅಬೆ ಒಬ್ಬ ಶ್ರೇಷ್ಠ ವ್ಯಕ್ತಿ. ಶಿಂಜೋ ಅಬೆ ಅವರ ಪತ್ನಿಗೆ ಭಾರತೀಯರ ಪರವಾಗಿ ಸಂತಾಪ ಸೂಚಿಸುತ್ತೇನೆ. ಅಬೆ ಅವರ ಕನಸಿನಂತೆ ಭಾರತ ಮತ್ತು ಜಪಾನ್‌ ನಡುವಿನ ಬಾಂಧವ್ಯ ಮತ್ತಷ್ಟು ಗಟಿಯಾಗುವ ನಿಟ್ಟಿನಲ್ಲಿ ಶ್ರಮಿಸಲಿದ್ದೇವೆ,’ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next