ಹೊಸದಿಲ್ಲಿ : ಈಚೆಗೆ ಮಾಂಡ್ಲಾದಲ್ಲಿ ನಡೆದಿದ್ದ ಪಂಚಾಯತ್ ರಾಜ್ ದಿವಸ್ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ತಾನು ತೊಟ್ಟಿದ್ದ ಚಿನ್ನದ ಬಣ್ಣದ ಹಾರವನ್ನು ಬಹುವಾಗಿ ಇಷ್ಟಪಟ್ಟು ”ಅದನ್ನು ನನಗೆ ಕೊಡುವಿರಾ” ಎಂದು ಕೇಳಿಕೊಂಡಿದ್ದ ಧನಬಾದ್ ಐಐಟಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ರಬೇಶ್ ಕುಮಾರ್ ಸಿಂಗ್ ಅವರ ಕೋರಿಕೆಯನ್ನು ಮನ್ನಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸಂತೋಷದಿಂದ ‘ಚಿನ್ನ’ದ ಹಾರವನ್ನು ಆತನಿಗೆ ಕಳುಹಿಸಿಕೊಟ್ಟು ಅಭಿಮಾನಿಗಳ ಮೇಲೆ ತನಗಿರುವ ಪ್ರೀತಿ, ಸೌಹಾರ್ದತೆ, ವಾತ್ಸಲ್ಯವನ್ನು ಮರೆದಿದ್ದಾರೆ.
“ಮಾಂಡ್ಲಾದಲ್ಲಿ ನಡೆದಿದ್ದ ಪಂಚಾಯತ್ ರಾಜ್ ದಿವಸ್ ಕಾರ್ಯಕ್ರಮದಲ್ಲಿ ನೀವು ಮಾಡಿರುವ ಸೊಗಸಾದ ಭಾಷಣದಿಂದ ನಾನು ತುಂಬಾ ಆಕರ್ಷಿತನಾಗಿದ್ದೇನೆ; ಹಾಗೆಯೇ ನೀವು ತೊಟ್ಟಿದ್ದ ಚಿನ್ನದ ಬಣ್ಣದ ಹಾರದಿಂದಲೂ ಬಹುವಾಗಿ ಆಕರ್ಷಿತನಾಗಿದ್ದೇನೆ; ನಾನು ನಿಮ್ಮ ಅಭಿಮಾನಿ, ನನ್ನ ಆಸೆಯೇನೆಂದರೆ ನೀವು ತೊಟ್ಟಿದ್ದ ಚಿನ್ನದ ಬಣ್ಣದ ಹಾರವನ್ನು ನನಗೆ ಕೊಡಬೇಕು ಎಂಬುದೇ ಆಗಿದೆ; ದಯವಿಟ್ಟು ನನ್ನ ಆಸೆ ಪೂರೈಸುವಿರಾ ?’ ಎಂದು ರಬೇಶ್ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು.
ರಬೇಶ್ ಅವರ ಪತ್ರಕ್ಕೆ ಮರುದಿನವೇ ಉತ್ತರಿಸಿದ ಪ್ರಧಾನಿ ಮೋದಿ, “ಟ್ವಿಟರ್‌ನಲ್ಲಿ ನಿಮ್ಮ ಸಂದೇಶ ಓದಿದೆ. ನಿಮ್ಮ ಕೋರಿಕೆಯ ಪ್ರಕಾರ ನಾನು ಮಾಂಡ್ಲಾದಲ್ಲಿ ಪಂಚಾಯತ್ ರಾಜ್ ದಿವಸ್ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ತೊಟ್ಟಿದ್ದ ಚಿನ್ನದ ಬಣ್ಣದ ಹಾರವನ್ನು ಈ ಪತ್ರದೊಂದಿಗೆ ನಿಮಗೆ ಕಳುಹಿಸುತ್ತಿದ್ದೇನೆ’ ಎಂದು ಹಾರವನ್ನು ರವಾನಿಸಿದರು.
ಮೋದಿ ಅವರ ತತ್‌ಕ್ಷಣದ ಉತ್ತರಕ್ಕೆ ಅತ್ಯಾಶ್ಚರ್ಯಗೊಂಡ ರಬೇಶ್ ಕೂಡಲೇ ಟ್ಟಿಟರ್‌ನಲ್ಲಿ “ನಿಮ್ಮ ಗಿಫ್ಟ್ ನಿಂದ ನಾನು ಧನ್ಯನಾಗಿದ್ದೇನೆ. ಈ ಸುಂದರ ಹಾರಕ್ಕಾಗಿ ಮತ್ತು ನಿಮ್ಮ ಶುಭ ಸಂದೇಶಕ್ಕಾಗಿ ನನ್ನ ಧನವ್ಯಾದಗಳು’ ಎಂದು ಉತ್ತರಿಸಿದರು.
ಪ್ರಧಾನಿ ಮೋದಿ ಅವರಿಂದ ಪ್ರೀತಿಯ ಉಡುಗೊರೆಯಾಗಿ ಪಡೆದ ಚಿನ್ನದ ಬಣ್ಣದ ಹಾರವನ್ನು ರಬೇಶ್ ಕುಮಾರ್ ಸಿಂಗ್ ಅವರು ಮಧ್ಯ ಪ್ರದೇಶದಲ್ಲಿ ಈಚೆಗೆ ನಡೆದ ಸಾರ್ವಜನಿಕ ರಾಲಿಯಲ್ಲಿ ತೊಟ್ಟುಕೊಂಡು ಜನರ ಮುಂದೆಯಿಂದ ಹೆಮ್ಮೆಯಿಂದ ಪ್ರದರ್ಶಿಸಿದರು.